ಧರ್ಮದ ಶ್ರೇಷ್ಠತೆ ಎತ್ತಿ ಹಿಡಿದದ್ದು ಹಿಂದೂ ಧರ್ಮ: ಡಾ. ಸಂತೋಷ್ ಗುರೂಜಿ


ಕುಂದಾಪುರ: ವಿಶ್ವಕ್ಕೆ ಮೊಟ್ಟ ಮೊದಲು ದಾರ್ಶನಿಕರನ್ನು ಕೊಟ್ಟ ನಾಡು ಭಾರತ. ಧರ್ಮದ ಶ್ರೇಷ್ಠತೆಯನ್ನು ಎತ್ತಿ ಹಿಡಿದ ಧರ್ಮ ಹಿಂದೂ ಧರ್ಮ. ಸನಾತನ ಹಿಂದೂ ಧರ್ಮದ ಮಹತ್ತಿಕೆ ಅರಿತು ಆಚರಿಸುವುದು ಅತಿ ಅಗತ್ಯ. ದೇವಾಲಯಗಳು ಸನಾತನತೆಯ ಸಂಕೇತ ಎಂದು ಬೆಂಗಳೂರು ಆಯುರಾಶ್ರಮದ ವಿದ್ಯಾವಾಚಸ್ಪತಿ ಡಾ. ಸಂತೋಷ ಗುರೂಜಿ ಹೇಳಿದರು.
     ಬಸ್ರೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪುನರ್ ಪ್ರತಿಷ್ಠಾಬಂಧ ಬ್ರಹ್ಮಕಲಶೋತ್ಸವ ಅಂಗವಾಗಿ ಶನಿವಾರ ಹಮ್ಮಿಕೊಂಡ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
     ಆತ್ಮ ಪರಮಾತ್ಮನ ನಡುವಿನ ಬಿಂಬದಂತಿರುವ ನಮಗೆ ಭಗವಂತನ ಆಲಯ ರಹದಾರಿ. ಬಸ್ರೂರಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರನ ದಿವ್ಯ ಸನ್ನಿಧಿಯ ಉದ್ದೀಪನದ ಮೂಲಕ ಹೊಸ ಬೆಳಕು ಹರಿದಿದೆ. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ದೇಗುಲದ ಪಾವಿತ್ರ್ಯತೆ, ಪ್ರಾಚೀನತೆ ಉಳಿಸಿಕೊಂಡು ಹೋಗುವುದು ಅತ್ಯವಶ್ಯ ಎಂದು ಅವರು ಹೇಳಿದರು.
    ಮಾಜಿ ಸಚಿವ ಅಮರನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬೈಂದೂರು ಮಾಜಿ ಶಾಸಕ ಕೆ. ಲಕ್ಷ್ಮೀನಾರಾಯಣ ಉಪಸ್ಥಿತರಿದ್ದರು. ಈ ಸಂದರ್ಭ ದಾನಿಗಳನ್ನು ಗೌರವಿಸಲಾಯಿತು. ದೇವಳದ ಆಡಳಿತ ಮೊಕ್ತೇಸರ ಬಿ.ಅಪ್ಪಣ್ಣ ಹೆಗ್ಡೆ ಸ್ವಾಗತಿಸಿದರು. ಅಧ್ಯಾಪಕ ದಿನಕರ ಆರ್. ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಶೆಟ್ಟಿಗಾರ್ ವಂದಿಸಿದರು.

ಕುಂದಾಪ್ರ ಡಾಟ್ ಕಾಂ - editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com