ಬೈಂದೂರು: ಆಳ್ವಾಸ್ ಶಿಕ್ಷಣ ಪ್ರತಿಷ್ಟಾನ(ರಿ) ಮೂಡಬಿದಿರೆ , ಆಳ್ವಾಸ್ ನುಡಿಸಿರಿ ವಿರಾಸತ್ ಘಟಕ ಬೈಂದೂರು ಇದರ ವತಿಯಿಂದ ಜೂನ್ 29ರಂದು ಬೈಂದೂರಿನಲ್ಲಿ ನಡೆಯುವ 'ಆಳ್ವಾಸ್ ಸಾಂಸ್ಕೃತಿಕ ವೈಭವ' ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಬೈಂದೂರು ರೋಟರಿ ಭವನದಲ್ಲಿ ನಡೆಯಿತು. ಈ ಸಂಧರ್ಭದಲ್ಲಿ ಮಾತನಾಡಿದ ಅಂತರಾಷ್ಟ್ರೀಯ ಜಾದೂಗಾರ ಹಾಗೂ ನುಡಿಸಿರಿ ಘಟಕದ ಗೌರವಾಧ್ಯಕ್ಷ ಓಂ ಗಣೇಶ ಉಪ್ಪುಂದ ಬೈಂದೂರಿನಲ್ಲಿ ಪ್ರಪ್ರಥಮ ಬಾರಿಗೆ ನಡೆಯುವ ಆಳ್ವಾಸ್ ಸಾಂಸ್ಕೃತಿಕ ವೈಭವವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಡುವ ಜವಬ್ದಾರಿ ನಮ್ಮೆಲ್ಲರದ್ದಾಗಿದೆ. ಅಂತರಾಷ್ಟ್ರೀಯ ಪ್ರಸಿದ್ದತೆ ಕಂಡಿರುವ ಆಳ್ವಾಸ್ ವಿರಾಸತ್ ಬೈಂದೂರಿನಲ್ಲಿ ಪ್ರದರ್ಶಿಸಲ್ಪಡುವುದು ಹೆಮ್ಮೆಯ ವಿಚಾರ ಎಂದರು.
ಈ ಸಂಧರ್ಭದಲ್ಲಿ ಆಳ್ವಾಸ್ ನುಡಿಸಿರಿ ಘಟಕದ ಅಧ್ಯಕ್ಷ ಸುಧಾಕರ ಪಿ.ಹಾಗೂ ಇತರ ಪದಾಧಿಕಾರಿಗಳು ಹಾಜರಿದ್ದರು. ರಾಮಕೃಷ್ಣ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment