ಹೆಮ್ಮಾಡಿ ರಾಮಗೆ ಮಾತಾಶ್ರೀ ಪ್ರಶಸ್ತಿ ಪ್ರದಾನ

ಪರ್ಕಳ: ಯಕ್ಷಗಾನ ರಂಗದಲ್ಲಿ ದುಡಿಯುವ, ಅಡ್ಡ ಪೆಟ್ಟಿಗೆಯವರು, ಗಣಪತಿ ಪೆಟ್ಟಿಗೆಯವರು, ಎಲೆಕ್ಟ್ರಿಶಿಯನ್, ರಂಗಸ್ಥಳ ಕೆಲಸಗಾರರು ಮುಂತಾದವರನ್ನು ವೇದಿಕೆಯಲ್ಲಿ ಗುರುತಿಸುವ ಕಾರ್ಯ ಆಗಬೇಕು. ಈ ಕೆಲಸಕ್ಕೆ ನೌಕರರ ಕೊರತೆ ಎದ್ದು ಕಾಣುತ್ತಿರುವ ಇಂಥ ಕಾಲಘಟ್ಟದಲ್ಲಿ ನೈತಿಕ ಧೈರ್ಯ ತುಂಬುತ್ತದೆ ಎಂದು ಮಣಿಪಾಲ ಎಂಐಟಿ ಪ್ರಾಧ್ಯಾಪಕ ಎಸ್.ವಿ. ಉದಯಕುಮಾರ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.
        ಅವರು ಇತ್ತೀಚೆಗೆ ಬಡಗುತಿಟ್ಟಿನ ಹಿರಿಯ ಕಲಾವಿದ ಹೆಮ್ಮಾಡಿ ರಾಮ ಅವರಿಗೆ ಅಲೆವೂರು ಶೇಖರ ಪೂಜಾರಿಯ ಪ್ರಾಯೋಜಿತ ಮಾತಾಶ್ರೀ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
       ಈ ಸಮಾರಂಭದ ಅಧ್ಯಕ್ಷತೆಯನ್ನು ವೇದಮೂರ್ತಿ ಶ್ರೀನಿವಾಸ ಉಪಾಧ್ಯಾಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗೋಳಿಗರಡಿ ಮೇಳದ ವ್ಯವಸ್ಥಾಪಕ ವಿಠಲ ಪೂಜಾರಿ, ಆಡಳಿತ ಮಂಡಳಿಯ ಗಣಪಯ್ಯ ಆಚಾರ್, ಮೋಹನ್ ಪೆರ್ಡೂರು, ಪ್ರೇಮಾನಂದ, ಮಣಿಪಾಲದ ಉದ್ಯಮಿ ಬಳ್ಕೂರು ಗೋಪಾಲ ಆಚಾರ್ಯ ಮತ್ತು ಉಡುಪಿ ನಾಗರಿಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ನಿತ್ಯಾನಂದ ವಳಕಾಡು, ಪ್ರಶಸ್ತಿಯ ಪ್ರಾಯೋಜಕ ಶೇಖರ ಪೂಜಾರಿ ಇದ್ದರು. ಕಮಲಾಕ್ಷ ಪ್ರಭು ಕಾರ್ಯಕ್ರಮ ಸಂಯೋಜಿಸಿದರು. ಬಳಿಕ ಗೋಳಿಗರಡಿ ಮೇಳದವರಿಂದ ಸಾಂಪ್ರದಾಯ ಶೈಲಿಯಲ್ಲಿ ವೀರಮಣಿ ಕಾಳಗ, ಕನಕಾಂಗಿ ಕಲ್ಯಾಣ ಯಕ್ಷಗಾನ ಪ್ರದರ್ಶನ ನೆರವೇರಿತು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com