ಮುಜರಾಯಿ ಇಲಾಖೆಗೆ ಕೃಷ್ಣ ಮಠ ಸೇರ್ಪಡೆ: ಜನಾರ್ದನ ಪೂಜಾರಿ ವಿರೋಧ

ಉಡುಪಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಉಡುಪಿಯ ಕೃಷ್ಣ ದೇಗುಲವನ್ನು ಮುಜರಾಯಿ ಇಲಾಖೆಗೆ ಸೇರಿಸುವ, ಅಗ್ಗದ ಸಾರಾಯಿ ನೀಡುವ ಪ್ರಸ್ತಾಪಗಳನ್ನು ರಾಜ್ಯದ ಹಿರಿಯ ಕಾಂಗ್ರೆಸ್ ನಾಯಕ ಬಿ. ಜನಾರ್ದನ ಪೂಜಾರಿ ವಿರೋಧಿಸಿದ್ದಾರೆ. ಆದರೆ, ಹಿಂದಿನ ಬಿಜೆಪಿ ಸರ್ಕಾರದ ಗೋಹತ್ಯೆ ನಿಷೇಧ ಕಾಯ್ದೆಯನ್ನು ರದ್ದುಗೊಳಿಸಿದ ಮುಖ್ಯಮಂತ್ರಿಗಳ ನಿರ್ಧಾರವನ್ನು ಪೂಜಾರಿ ಬೆಂಬಲಿಸಿದ್ದಾರೆ.
 ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಜರಾಯಿ ಇಲಾಖೆಯಲ್ಲಿ ಈಗಾಗಲೇ ಸಾವಿರಾರು ದೇವಾಲಯಗಳಿವೆ. ಅವುಗಳ ಪರಿಸ್ಥಿತಿ ಹೇಗಿದೆ ಎಂಬುದನ್ನು ಮೊದಲು ನೋಡಿ. ಸಾಧ್ಯವಿದ್ದರೆ ಅವುಗಳ ದುಃಸ್ಥಿತಿಯನ್ನು ಸರಿ ಮಾಡಿ ಎಂದು ಮುಖ್ಯಮಂತ್ರಿಗಳಿಗೆ ಸಲಹೆ ಮಾಡಿದರು. ಸ್ವಪ್ರಸಿದ್ಧಿಯಾಗಿರುವ ಕೃಷ್ಣ ದೇಗುಲ ಅಥವಾ ಚೆನ್ನಾಗಿ ನಡೆಯುತ್ತಿರುವ ಯಾವುದೇ ದೇವಾಲಯವನ್ನು ಸರ್ಕಾರ ವಶಕ್ಕೆ ತೆಗೆದುಕೊಳ್ಳುವುದು ಅಗತ್ಯ ಇಲ್ಲ. ಹಾಗೆ ಮಾಡುವುದು ಸರ್ಕಾರದ ಸಾಧನೆಯೂ ಅಲ್ಲ. ಹೆಗ್ಗಳಿಕೆಯೂ ಅಲ್ಲ. ಸರ್ಕಾರ ಈ ದೇವಾಲಯಗಳನ್ನು ವಶಕ್ಕೆ ತೆಗೆದುಕೊಳ್ಳುವುದರ ಬಗ್ಗೆ ಯೋಚಿಸುವುದಕ್ಕಿಂತ ರಾಜ್ಯದಲ್ಲಿ ತಾಂಡವವಾಡುತ್ತಿರುವ ನೀರಿನ ಸಮಸ್ಯೆ ಬಗ್ಗೆ, ಸದ್ಯವೇ ಆರಂಭವಾಗಲಿರುವ ಶಾಲೆಗಳಿಗೆ ಬೇಕಾದ ಸೌಲಭ್ಯಗಳನ್ನು ನೀಡುವ ಬಗ್ಗೆ ಯೋಚಿಸಲಿ ಎಂದು ತಿಳಿಸಿದರು.
