ಅಮೃತೇಶ್ವರಿ ದೇವಳದ ನೂತನ ಶಿಲಾ ಮುಹೂರ್ತ

ಕೋಟ: ಜೀರ್ಣೋದ್ಧಾರ ಮಾಡುವ ಭಾಗ್ಯ ಸಿಗುವುದೇ ಅಪರೂಪ. ಆದರೆ, ನಿರ್ದಿಷ್ಟ ಭಕ್ತರಿಗೆ ಜೀರ್ಣೋದ್ಧಾರದ ಪುಣ್ಯ ಕಾರ್ಯ ಕೊಡಬೇಕು ಎಂಬುದು ದೇವರ ಬಯಕೆಯಾಗಿರುತ್ತದೆ. ಈ ನಿಟ್ಟಿನಲ್ಲಿ ಶಿಥಿಲಗೊಂಡ ಹಲವು ಮಕ್ಕಳ ತಾಯಿ ಶ್ರೀ ಅಮೃತೇಶ್ವರಿ ದೇವಿ ಜೀರ್ಣೋದ್ಧಾರದ ಕಾರ್ಯಕ್ಕೆ ಮುನ್ನುಡಿಯಾಗಿದ್ದಾಳೆ ಎಂದು ಉಡುಪಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ತಿಳಿಸಿದರು.
ಅವರು ಇಲ್ಲಿನ ಶ್ರೀ ಅಮೃತೇಶ್ವರಿ ದೇವಳದ ನೂತನ ಶಿಲಾ ಮೂಹೂರ್ತ ಹಾಗೂ ಮುಷ್ಟಿ ಕಾಣಿಕೆ ಸಮರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಆರ್ಶೀರ್ವಚನ ನೀಡಿ, ಭಗವಂತನ ಪ್ರೇರಣೆಯಂತೆ ಅವರವರ ತಂದೆತಾಯಿಗಳ ಸೇವೆಯಲ್ಲಿ ಭಗವಂತನನ್ನು ಕಾಣಬಹುದು. ಹಾಗೆಯೇ ನಮ್ಮ ಮೂಲ ಸ್ಥಾನವನ್ನು ಸರಿದೂಗಿಸಿಕೊಂಡು ಹೋದಾಗ ಉಳಿದೆಲ್ಲವೂ ಸಫಲವಾಗುತ್ತದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಅಮೃತೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಆನಂದ ಸಿ. ಕುಂದರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ನಾಡೋಜ ಜಿ. ಶಂಕರ್, ಪ್ರಕೃತಿ ಪ್ರಾಡಕ್ಟ್‌ನ ಎಂ.ಆರ್. ಶೆಟ್ಟಿ, ಜಿ.ಪಂ. ಸದಸ್ಯೆ ಸುನೀತಾ ರಾಜಾರಾಮ್, ಕೋಟ ಗ್ರಾ.ಪಂ. ಅಧ್ಯಕ್ಷ ಎಂ. ಶಿವಪೂಜಾರಿ, ವೇದಮೂರ್ತಿ ಮಧುಸೂಧನ ಬಾಯರಿ, ತಾ.ಪಂ. ಸದಸ್ಯ ಜಿ. ಭರತ್ ಕುಮಾರ್ ಶೆಟ್ಟಿ, ಕಾರ್ಯನಿರ್ವಾಹಣಾಧಿಕಾರಿ ಎಚ್. ಕೃಷ್ಣಮೂರ್ತಿ ಇದ್ದರು.
ನರೇಂದ್ರ ಕುಮಾರ್ ಕೋಟ ಕಾರ್ಯಕ್ರಮ ನಿರೂಪಿಸಿ, ಚಂದ್ರಶೇಖರ್ ಆಚಾರ್ಯ ವಂದಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com