ಜಿ ಎಸ್‌.. .ಬಿ. ಕರ್ನಾಟದ ಗ್ರಾಮಸಭಾ ಕುಂದಾಪುರ ಪರಿಷತ್‌ ಉದ್ಘಾಟನೆ

ಕುಂದಾಪುರ: ಧರ್ಮದ ಸಂರಕ್ಷಣೆಗಾಗಿ ತ್ಯಾಗ ಮಾಡಿದವರು ಗೌಡಸಾರಸ್ವತ ಬ್ರಾಹ್ಮಣರು ಈ ಸಮಾಜದ ಹಿರಿಯರು ಧರ್ಮ ಪಾಲನೆಗಾಗಿ ವಿದೇಶಿ ಆಕ್ರಮಣಕಾರರಿಂದ ಎಂತಹ ಒತ್ತಡ ಬಂದರೂ, ಆಸ್ತಿ ವಸ್ತು, ಒಡವೆ ಕಳೆದುಕೊಂಡರೂ ತಮ್ಮ ಧರ್ಮವನ್ನು ಬಿಡಲಿಲ್ಲ. ದೇವರ ಸ್ತುತಿ, ಗುರುಗಳಲ್ಲಿ ಭಕ್ತಿ ಭಾವ, ಹಿರಿಯರಿಗೆ ಗೌರವ, ನಿತ್ಯ ಕ್ರಮಗಳ ಪರಿಪಾಲನೆ ಶ್ರದ್ಧೆಯಿಂದ ಪರಿಪಾಲಿಸುತ್ತಾ ಬಂದವರು. ನಾನಾ ಕಾರಣಗಳಿಂದ ಅಸಂಘಟಿತರಾಗಿದ್ದ ಸಂವಹನ ಸಮಸ್ಯೆಯಿಂದ, ಅರಿವಿನ ಕೊರತೆ, ಸಾಮಾಜಿಕ ಸಂಕಷ್ಟ ಎದುರಿಸುತ್ತಿದ್ದ ಗೌಡ ಸಾರಸ್ವತರನ್ನು ವ್ಯವಸ್ಥಿತ ರೀತಿಯಲ್ಲಿ ಸಂಘಟಿತರಾಗುವಂತೆ ಮಾಡಲು, 1981 ರಲ್ಲಿಯೇ ಶ್ರೀ ಕಾಶೀಮಠಾಧಿಧೀಶ ಸುಧಿಧೀಂದ್ರ ತೀರ್ಥ ಸ್ವಾಮೀಜಿಯವರು ಗ್ರಾಮಸಭಾ ಪರಿಕಲ್ಪನೆ ಕೊಚ್ಚಿಯಲ್ಲಿ ಸಾಕಾರಗೊಳಿಸಿದರು. ಕೇರಳದಲ್ಲಿ ಗ್ರಾಮ ಗ್ರಾಮಗಳಿಗೆ ತೆರಳಿ, ಶಿಬಿರಗಳನ್ನು ಏರ್ಪಡಿಸಿ ಗ್ರಾಮಸಭಾ ವ್ಯವಸ್ಥೆಯ ನಿಯಮಗಳನ್ನು ತಿಳಿಸಿದರು. ಇದು ಬಹಳ ಯಶಸ್ವಿ ಗೊಂಡಿತು. ಕರ್ನಾಟಕದಲ್ಲಿ ಈ ವ್ಯವಸ್ಥೆ ಅನುಷ್ಠಾನಗೊಳಿಸಬೇಕು ಎಂದು ಅವರು ಇತ್ತೀಚೆಗೆ ಆಶಯ ವ್ಯಕ್ತಪಡಿಸುತ್ತಾ ಬಂದಿದ್ದರು. ಇಂದು ಅದರ ನಾಂದಿ ಯಾಗಿದೆ ಎಂದು ಕಾಶೀಮಠಾಧಿಧೀಶ ಸುಧಿಧೀಂದ್ರ ತೀರ್ಥ ಸ್ವಾಮೀಜಿಯವರ ಪಟ್ಟ ಶಿಷ್ಯ ಶ್ರೀಮದ್‌ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ನುಡಿದರು.
