ಬಿಲ್ಲವ ಸಮಾಜದ 7 ಜೋಡಿಗಳು ಹಸೆಮಣೆಗೆ

ಕುಂದಾಪುರ: ತಾಲೂಕಿನ ಬಿಲ್ಲವ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ನಾರಾಯಣಗುರು ಕಲ್ಯಾಣ ಮಂಟಪದಲ್ಲಿ ಜರುಗಿದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 7 ಜೋಡಿಗಳು ಹಸೆಮಣೆಗೇರಿದರು. ಮೂಡುಮುಂದ ಸತೀಶ್ ಪೂಜಾರಿ-ಸೆಳ್ಕೋಡು ಸರೋಜಾ, ವಂಡ್ಸೆ ಸಂತೋಷ ಪೂಜಾರಿ-ಅನಿತಾ ಮೂಡುಮುಂದ, ನಂದನವನ ಶಶಿಕಾಂತ ಪೂಜಾರಿ-ಮಯ್ಯಡಿ ಸುಶೀಲ, ಕೆರಾಡಿ ಚಂದ್ರಶೇಖರ ಪೂಜಾರಿ-ಚಿತ್ತೂರು ನಾಗರತ್ನ, ಹಾವೇರಿ ರವಿ ಪೂಜಾರಿ-ವಂಡ್ಸೆ ಅಬ್ಬಿ ಶುಭವತಿ, ಆಲೂರು ಗುರು ಪೂಜಾರಿ-ನಾಡಾಗುಡ್ಡೆ ಹೋಟೆಲ್ ಸುಮಿತ್ರಾ ಹಾಗೂ ಆಲೂರು ರಘುರಾಮ ಪೂಜಾರಿ-ನಾವುಂದ ಶಾಂತ ಪೂಜಾರಿ ಜೋಡಿ ಉಚಿತ ಸಾಮೂಹಿಕ ವಿವಾಹ ವೇದಿಕೆಯಲ್ಲಿ ಶಾಸ್ತ್ರೋಕ್ತವಾಗಿ ಸತಿಪತಿಗಳಾದರು. 2011ರಲ್ಲಿ 5 ಜೋಡಿ, 2012ರಲ್ಲಿ ತಲಾ 6 ಜೋಡಿ ಉಚಿತ ಸಾಮೂಹಿಕ ವಿವಾಹದಲ್ಲಿ ಸಪ್ತಪದಿ ತುಳಿದಿದ್ದು ಈ ಬಾರಿ 7 ಜೋಡಿಗಳು ಹಿರಿಯರ ಸಮ್ಮುಖ  ಸಪ್ತಪದಿ ತುಳಿದರು.
       ನಾವಡರಕೇರಿ ಮಹಾಬಲೇಶ್ವರ ಹೊಳ್ಳ ಸಪ್ತಪದಿಯ ಧಾರ್ಮಿಕ ವಿಧಿ ನೆರವೇರಿಸಿದರು. ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ನಾರಾಯಣ ಟಿ. ಪೂಜಾರಿ ಹಾಗೂ ಅತಿಥಿಗಳು ನವ ವಧುವರರಿಗೆ ಮಂಗಳಸೂತ್ರ, ಸೀರೆ, ಕಾಲುಂಗರ, ಕುರ್ತಾ, ಪೈಜಾಮು, ಪೇಟಾ, ಬಾಸಿಂಗ ವಿತರಿಸಿದರು. ಬಿಲ್ಲವ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಸುರೇಶ್ ಎಸ್. ಪೂಜಾರಿ ನವದಂಪತಿಯನ್ನು ಹರಸಿ ಬ್ರಹ್ಮಶ್ರೀ ನಾರಾಯಣ ಗುರುಗಳ ಸಂದೇಶದಂತೆ ಸರಳ ವಿವಾಹಕ್ಕೆ ನಾಂದಿ ಹಾಡುವ ಈ ಕಾರ್ಯಕ್ರಮದಿಂದ ಸಮಾಜ ಬಾಂಧವರಿಗೆ ಉತ್ತಮ ಸಂದೇಶ ದೊರೆತಿದೆ. 
