16ರಂದು ರಕ್ತದಾನಿಗಳ ದಿನಾಚರಣೆ, ಅರ್ಹ ರಕ್ತದಾನಿಗೆ ಸನ್ಮಾನ

ಉಡುಪಿ: ಇಲ್ಲಿನ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ 'ವಿಶ್ವ ರಕ್ತದಾನಿಗಳ ದಿನಾಚರಣೆ- 2013' ರೆಡ್‌ಕ್ರಾಸ್ ಭವನದಲ್ಲಿ ಜಿಲ್ಲಾಧಿಕಾರಿ ಎಂ.ಟಿ. ರೇಜು ಅಧ್ಯಕ್ಷತೆಯಲ್ಲಿ 16 ರಂದು ಬೆಳಗ್ಗೆ 9 ಗಂಟೆಗೆ ನಡೆಯಲಿದೆ. ಜಿಲ್ಲೆಯಲ್ಲಿ 25 ಕ್ಕೂ ಹೆಚ್ಚು ಬಾರಿ ಸ್ವಯಂ ರಕ್ತದಾನ ಮಾಡಿದ ದಾನಿಗಳನ್ನು ಈ ಸಮಾರಂಭದಲ್ಲಿ ಸನ್ಮಾನಿಸಲಾಗುವುದು. ಅರ್ಹ ರಕ್ತದಾನಿಗಳು ತಾವು ರಕ್ತ ನೀಡಿರುವ ದಾಖಲೆಯೊಂದಿಗೆ 14ರೊಳಗಾಗಿ ಕಾರ್ಯದರ್ಶಿ, ಭಾರತೀಯ ರೆಡ್‌ಕ್ರಾಸ್ ಭವನ, ಅಜ್ಜರಕಾಡು, ಉಡುಪಿ ಇವರಲ್ಲಿ ಹೆಸರು ನೋಂದಾಯಿಸಿ ಸಮಾರಂಭದ ದಿನದಂದು ಕ್ಲಪ್ತ ಸಮಯದಲ್ಲಿ ಹಾಜರಿದ್ದು ಸನ್ಮಾನ ಸ್ವೀಕರಿಸಬೇಕು ಎಂದು, ಸಂಸ್ಥೆಯ ಕಾರ್ಯದರ್ಶಿ ಪ್ರಕಟಣೆಯಲ್ಲಿ ಕೋರಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com