ಸಾರಾಯಿ ಬೇಡವೇ ಬೇಡ: ಸರ್ಕಾರ ಅಗ್ಗದ ಸಾರಾಯಿ ಪುನಃ ಆರಂಭಿಸುವ ವಿಷಯದಲ್ಲಿ ತನ್ನ ಸ್ಪಷ್ಟ ವಿರೋಧ ಇದೆ ಎಂದು ಪೂಜಾರಿ ಹೇಳಿದರು.  ಈಗಿರುವ ದುಬಾರಿ ಮದ್ಯವನ್ನು ಖರೀದಿಸುವುದು ಬಡವರಿಗೆ ಸಾಧ್ಯವಾಗುವುದಿಲ್ಲ ಎನ್ನುವ ಕಾರಣಕ್ಕೆ ಅಗ್ಗದ ಮಧ್ಯ ತಯಾರಿಕೆ ಸರಿಯಲ್ಲ. ಮದ್ಯಪಾನವನ್ನೇ ನಿಷೇಧಿಸಬೇಕು. ಆದರೆ, ಕಾನೂನಿನ ಮೂಲಕ ಅದು ಸಾಧ್ಯವಿಲ್ಲ. ಈ ವಿಷಯದಲ್ಲಿ ಜನಜಾಗೃತಿ ಮೂಡಿಸಿ ಯಶಸ್ವಿಯಾಗಿ ಮದ್ಯಪಾನ ನಿಷೇಧ ಮಾಡುತ್ತಿರುವ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಅವರಿಗೆ ನಾನು ಸೆಲ್ಯೂಟ್ ಹೊಡೆಯುತ್ತೇನೆ. ಇಂತಹ ಜನಜಾಗೃತಿ ಮೂಡಿಸುವ ಕೆಲಸ ಶಾಲೆ, ಕಾಲೇಜು, ಮಂದಿರ, ಮಸೀದಿ, ಚರ್ಚ್‌ಗಳ ಮೂಲಕ ನಡೆಯಬೇಕು ಎಂದರು.
ಈಗಾಗಲೇ ಕಾನೂನು ಇದೆ: ಗೋ ಹತ್ಯೆ ನಿಷೇಧಕ್ಕೆ ಈಗಾಗಲೇ ಹಿಂದಿನ ಸರ್ಕಾರಗಳು ಮಾಡಿರುವ ಕಾನೂನು ಇದೆ. ಹಾಗಿರುವಾಗ ಬಿಜೆಪಿ ಸರ್ಕಾರ ಹೊಸದಾಗಿ ಕಾನೂನು ಮಾಡುವ ಅಗತ್ಯ ಇರಲಿಲ್ಲ. ಆದ್ದರಿಂದ ಬಿಜೆಪಿ ಸರ್ಕಾರ ಮಾಡಿರುವ ಹೊಸ ಗೋ ಹತ್ಯೆ ಕಾಯ್ದೆಯನ್ನು ಸಿದ್ದರಾಮಯ್ಯ ಅವರು ಕೈ ಬಿಟ್ಟಿರುವುದು ಸರಿಯಾಗಿದೆ ಎಂದರು.
ಕೆಲವು ಸೀಟು ಖಾಲಿಯಾಗ್ತವೆ...
ಮುಖ್ಯಮಂತ್ರಿಗಳೇ, ಮಂತ್ರಿಗಳೇ ಜಾಗ್ರತೆಯಿಂದಿರಿ. ಸರಿಯಾಗಿ ಕೆಲಸ ಮಾಡಿ, ಇಲ್ಲದಿದ್ದರೇ ನಿಮ್ಮನ್ನು ಮಾಧ್ಯಮಗಳು ಗಮನಿಸುತ್ತಿವೆ. ತಪ್ಪು ಮಾಡಿದರೇ ಜನರು ನಿಮ್ಮನ್ನು ಬಿಡೋದಿಲ್ಲ. ನಿಮ್ಮ ಸೀಟು ಖಾಲಿ ಮಾಡಿಸುತ್ತಾರೆ... ಜಾಗೃತೆ ಎಂದು ಪೂಜಾರಿ ಮಾಧ್ಯಮಗಳ ಮೂಲಕ ಜನಪ್ರತಿನಿಧಿಗಳಿಗೆ ಎಚ್ಚರಿಕೆ ನೀಡಿದರು.