   ವರದಕ್ಷಿಣೆ ಕಾಟ ತಪ್ಪಿಸುವ ಉದ್ದೇಶದಿಂದ ಸರಳ ವಿವಾಹಕ್ಕೆ ಎಲ್ಲರೂ ಮನಮಾಡಬೇಕು. ಈ ವೇದಿಕೆಯಲ್ಲಿ ಸತಿಪತಿಗಳಾದ ಸಮಾಜದ ಯುವಕಯುವತಿಯರು ಇತರರಿಗೆ ಮಾದರಿಯಾಗಿದ್ದಾರೆ ಎಂದು ಪ್ರಶಂಸಿದರು. 
   ಒಂದು ಜೋಡಿಯ ವಿವಾಹದ ಖರ್ಚು ಭರಿಸಿದ ಮುಂಬಯಿ ಜಾಗೃತಿ ಬಳಗದ ಶಾರದಾ ಕರ್ಕೇರ ಅವರನ್ನು ಗೌರವಿಸಲಾಯಿತು. 
       ಬಿಲ್ಲವ ಸಮಾಜದ ಗಣ್ಯರುಗಳಾದ ಪುರುಷೋತ್ತಮ ಕೋಟ್ಯಾನ್, ಜೆ.ಎಸ್. ಕರ್ಕೇರ, ಗಂಗಾಧರ ಅಮೀನ್, ಮೋನಪ್ಪ ಪೂಜಾರಿ ಮಂಗಳೂರು, ಕೃಷ್ಣ ಪೂಜಾರಿ ಹಾಸನ, ಎನ್.ಸಿ. ಚಂದನ್ ಬೆಂಗಳೂರು, ಬಿ.ಎಂ.ಬಾಳೆಕೆರೆ ಬೆಂಗಳೂರು, ಭಾಸ್ಕರ ಪೂಜಾರಿ ಬೆಂಗಳೂರು, ವಸಂತಕುಮಾರ್ ಬಿಜೂರು, ಕೋಡಿ ಗೋಪಾಲ ಮುಂಬೆ, ಭಾಸ್ಕರ ಬಿಲ್ಲವ ಮುಂಬೆ, ಸದಾನಂದ ಬಿ.ಪೂಜಾರಿ ಮುಂಬಯಿ, ಡಾ. ಪ್ರೇಮಾನಂದ, ಸಂಘದ ಉಪಾಧ್ಯಕ್ಷರಾದ ಮಾಣಿಗೋಪಾಲ, ಶ್ರೀನಿವಾಸ ಉಬ್ಜೇರಿ, ಕಾಳಪ್ಪ ಪೂಜಾರಿ, ಕಲ್ಪನಾ ಭಾಸ್ಕರ, ಪ್ರಧಾನ ಕಾರ್ಯದರ್ಶಿ ಗಣೇಶ ಪೂಜಾರಿ, ಡಾ.ಬಾಬಣ್ಣ, ಕೋಶಾಕಾರಿ ಗಣೇಶ ಪೂಜಾರಿ ಚಿಕ್ಕನ್‌ಸಾಲ್, ಶೆಕ್ಷಣಿಕ ಮತ್ತು ಸಾಂಸ್ಕೃತಿಕ ದತ್ತಿ ಸಂಸ್ಥೆಯ ಕಾರ್ಯದರ್ಶಿ ನಾರಾಯಣ ಬಿಲ್ಲವ ಹಳೆ ಅಳಿವೆ, ನಾರಾಯಣ ಗುರು ಯುವಕ ಮಂಡಲದ ಅಧ್ಯಕ್ಷ ಗೋಪಾಲ ಪೂಜಾರಿ ವಡೇರಹೋಬಳಿ, ಮಹಿಳಾ ಘಟಕದ ಅಧ್ಯಕ್ಷೆ ಹೇಮಾ ಬಿ.ಪೂಜಾರಿ, ಸದಸ್ಯರಾದ ಶಂಕರ ಪಿ. ಪೂಜಾರಿ, ನಾಗಪ್ಪ ಪೂಜಾರಿ ಆಲೂರು, ಮೂಡೂರ ಮಾಸ್ಟರ್ ತಲ್ಲೂರು, ಭಾಸ್ಕರ ವಿಠಲವಾಡಿ ಹಾಗೂ ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು. ನಂತರ ಸುಗ್ರಾಸ ಭೋಜನ ನಡೆಯಿತು. 

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com