ಸವಿತಾ ಸಮಾಜದ ಮಹಾಸಭೆ

ಬೈಂದೂರು: ಯಾವುದೇ ಸಮಾಜವು ಶೈಕ್ಷಣಿಕವಾಗಿ ಉನ್ನತ ಮಟ್ಟಕ್ಕೆ ಏರಿದಾಗ ಮಾತ್ರ ಪ್ರಗತಿ ಸಾಧ್ಯ ಅಲ್ಲದೇ ಸಂಘಟನೆಗಳು ಸ್ವಾವಲಂಬನೆಗೆ ಒತ್ತುಕೊಡುವ ಕೆಲಸವನ್ನು  ಪ್ರಾಮಾಣಿಕವಾಗಿ ಮಾಡಬೇಕು ಎಂದು ಶಾಸಕ ಕೆ. ಗೋಪಾಲ ಪೂಜಾರಿ ನುಡಿದರು.
    ಉಪ್ಪುಂದ ಶಂಕರ ಕಲಾಮಂದಿರದಲ್ಲಿ ನಡೆದ ವಲಯ ಸವಿತಾ  ಸಮಾಜದ ಮಹಾಸಭೆ ಹಾಗೂ ಪುಸ್ತಕ ಮತ್ತು ಕೊಡೆ ವಿತರಣೆ ಸಮಾರಂಭದಲ್ಲಿ ಸವಿತಾ ಸಮಾಜಬಾಂಧವರು ನೀಡಿದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು. ಈ ಬಾರಿ ಎಲ್ಲಾ ಸಮಾಜದವರು ತಮ್ಮ ಹೃದಯದಲ್ಲಿ ನಗೆ ಜಾಗ ಕೊಟ್ಟಿದ್ದಾರೆ. ಆದ್ದರಿಂದ 30 ಸಾವಿರ ಮತಗಳ ಅಂತರದಿಂದ  ಗೆದ್ದು ಬಂದಿದ್ದೇನೆ ಎಂದರಲ್ಲದೇ ಈ ಸಮಾಜದವರು ತಮಗಾಗಿ ಸಮುದಾಯ ಭವನ ನಿರ್ಮಾಣದ ಕುರಿತು ಮನವಿ ನೀಡಿದ್ದಾರೆ. ಸರಕಾರದ ಅನುದಾನದ ಮೂಲಕ ಭವನ ನಿರ್ಮಾಣಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಮತ್ತು ಪ್ರತಿಯೊಂದು ಸಮಾಜದವರಿಗೆ ಸಮುದಾಯಭವನಗಳು ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು. ಶಾಸಕನಾಗಿ ನನಗೆ ನೀಡಿದ ಈ ಮೊದಲ ಸನ್ಮಾನವನ್ನು ನಮ್ಮ ಕ್ಷೇತ್ರದ ಜನತೆಗೆ ಸಲ್ಲಿಸುತೇನೆ ಎಂದರು.
    ವಲಯ ಸವಿತಾ ಸಮಾಜದ ಅಧ್ಯಕ್ಷ ಸಂತೋಷ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧ್ಯಕ್ಷ ಬನ್ನಂಜೆ ಗೋವಿಂದ ಭಂಡಾರಿ ಸಮಾರಂಭವನ್ನು ಉದ್ಘಾಟಿಸಿದರು. ಸವಿತಾ ವಿವಿದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ನವೀನ್‌ಚಂದ್ರ ಭಂಡಾರಿ, ತಾಲೂಕು ಅಧ್ಯಕ್ಷ ಸುಭಾಶ್ ಭಂಡಾರಿ ಗುಜ್ಜಾಡಿ, ಗಂಗೊಳ್ಳಿ ವಲಯಾಧ್ಯಕ್ಷ ಮಂಜುನಾಥ ಭಂಡಾರಿ, ಸಮಾಜದ ವೃತ್ತಿಪರ ಹಿರಿಯರಾದ ಸುಬ್ಬ ಭಂಡಾರಿ ಬೈಂದೂರು ಉಪಸ್ಥಿತರಿದ್ದರು. ಕುಮಾರಿ ಅನಿತಾ ಸ್ವಾಗತಿಸಿ, ಪಲ್ಲವಿ ವಂದಿಸಿದರು. ಶಿಲ್ಪಾ ಕೆ. ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com