ಬೈಂದೂರು ಚರ್ಚಿನ ನೂತನ ಧರ್ಮಗುರುಗಳಾಗಿ ರೆ. ಫಾ. ರೊನಾಲ್ಡ್ ಅಧಿಕಾರ ಸ್ವೀಕಾರ

ಬೈಂದೂರು: ಧಾರ್ಮಿಕ ಕೇಂದ್ರಗಳ ಮುಖಂಡರು ಜನರುಗಳ ಮನಸ್ಥಿತಿಗೆ ತಕ್ಕಂತೆ ನಡೆದುಕೊಂಡಲ್ಲಿ ಅವರ ಪ್ರೀತಿ, ವಿಶ್ವಾಸ, ಗೌರವ ಮತ್ತು ಸೇವಾ ಸಹಕಾರವನ್ನು ಸಂಪೂರ್ಣವಾಗಿ ಪಡೆದುಕೊಳ್ಳುವಲ್ಲಿ ಯಶಸ್ವಯಾಗಬಹುದು ಎಂದು ಬೈಂದೂರಿನ ಹೋಲಿಕ್ರಾಸ್ ಚರ್ಚಿನ ನೂತನ ಧರ್ಮಗುರುಗಳಾಗಿ ಅಧಿಕಾರ ಸ್ವೀಕರಿಸಿದ ರೆ. ಫಾ. ರೊನಾಲ್ಡ್ ಮಿರಾಂದ ಹೇಳಿದರು.


  ಧಾರ್ಮಿಕ ವಿಧಿವಿಧಾನದಂತೆ ನಡೆದ ಕಾರ್ಯಕ್ರಮದಲ್ಲಿ ಉಡುಪಿ ಧರ್ಮಾಧ್ಯಕ್ಷ ಪ್ರತಿನಿಧಿ ರೆ. ಫಾ. ಅನಿಲ್ ಡಿಸೋಜಾ ಕುಂದಾಪುರ ರವರ ಸಮ್ಮಖದಲ್ಲಿ ಬೈಂದೂರಿನ ನಿರ್ಗಮಿತ ಧರ್ಮಗುರು ರೆ. ಫಾ. ಫ್ರಾನ್ಸಿಸ್ ಕರ್ನೆಲಿಯೋ ರವರು ಪವಿತ್ರ ಗ್ರಂಥ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು. ಇದೇ ಸಂದರ್ಭದಲ್ಲಿ ಚರ್ಚಿನ ಉಪಾಧ್ಯಕ್ಷ ಶ್ರೀ. ಡೇನಿಯಲ್ ನಜ್ರತ್ ರವರು ಸಂಸ್ಥೆಯ ದಾಖಲೆ ಪತ್ರಗಳನ್ನು ಹಸ್ತಾಂತರಿಸಿದರು. ನಂತರ ಚರ್ಚಿನ ಆಡಳಿತ ಮಂಡಳಿಯ ಎಲ್ಲಾ ಸದಸ್ಯರು ಧರ್ಮಗುರುವಿಗೆ ಸಂಪೂರ್ಣ ಸೇವಾ ಸಹಕಾರದ ಭರವಸೆ ನೀಡಿದರು.

      
  ಕಾರ್ಯಕ್ರಮದಲ್ಲಿ ಗಂಗೊಳ್ಳಿಯ ಧರ್ಮಗುರು ರೆ. ಫಾ.ಎ. ಡಿಲಿಮಾ, ತ್ರಾಸಿಯ ಅನಿಲ್ ಕರ್ನೆಲಿಯೋ, ಕಾರ್ಕಳ ಮಿಯಾರ್ ನ ರೆ. ಫಾ. ಜೆರೋಮ್ ಮೊಂತೊರೊ, ಕೊಟೇಶ್ವರದ ವಿನ್ಸೆಂಟ್ ಡಿಸೋಜ, ಪ್ರಶಾಂತ, ರೆ. ಫಾ. ಮೈಕಲ್ ಡಾಯಿಸ್ ಮತ್ತು ಮಿಯಾರ್ ಚರ್ಚ ಸಂಘ ಸಂಸ್ಥೆಯ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಹೆನ್ರಿ ಲೋಬೋ ಸ್ವಾಗತಿಸಿ. ಶ್ರೀಮತಿ ಸಿಸಿಲಿಯಾ ರೆಬೆರೋ  ವಂದಿಸಿದರು. ಸ್ಟಾನಿ ಮಾಸ್ಟರ್ ಕಾರ್ಯಕ್ರಮವನ್ನು ನಿರೂಪಿಸಿದರು.

  ಕಾರ್ಯಕ್ರಮಕ್ಕೂ ಮೊದಲು ಬೈಂದೂರಿನ ಜನತೆ ನೂತನ ಧರ್ಮಗುರುಗಳನ್ನು ಮೆರವಣಿಗೆ ಮೂಲಕ ಕರೆತಂದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com