ಸಂಕಲ್ಪ ಫ್ರೆಂಡ್ಸ್ ಯುವ ವೇದಿಕೆ ಉದ್ಘಾಟನೆ

ಕೋಟೇಶ್ವರ: ಸಮಾಜದ ಶ್ರೇಯೋಭಿವೃದ್ಧಿಗಾಗಿ ಸಂಘಟನೆಗಳ ಪಾತ್ರ ಬಹಳ ಮುಖ್ಯವಾದದದ್ದು. ಈಗಾಗಲೇ ಸಮಾಜಿಕ, ಶೈಕ್ಷಣಿವಾಗಿ ಅನೇಕ ಕಾರ್ಯಕ್ರಮಗಳನ್ನು ಸಂಕಲ್ಪ ಫ್ರೆಂಡ್ಸ್ ನೀಡಿದೆ. ಈ ನಿಟ್ಟಿನಲ್ಲಿ ಸ್ಥಾಪನೆಗೊಂಡ ಸಂಸ್ಥೆ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸಲಿ ಎಂದು ಕುಂದಾಪುರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹೇಳಿದರು.
      ಅವರು  ಹಳಅಳಿವೆಯಲ್ಲಿ ಸಂಕಲ್ಪ ಫ್ರೆಂಡ್ಸ್ ಯುವ ವೇದಿಕೆಯನ್ನು ಉದ್ಘಾಟಿಸಿ ಮಾತನಾಡಿದರು.
ಸೂರತ್ ಉದ್ಯಮಿ ಗೋಪಾಲ ಜಿ. ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಪ್ರಥಮ ದರ್ಜೆ ಗುತ್ತಿಗೆದಾರ ಮಾರ್ಕೋಡು ಸುದೀರ್ ಕುಮಾರ್ ಶೆಟ್ಟಿ, ಸಂಕಲ್ಪ ಫ್ರೆಂಡ್ಸ್ ಅಧ್ಯಕ್ಷ ಕೃಷ್ಣ ಹಳಅಳಿವೆ, ನಿವೃತ್ತ ಆರೋಗ್ಯ ನಿರೀಕ್ಷಕ ಶ್ರೀನಿವಾಸ ಗಾಣಿಗ, ಗುತ್ತಿಗೆದಾರ ಜೆ.ಪಿ. ಶೆಟ್ಟಿ, ಉದ್ಯಮಿ ಸುರೇಶ್ ಬಟ್ಟಿನ್, ಪ್ರಕಾಶ್ ಬಟ್ಟಿನ್, ಶಶಿಧರ್ ಶೆಟ್ಟಿ, ನಾರಾಯಣ ಮೊಗವೀರ, ರಾಮ ಪೂಜಾರಿ, ಸುಬ್ಬಣ್ಣ ಶೆಟ್ಟಿ, ರುಕ್ಕು ಖಾರ್ವಿ ಉಪಸ್ಥಿತರಿದ್ದರು.
     ಶಾಲಾ ಮಕ್ಕಳಿಗೆ ವಿಧ್ಯಾರ್ಥಿ ವೇತನ, ರೀಡಿಂಗ್ ಲ್ಯಾಂಪ್, ಅಂಗವಿಕಲರಿಗೆ ಸಹಾಯಧನ, ಸ್ಥಳೀಯ ಶಾಲೆಗಳಿಗೆ ಫ್ಯಾನ್ ವಿತರಣೆ ಹಾಗೂ ಮಾನಸ ಜ್ಯೋತಿ ಅಂಗವಿಕಲರ ಶಾಲೆಗೆ ಪೀಠೋಪಕರಣಗಳನ್ನು ವಿತರಿಸಲಾಯಿತು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com