ಬೈಂದೂರು ಚರ್ಚ್ ಧರ್ಮಗುರುಗಳಿಗೆ ವಿದಾಯ ಕಾರ್ಯಕ್ರಮ



ಬೈಂದೂರು : ಇಲ್ಲಿನ ಹೋಲಿಕ್ರಾಸ್ ಚರ್ಚಿನಲ್ಲಿ ಕಳೆದ 7 ವರುಷಗಳಿಂದ ನಿಸ್ವಾರ್ಥ ಸೇವೆ ಸಲ್ಲಿಸಿ  ತಮ್ಮ ಮುಂದಿನ ಮಿಶನರಿ ಸೇವೆಗಾಗಿ ವರ್ಗಾವಣೆಗೊಂಡಿರುವ ಧರ್ಮಗುರು ವಂದನೀಯ ರೆ| ಫಾ| ಫ್ರಾನ್ಸಿಸ್ ಕರ್ನೆಲಿಯೊ ಅವರಿಗೆ ವಿದಾಯ ಹೇಳುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
      ಚರ್ಚ್ ಆಡಳಿತ ಮಂಡಳಿಯ ಕಾರ್ಯದರ್ಶಿ ಶ್ರೀಮತಿ ಸಿಸಿಲಿಯಾ ರೆಬೆರಿಯೊ, ಉಪಾಧ್ಯಕ್ಷರಾದ ಶ್ರೀ ಡೇನಿಯಲ್ ನಜ್ರೆತ್ ರವರು ಬೈಂದೂರು ಚರ್ಚಿನ ಸಮಸ್ತ ಜನತೆಯ ಪರವಾಗಿ ಧರ್ಮಗುರುಗಳಿಗೆ ಶಾಲು ಹೊದಿಸಿ ನೆನಪಿನ ಕಾಣಿಕೆಯನ್ನು ನೀಡಿ ಸನ್ಮಾನಿಸಿದರು.
ಕಾನ್ವೆಂಟ್ ಮುಖ್ಯಸ್ಥೆ ಸಿ| ಅಂತೋನಿಯಮ್ಮ,  ಧರ್ಮಗುರುಗಳಾದ ರೆ| ಫಾ| ಮೈಕೆಲ್ ಡಾಯಸ್ ವೇದಿಕೆಯಲ್ಲಿ ಉಪಸ್ಥತರಿದ್ದರು.
    ಈ ಸಂಧರ್ಭದಲ್ಲಿ ವಿದೇಶದಲ್ಲಿರುವ ಬೈಂದೂರು ಕಥೊಲಿಕ್ ಅಸೋಸಿಯೇಶನ್ ಪರವಾಗಿ ಕಿರಣ್ ಲೋಬೊ, ಬೈಂದೂರು ಕಥೊಲಿಕ್ ಅಸೋಸಿಯೇಶನ್ ಇದರ ಸ್ಥಾಪಕ ಅಧ್ಯಕ್ಷರಾದ ಫ್ರಾನ್ಸಿಸ್ ಮಚಾದೊ ಮುಂತಾದವರು ಧರಮಗುರುಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು.
ಯುವ ಪ್ರತಿಭಾವಂತ ಚಿತ್ರ ಕಲಾವಿದ ಶ್ರೀ ಕ್ಲೆರೆನ್ಸ್ ಫೆರ್ನಾಂಡಿಸ್ ರಚಿಸಿದ ಯೇಸು ಕ್ರೀಸ್ತನ ಚಿತ್ರವನ್ನು  ನೆನಪಿನ ಕಾಣಿಕೆಯಾಗಿ ಧರ್ಮಗುರುಗಳಿಗೆ ಹಸ್ತಾಂತರಿಸಿದರು. 

 ಕಾರ್ಯಕ್ರಮದಲ್ಲಿ  ವಿದಾಯ ಗೀತೆಯನ್ನು ಹಾಡಿ ಧರ್ಮಗುರುಗಳಿಗೆ ವಿದಾಯ ಕೋರಲಾಯಿತು. ರೊನಾಲ್ಡ್ ನಜ್ರೆತ್ ವಂದನೆ ಸಲ್ಲಿಸಿದರು, ಹೆನ್ರಿ ಲೋಬೊ ಕಾರ್ಯಕ್ರಮವನ್ನು ನಿರೂಪಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com