 ಈಗಾಗಲೇ ತುಂಬಾ ಜನ ಶಾಸಕರು ಮಂತ್ರಿಯಾಗುವುದಕ್ಕೆ ಕಾಯುತ್ತಿದ್ದಾರೆ. ಅವರು ಅರ್ಜೆಂಟ್ ಮಾಡುವುದು ಬೇಡ. ಸರ್ಕಾರದಲ್ಲಿ ಕೆಲವು ಸೀಟುಗಳು ಖಾಲಿಯಾಗುತ್ತವೆ. ಆಗ ಅವು ಕಾಯುತ್ತಿರುವವರಿಗೆ ಸಿಗುತ್ತವೆ. ಇನ್ನೂ ಸ್ವಲ್ಪ ಸಮಯ ಕಾಯಿರಿ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಉಡುಪಿಯ ಕೃಷ್ಣ ದೇಗುಲವನ್ನು ಮುಜರಾಯಿ ಇಲಾಖೆಗೆ ಸೇರಿಸುವ, ಅಗ್ಗದ ಸಾರಾಯಿ ನೀಡುವ ಪ್ರಸ್ತಾಪಗಳನ್ನು ರಾಜ್ಯದ ಹಿರಿಯ ಕಾಂಗ್ರೆಸ್ ನಾಯಕ ಬಿ. ಜನಾರ್ದನ ಪೂಜಾರಿ ವಿರೋಧಿಸಿದ್ದಾರೆ. ಆದರೆ, ಹಿಂದಿನ ಬಿಜೆಪಿ ಸರ್ಕಾರದ ಗೋಹತ್ಯೆ ನಿಷೇಧ ಕಾಯ್ದೆಯನ್ನು ರದ್ದುಗೊಳಿಸಿದ ಮುಖ್ಯಮಂತ್ರಿಗಳ ನಿರ್ಧಾರವನ್ನು ಪೂಜಾರಿ ಬೆಂಬಲಿಸಿದ್ದಾರೆ.
 ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಜರಾಯಿ ಇಲಾಖೆಯಲ್ಲಿ ಈಗಾಗಲೇ ಸಾವಿರಾರು ದೇವಾಲಯಗಳಿವೆ. ಅವುಗಳ ಪರಿಸ್ಥಿತಿ ಹೇಗಿದೆ ಎಂಬುದನ್ನು ಮೊದಲು ನೋಡಿ. ಸಾಧ್ಯವಿದ್ದರೆ ಅವುಗಳ ದುಃಸ್ಥಿತಿಯನ್ನು ಸರಿ ಮಾಡಿ ಎಂದು ಮುಖ್ಯಮಂತ್ರಿಗಳಿಗೆ ಸಲಹೆ ಮಾಡಿದರು. ಸ್ವಪ್ರಸಿದ್ಧಿಯಾಗಿರುವ ಕೃಷ್ಣ ದೇಗುಲ ಅಥವಾ ಚೆನ್ನಾಗಿ ನಡೆಯುತ್ತಿರುವ ಯಾವುದೇ ದೇವಾಲಯವನ್ನು ಸರ್ಕಾರ ವಶಕ್ಕೆ ತೆಗೆದುಕೊಳ್ಳುವುದು ಅಗತ್ಯ ಇಲ್ಲ. ಹಾಗೆ ಮಾಡುವುದು ಸರ್ಕಾರದ ಸಾಧನೆಯೂ ಅಲ್ಲ. ಹೆಗ್ಗಳಿಕೆಯೂ ಅಲ್ಲ. ಸರ್ಕಾರ ಈ ದೇವಾಲಯಗಳನ್ನು ವಶಕ್ಕೆ ತೆಗೆದುಕೊಳ್ಳುವುದರ ಬಗ್ಗೆ ಯೋಚಿಸುವುದಕ್ಕಿಂತ ರಾಜ್ಯದಲ್ಲಿ ತಾಂಡವವಾಡುತ್ತಿರುವ ನೀರಿನ ಸಮಸ್ಯೆ ಬಗ್ಗೆ, ಸದ್ಯವೇ ಆರಂಭವಾಗಲಿರುವ ಶಾಲೆಗಳಿಗೆ ಬೇಕಾದ ಸೌಲಭ್ಯಗಳನ್ನು ನೀಡುವ ಬಗ್ಗೆ ಯೋಚಿಸಲಿ ಎಂದು ತಿಳಿಸಿದರು.
