ಮಕ್ಕಳನ್ನು ಮರಳಿ ಸಾಹಿತ್ಯದೆಡೆಗೆ ಕರೆತನ್ನಿ: ಸುನೀತಾ ರಾಜಾರಾಮ್

ಬ್ರಹ್ಮಾವರ: ಮಕ್ಕಳು ಸಾಹಿತ್ಯದಿಂದ ದೂರ ಸರಿಯುತ್ತಿದ್ದಾರೆ, ಟಿವಿ - ಕಂಫ್ಯೂಟರ್ ಹಿಂದೆ ಬಿದ್ದಿದ್ದಾರೆ. ಈ ಮಕ್ಕಳನ್ನು ಮರಳಿ ಸಾಹಿತ್ಯದ ಕಡೆಗೆ ಕರೆ ತರುವ ಕಾರ್ಯಕ್ರಮಗಳಾಗಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಸುನೀತಾ ರಾಜಾರಾಮ್ ಹೇಳಿದರು.
ಅವರು ಶನಿವಾರ ಕೋಟ ಡಾ. ಶಿವರಾಮ ಕಾರಂತ ಕಲಾಭವನದಲ್ಲಿ ಆಯೋಜಿಸಲಾಗಿದ್ದ ಕನ್ನಡ ಸಾಹಿತ್ಯ ಪರಿಷತ್‌ನ ಉಡುಪಿ ಜಿಲ್ಲಾ ಘಟಕ, ಡಾ. ಶಿವರಾಮ ಕಾರಂತ ಟ್ರಸ್ ಉಡುಪಿ, ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ ಕೋಟ, ಕೋಟತಟ್ಟು ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಬೆಂಗಳೂರು ಎಸ್. ರಾಮಲಿಂಗೇಶ್ವರ ಸಾರಥ್ಯದಲ್ಲಿ ನಡೆದ ರಾಜ್ಯಮಟ್ಟದ ಕಾವ್ಯ ರಚನಾ ಕಮ್ಮಟ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ವಹಿಸಿದ್ದರು. ಸಭೆಯಲ್ಲಿ ಕೋಟ ಅಮೃತೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಆನಂದ ಸಿ. ಕುಂದರ್, ಎಸ್. ರಾಮಲಿಂಗೇಶ್ವರ ಬೆಂಗಳೂರು, ಕಲ್ಯಾಣಪುರ ಜೇಸಿಐ ಅಧ್ಯಕ್ಷ ಮಿತ್ರ ಕುಮಾರ್, ಕೋಟತಟ್ಟು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಯರಾಮ ಇದ್ದರು.
ಇದೇ ಸಂದರ್ಭದಲ್ಲಿ ಉಡುಪಿ ತಾಲೂಕು ಕಸಾಪ ಅಧ್ಯಕ್ಷ ಉಪೇಂದ್ರ ಸೋಮಾಯಾಜಿ ಅವರು ಎಸ್. ರಾಮಲಿಂಗೇಶ್ವರ ಅವರು ಬರೆದ 'ತಾಯಿ ನಾಡು' ಮತ್ತು 'ಸೃಜನಶೀಲ' ಎಂಬ ಕೃತಿಗಳನ್ನು ಅನಾವರಣಗೊಳಿಸಿದರು.
ಕಾವ್ಯ ಕಮ್ಮಟದಲ್ಲಿ ಭಾಗವಹಿಸಿದ್ದ ಸುಭಾಷಿಣಿ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಅದಿತ್ಯ ಹೊಳ್ಳ ಅವರು ಕರಾವಳಿ ಗಂಡು ಕಲೆ ಯಕ್ಷಗಾನದ ಕೆಲವು ಪದ್ಯಗಳಿಗೆ ಹೆಜ್ಜೆ ಹಾಕಿದರು. ಸಭೆಯಲ್ಲಿ ಶಿಕ್ಷಕ ನರೇಂದ್ರ ಕುಮಾರ್ ಕೋಟ ಇದ್ದರು.
ಸೃಜನಾ ಅಡಿಗ ಕಾರ್ಯಕ್ರಮ ನಿರೂಪಿಸಿದರು. ತೃಪ್ತಿ ಸ್ವಾಗತಿಸಿದರು. ಹಿರಿಯ ಪತ್ರಕರ್ತ ರಂಗಪ್ಪಯ್ಯ ಹೊಳ್ಳ ವಂದಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com