ಬಾಲಕಿ ಆಫಿಯಾ ಮರಿಯಂನ ಶ್ರವಣ ಚಿಕಿತ್ಸೆಗೆ ನೆರವಾಗಿ

ಕುಂದಾಪುರ: ತಾಲೂಕಿನ  ಕಂಡ್ಲೂರು ನಿವಾಸಿ ಗುಲಾಂ ಮಹಮ್ಮದ್‌ ಮತ್ತು ಫೈರೋಜ್‌ ಬಾನು ಅವರ ಪುತ್ರಿ 12ರ ಹರಯದ ಆಫಿಯಾ ಮರಿಯಂ ಎಂಬಾಕೆ ಶ್ರವಣ ದೋಷದಿಂದ ಬಳಲುತ್ತಿದ್ದು, ಅದರ ಶಸ್ತ್ರಚಿಕಿತ್ಸೆಗೆ ನೆರವಿನ ಅಗತ್ಯವಿದೆ.
     ಕೂಲಿ ಕಾರ್ಮಿಕರಾಗಿರುವ ಗುಲಾಂ ಮಹಮ್ಮದ್‌  ಅವರಿಗೆ ಮೂವರು ಮಕ್ಕಳಿದ್ದು, ಸಂಸಾರವನ್ನು ನಡೆಸುವುದೇ ದುಸ್ತರವಾಗಿದೆ. ಈ ನಡುವೆ ಈ ಭಾರಿ ಮೊತ್ತವನ್ನು ಭರಿಸಿ ಈ ಬಾಲಕಿಯ ಚಿಕಿತ್ಸೆ ಮಾಡಿ ಸುವುದು ಅಸಾಧ್ಯವಾಗಿದೆ. ಅಫಿಯಾಳ ಕಿವಿಯ ದೋಷದಿಂದಾಗಿ ಶಾಲೆಗೆ ಹೋಗುವುದನ್ನೇ ನಿಲ್ಲಿಸಿದ್ದು, ಚಿಕಿತ್ಸೆ ಬಗ್ಗೆ  ವೈದ್ಯರನ್ನು ಭೇಟಿಯಾಗಿ  ಸಾಕಷ್ಟು ಹಣ ವ್ಯಯಿಸಿ ಚಿಕಿತ್ಸೆ ಕೊಡಿಸಿದರೂ ಯಾವುದೇ ಪ್ರಯೋಜನ ವಾಗಿಲ್ಲ.
    ಚಈ ನಡುವೆ ಬೆಂಗಳೂರಿನ ಪೋರ್‌ಟೀಸ್‌ ಆಸ್ಪತ್ರೆಯ ವೈದ್ಯರಿಗೆ ತೋರಿಸಿದಾಗಅವರು ಕೋಕಿಯಲ್‌ ಉಪಕರಣ ಕಿವಿಯಲ್ಲಿ ಅಳವಡಿಸಲು ಸಲಹೆ ನೀಡಿರುತ್ತಾರೆ.  ಈ ಉಪಕರಣ ಅಳವಡಿಸಬೇಕಾದರೆ ಸುಮಾರು 10 ಲಕ್ಷ ರೂ. ಆವಶ್ಯಕತೆ ಇರುತ್ತದೆ. ಈಗಾಗಲೇ ವೈದ್ಯರು ಸಲಹೆ ನೀಡಿ ಹಲವು ದಿನಗಳಾಗಿವೆ. ಆದರೆ ಈ ಹಣ ಹೊಂದಿಸುವಲ್ಲಿ ಈ ದಂಪತಿಗಳಿಗೆ ಸಾಧ್ಯವಾಗಿಲ್ಲ. ಆಸ್ಪತ್ರೆಗೆ ದಾಖಲಿಸಲು ಕನಿಷ್ಠ 7 ಲಕ್ಷ ರೂ. ಪಾವತಿಸಬೇಕಾಗಿದ್ದು, ಆದ್ದರಿಂದ ಈ ದಂಪತಿಗಳು ದಾನಿಗಳಿಂದ ನೆರವಿನ ಹಸ್ತಕ್ಕೆ  ಕೈ ಚಾಚಿದ್ದಾರೆ.
     ನೆರವನ್ನು ನೀಡಲು ಇಚ್ಛಿಸುವ ದಂಪತಿಗಳು: ಆಫಿಯಾ ಮರಿಯಂ, ಸಿಂಡಿಕೇಟ್‌ ಬ್ಯಾಂಕ್‌ ಕೆಮ್ಮಣ್ಣು ಶಾಖೆ ಖಾತೆ ನಂಬ್ರ: 01272210010138 (ಎಸ್‌ವೈಎನ್‌ಬಿ 0000127)ಇಲ್ಲಿಗೆ ಕಳುಹಿಸಬಹುದು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com