ಸಾರಾಯಿ ಬೇಡವೇ ಬೇಡ: ಸರ್ಕಾರ ಅಗ್ಗದ ಸಾರಾಯಿ ಪುನಃ ಆರಂಭಿಸುವ ವಿಷಯದಲ್ಲಿ ತನ್ನ ಸ್ಪಷ್ಟ ವಿರೋಧ ಇದೆ ಎಂದು ಪೂಜಾರಿ ಹೇಳಿದರು.  ಈಗಿರುವ ದುಬಾರಿ ಮದ್ಯವನ್ನು ಖರೀದಿಸುವುದು ಬಡವರಿಗೆ ಸಾಧ್ಯವಾಗುವುದಿಲ್ಲ ಎನ್ನುವ ಕಾರಣಕ್ಕೆ ಅಗ್ಗದ ಮಧ್ಯ ತಯಾರಿಕೆ ಸರಿಯಲ್ಲ. ಮದ್ಯಪಾನವನ್ನೇ ನಿಷೇಧಿಸಬೇಕು. ಆದರೆ, ಕಾನೂನಿನ ಮೂಲಕ ಅದು ಸಾಧ್ಯವಿಲ್ಲ. ಈ ವಿಷಯದಲ್ಲಿ ಜನಜಾಗೃತಿ ಮೂಡಿಸಿ ಯಶಸ್ವಿಯಾಗಿ ಮದ್ಯಪಾನ ನಿಷೇಧ ಮಾಡುತ್ತಿರುವ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಅವರಿಗೆ ನಾನು ಸೆಲ್ಯೂಟ್ ಹೊಡೆಯುತ್ತೇನೆ. ಇಂತಹ ಜನಜಾಗೃತಿ ಮೂಡಿಸುವ ಕೆಲಸ ಶಾಲೆ, ಕಾಲೇಜು, ಮಂದಿರ, ಮಸೀದಿ, ಚರ್ಚ್‌ಗಳ ಮೂಲಕ ನಡೆಯಬೇಕು ಎಂದರು.
ಈಗಾಗಲೇ ಕಾನೂನು ಇದೆ: ಗೋ ಹತ್ಯೆ ನಿಷೇಧಕ್ಕೆ ಈಗಾಗಲೇ ಹಿಂದಿನ ಸರ್ಕಾರಗಳು ಮಾಡಿರುವ ಕಾನೂನು ಇದೆ. ಹಾಗಿರುವಾಗ ಬಿಜೆಪಿ ಸರ್ಕಾರ ಹೊಸದಾಗಿ ಕಾನೂನು ಮಾಡುವ ಅಗತ್ಯ ಇರಲಿಲ್ಲ. ಆದ್ದರಿಂದ ಬಿಜೆಪಿ ಸರ್ಕಾರ ಮಾಡಿರುವ ಹೊಸ ಗೋ ಹತ್ಯೆ ಕಾಯ್ದೆಯನ್ನು ಸಿದ್ದರಾಮಯ್ಯ ಅವರು ಕೈ ಬಿಟ್ಟಿರುವುದು ಸರಿಯಾಗಿದೆ ಎಂದರು.
ಕೆಲವು ಸೀಟು ಖಾಲಿಯಾಗ್ತವೆ...
ಮುಖ್ಯಮಂತ್ರಿಗಳೇ, ಮಂತ್ರಿಗಳೇ ಜಾಗ್ರತೆಯಿಂದಿರಿ. ಸರಿಯಾಗಿ ಕೆಲಸ ಮಾಡಿ, ಇಲ್ಲದಿದ್ದರೇ ನಿಮ್ಮನ್ನು ಮಾಧ್ಯಮಗಳು ಗಮನಿಸುತ್ತಿವೆ. ತಪ್ಪು ಮಾಡಿದರೇ ಜನರು ನಿಮ್ಮನ್ನು ಬಿಡೋದಿಲ್ಲ. ನಿಮ್ಮ ಸೀಟು ಖಾಲಿ ಮಾಡಿಸುತ್ತಾರೆ... ಜಾಗೃತೆ ಎಂದು ಪೂಜಾರಿ ಮಾಧ್ಯಮಗಳ ಮೂಲಕ ಜನಪ್ರತಿನಿಧಿಗಳಿಗೆ ಎಚ್ಚರಿಕೆ ನೀಡಿದರು.
 ಈಗಾಗಲೇ ತುಂಬಾ ಜನ ಶಾಸಕರು ಮಂತ್ರಿಯಾಗುವುದಕ್ಕೆ ಕಾಯುತ್ತಿದ್ದಾರೆ. ಅವರು ಅರ್ಜೆಂಟ್ ಮಾಡುವುದು ಬೇಡ. ಸರ್ಕಾರದಲ್ಲಿ ಕೆಲವು ಸೀಟುಗಳು ಖಾಲಿಯಾಗುತ್ತವೆ. ಆಗ ಅವು ಕಾಯುತ್ತಿರುವವರಿಗೆ ಸಿಗುತ್ತವೆ. ಇನ್ನೂ ಸ್ವಲ್ಪ ಸಮಯ ಕಾಯಿರಿ ಎಂದರು.

ಇತರೆ ಸುದ್ದಿಗಳು:

ಈ ಸುದ್ದಿಯನ್ನು Share ಮಾಡಿ :
 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com