ಕಾಳಾವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಪ್ರೊ. ಶಂಕರ ರಾವ್ ಆಯ್ಕೆ


ಕುಂದಾಪುರ: ಕರಾವಳಿಯ ಪ್ರಸಿದ್ಧ ಸುಬ್ರಹ್ಮಣ್ಯ ಕ್ಷೇತ್ರಗಳಲ್ಲಿ ಒಂದಾದ ಕಾಳಾವರದ ಶ್ರೀ ಕಾಳಿಂಗ (ಸುಬ್ರಹ್ಮಣ್ಯ) ಮತ್ತು ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಖ್ಯಾತ ಶಿಕ್ಷಣ ತಜ್ಞ, ವಿಪ್ರ ನೇತಾರ ಪ್ರೊ. ಶಂಕರ ರಾವ್ ಕಾಳಾವರ ಅವರನ್ನು ಆಯ್ಕೆ ಮಾಡಲಾಗಿದೆ.
       ಉಡುಪಿ ಜಿಲ್ಲಾ ಧಾರ್ಮಿಕ ಪರಿಷತ್ತು ಒಂಬತ್ತು ಮಂದಿ ಸದಸ್ಯರನ್ನೊಳಗೊಂಡ ವ್ಯವಸ್ಥಾಪನಾ ಸಮಿತಿಯೊಂದನ್ನು ರಚಿಸಿದ್ದು, ಸಮಿತಿಯ ಪ್ರಥಮ ಸಭೆಯಲ್ಲಿ ಈ ಆಯ್ಕೆ ನಡೆಸಲಾಯಿತು.
 ದೇವಾಲಯದ ಆಡಳಿತಾಧಿಕಾರಿ ಎಚ್. ಕೃಷ್ಣಮೂರ್ತಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಶತಮಾನಗಳ ಇತಿಹಾಸ ಹೊಂದಿರುವ ಕಾಳಾವರ ದೆವಾಲಯ ಇದುವರೆಗೂ ಅನುವಂಶೀಯ ಆಡಳಿತ ವ್ಯವಸ್ಥೆ ಹೊಂದಿತ್ತು.
ಪ್ರಸ್ತುತ ದೇವಳದ ಅನುವಂಶೀಯ ಆಡಳಿತ ಮೊಕ್ತೇಸರರಾಗಿದ್ದ ಶಿವರಾಮ ಪುರಾಣಿಕರು ತಮ್ಮ ಹುದ್ದೆಗೆ ರಾಜಿನಾಮೆ ಸಲ್ಲಿಸಿ ನೂತನ ವ್ಯವಸ್ಥಾಪನಾ ಸಮಿತಿಯನ್ನು ರಚಿಸುವಂತೆ ಮುಜರಾಯಿ ಇಲಾಖೆಯನ್ನು ಕೋರಿದ್ದರು.
       ನೂತನ ವ್ಯವಸ್ಥಾಪನಾ ಸಮಿತಿಯ ಸದಸ್ಯರಾಗಿ ಅರ್ಚಕ ಕೆ. ಸತ್ಯನಾರಾಯಣ ಪುರಾಣಿಕ, ಸಾವಿತ್ರಿ ಕೆ. ಹೆಗಡೆ, ಕೆ. ಕೃಷ್ಣರಾಜ ಪುರಾಣಿಕ, ಕೆ.ಕೆ. ಕಾಳಾವರ್ಕರ್, ಕಲಾವತಿ ಎ. ಗಾಣಿಗ, ಗಜೇಂದ್ರ ಆಚಾರ್, ಅಜಿತ್ ಕುಮಾರ್ ಶೆಟ್ಟಿ ಮತ್ತು ಎಚ್. ದಯಾನಂದ ಹೆಗ್ಡೆ ಆಯ್ಕೆಯಾಗಿದ್ದಾರೆ ಎಂದು ಸಮಿತಿ ಪ್ರಕಟಣೆ ತಿಳಿಸಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com