ನಾಟಕ ಪ್ರದರ್ಶನ ಹಾಗೂ ಚಲನಚಿತ್ರೋತ್ಸವ-2013

ಕುಂದಾಪುರ: ಕರ್ನಾಟಕ ಪ್ರತಿಷ್ಠಿತ ರಂಗಶಾಲೆಗಳಲ್ಲೊಂದಾಗಿರುವ ಕುಂದಾಪುರದ ರಂಗ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಮೇ 25ರಿಂದ 28ರವರೆಗೆ ವರ್ಷಾಂತ್ಯದ ನಾಟಕ ಹಾಗೂ ಚಲನ ಚಿತ್ರಗಳ ಪ್ರದರ್ಶನ ನಡೆಯಲಿದೆ.
    ಮೇ. 25ರಂದು ದುಂಡಿರಾಜ್‌ ರಚನೆಯ ಕೇಂದ್ರದ ವಿದ್ಯಾರ್ಥಿಗಳು ಅಭಿನಯಿಸುವ ಸುರೇಶ್‌ ಆನಗಳ್ಳಿ ನಿರ್ದೇಶನದ ನಾಟಕ ಅಧ್ವಾನಪುರ, ಮೇ 26ರಂದು ಕೆ.ಪಿ. ಪೂರ್ಣಚಂದ್ರ ತೇಜಸ್ವಿ ರಚನೆಯ ಕಥಾಧಾರಿತ ಚಲನಚಿತ್ರ, ಗಿರೀಶ್‌ ಕಾಸರವಳ್ಳಿ ನಿರ್ದೇಶನದ ತಬರನ ಕಥೆ, ಮೇ 27ರಂದು ಅಮರೇಶ ನುಗುಡೋಣಿ ರಚಿತ ಗಿರೀಶ್‌ ಕಾಸರವಳ್ಳಿ ನಿರ್ದೇಶನದ ಚಲನಚಿತ್ರ ಪ್ರದರ್ಶನ ಕನಸೆಂಬ ಕುದುರೆಯೆನ್ನೇರಿ, ಮೇ 28ರಂದು ಮಂಗಳವಾರ, 2012-13ನೇ ಸಾಲಿನ ಆಸ್ಕರ್‌ ಪ್ರಶಸ್ತಿ ವಿಜೇತ ಆ್ಯಂಗ್‌ ಲೀ ನಿರ್ದೇಶನದ ಚಲನಚಿತ್ರ ಲೈಫ್‌ ಆಫ್‌ ಪೈ, ನಾಟಕ ಹಾಗೂ ಈ ಎಲ್ಲಾ ಚಲನಚಿತ್ರಗಳನ್ನು ಕೇಂದ್ರದ ಪದ್ಮಾವತಿ ಭಂಡಾರ್‌ಕರ್‌ ರಂಗ ಮಂದಿರದಲ್ಲಿ ಪ್ರದರ್ಶಿಸಲಾಗುವುದು ಎಂದು ಕೇಂದ್ರದ ನಿರ್ದೇಶಕ ಡಾ| ಎಚ್‌. ಶಾಂತಾರಾಮ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com