ಪಂಜರದಲ್ಲಿ ಸಾಕಿದ ಮೀನು ಬೆಳೆ ಕಟಾವು ಮೇಳ

ಬೈಂದೂರು: ಕೇಂದ್ರೀಯ ಸಮುದ್ರ ಮೀನುಗಾರಿಕಾ ಸಂಶೋಧನಾ ಸಂಸ್ಥೆ ಮಂಗಳೂರು ಸಂಶೋಧನಾ ಕೇಂದ್ರದ ಆಶ್ರಯದಲ್ಲಿ ಪಂಜರದಲ್ಲಿ ಸಾಕಿದ ಮೀನು ಬೆಳೆ ಕಟಾವು ಮೇಳವನ್ನು ಉಪ್ಪುಂದ ಕರ್ಕಿಕಳಿಯಲ್ಲಿ ಶಾಸಕ ಕೆ. ಗೋಪಾಲ ಪೂಜಾರಿ ಉದ್ಘಾಟಿಸಿದರು.
     ನಂತರ ಶಾಸಕರು ಮಾತನಾಡಿ, ಸಮುದ್ರದಲ್ಲಿ ಮತ್ಸ್ಯಕ್ಷಾಮ ಹಾಗೂ ಹವಾಮಾನ ವೈಪರೀತ್ಯದಿಂದಾಗಿ ಮೀನುಗಾರರಿಗೆ ನಿರೀಕ್ಷಿತ ಆದಾಯ ದೊರೆಯುತ್ತಿಲ್ಲ. ಇಂತಹ ಸಂದರ್ಭದಲ್ಲಿ ಈ ನೂತನ ಯೋಜನೆಯ ಪರ್ಯಾಯ ವ್ಯವಸ್ಥೆಗಳು ಅನುಕೂಲಕರವಾಗಿದೆ. ಕರಾವಳಿ ಭಾಗದಲ್ಲಿ ಮೀನುಗಾರಿಕಾ ರಸ್ತೆಗಳು ಸಂಚಾರಕ್ಕೆ ದುಸ್ತರವಾಗಿವೆ. ಇವುಗಳ ಢಾಂಬರೀಕರಣ ಹಾಗೂ ದುರಸ್ತಿಯ ಬಗ್ಗೆ ಸರಕಾರದ ಗಮನ ಸೆಳೆದು ಅನುದಾನ ದೊರಕಿಸಿಕೊಡುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದರು.
       ಕಾರವಾರ ಪ್ರಭಾರ ವಿಜ್ಞಾನಿ ಡಾ. ಕೆ. ಕೆ. ಫಿಲಿಪೋಸ್ ಮಾತನಾಡಿ, ದೇಶದಲ್ಲಿ ಎಂಟು ಮೀನುಗಾರಿಕಾ ಸಂಶೋಧನಾ ಸಂಸ್ಥೆಗಳಿವೆ. 2007 ರಲ್ಲಿ ಈ ಯೋಜನೆ ಜಾರಿಗೆ ಬಂದಿದ್ದು, ಸಮುದ್ರ ನೀರಿನ ಸ್ವಚ್ಛತೆ ಹಾಗೂ ಮತ್ಸ್ಯಪಾಲನೆ ಬಗ್ಗೆ ಮಾಹಿತಿ, ಲಾಭಾಂಶ, ಮೀನುಗಾರಿಕೆಯ ಬಗ್ಗೆ ಹತ್ತಾರು ಚಿಂತನೆಗಳನ್ನು ಹೊಂದಿದೆ ಎಂದರು.
        ಗ್ರಾ.ಪಂ. ಅಧ್ಯಕ್ಷ ಜಗನ್ನಾಥ ಅಧ್ಯಕ್ಷತೆ ವಹಿಸಿದ್ದರು. ಕನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಆಡಳಿತ ನಿರ್ಧೇಶಕ ವಿ.ಕೆ. ಶೆಟ್ಟಿ, ಉಪನಿರ್ದೇಶಕ ಸುರೇಶ್ ಕುಮಾರ್, ಖಂಬದಕೋಣೆ ರೈತರ ಸೇವಾ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ, ಪಿ.ಎಲ್.ಡಿ. ಬ್ಯಾಂಕ್‌ನ ಉಪಾಧ್ಯಕ್ಷ ಸೋಮಶೇಖರ ಶೆಟ್ಟಿ, ವಲಯ ನಾಡದೋಣಿ ಅಧ್ಯಕ್ಷ ರಾಮಚಂದ್ರ ಖಾರ್ವಿ, ಮಾಜಿ ಅಧ್ಯಕ್ಷ ಬಿ. ಅಣ್ಣಪ್ಪ ಖಾರ್ವಿ, ತಾ.ಪಂ. ಸದಸ್ಯ ರಾಜು ಪೂಜಾರಿ, ಎಂ.ಎನ್. ಖಾರ್ವಿ, ಶಂಕರ್ ಖಾರ್ವಿ, ಮದನ್ ಕುಮಾರ್ ಉಪಸ್ಥಿತರಿದ್ದರು. ಡಾ|| ಎ.ಪಿ. ದಿನೇಶ್‌ಬಾಬು ಸ್ವಾಗತಿಸಿ, ಶ್ರೀಮತಿ ಸುಜಿತಾ ಥಾಮಸ್ ವಂದಿಸಿದರು. ಡಾ. ರಾಜೇಶ್ ಕೆ.ಎಂ. ಕಾರ್ಯಕ್ರಮ ನಿರೂಪಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com