    ಕುಂದಾಪುರ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನಡೆದ ಗೌಡ ಸಾರಸ್ವತ ಬ್ರಾಹ್ಮಣ ಸಭಾ ಕರ್ನಾಟದ ಗ್ರಾಮಸಭಾ ಕುಂದಾಪುರ ಪರಿಷತ್‌ ಉದ್ಘಾಟಿಸಿ ಸ್ವಾಮೀಜಿಯವರು ಆಶೀರ್ವಚನ ಮಾಡುತ್ತಿದ್ದರು.
      ಗ್ರಾಮಸಭಾ ವ್ಯವಸ್ಥೆಯಲ್ಲಿ ಒಂದು ಗ್ರಾಮಸಭೆಯಲ್ಲಿ ಕನಿಷ್ಟ 25, ಗರಿಷ್ಟ 100 ಮಂದಿ ಸದಸ್ಯರಿಗೆ ಅವಕಾಶವಿದೆ. ಈ ಗ್ರಾಮಸಭೆಗಳು ಸೇರಿ ಗ್ರಾಮ ಪರಿಷತ್‌ ರಚಿಸುತ್ತವೆ. ಅದೇ ರೀತಿ ರಾಜ್ಯ ಸಂಘಟನೆ ರಚನೆಗೊಳ್ಳುತ್ತದೆ. ಗ್ರಾಮ ಸಭಾ ವ್ಯವಸ್ಥೆಯಲ್ಲಿ ಬಾಲಕರಿಗೂ, ಮಹಿಳೆಯರಿಗೂ ಪ್ರತ್ಯೇಕ ವಿಭಾಗಗಳಿವೆ. ಈ ಎಲ್ಲಾ ವ್ಯವಸ್ಥೆಯ ಉದ್ದೇಶ ಸಮಾಜ ಬಾಂಧವರು ಉತ್ತಮ ನಾಗರಿಕರಾಗಿ ಬಾಳುತ್ತಾ ಪಾಲಿಸಿಕೊಂಡು ಬಂದ ಧಾರ್ಮಿಕ ಸಂಪ್ರದಾಯಗಳನ್ನು ಮುಂದುವರಿಸುವಲ್ಲಿ ಶ್ರದ್ಧೆ ವಹಿಸುವುದು. ಗ್ರಾಮಸಭೆಗಳ ಮೂಲಕ ಸಮಾಜಬಾಂಧವರ ವಿವಿಧ ವಿಷಯಗಳ ಬಗ್ಗೆ ವಿಚಾರ ವಿನಿಮಯ ನಡೆಸುವುದು, ಕುಂದುಕೊರತೆಗಳ ಪರಿಹಾರಕ್ಕೆ ಪ್ರಯತ್ನಿಸುವುದು ಸಂಕಷ್ಟದಲ್ಲಿದ್ದವರಿಗೆ ನೆರವಾಗುವುದು, ಸತ್ಕಾರ್ಯಗಳೇ ನಮ್ಮ ಉದ್ದೇಶವಾಗಿರಬೇಕು. ಟೀಕೆ ಟಿಪ್ಪಣಿಗಳ ಬಗ್ಗೆ ಎದೆಗುಂದದೆ ಮುನ್ನಡೆಯುವುದರಿಂದ ಯಶಸ್ಸು ಲಭಿಸುತ್ತದೆ. ಸ್ವಾಮೀಜಿಯವರು ಗ್ರಾಮಸಭೆಗಳ ಚಟುವಟಿಕೆಗೆ ಬಗ್ಗೆ ವಿಚಾರಿಸಿ ಸಲಹೆ ನೀಡುತ್ತಾ ಇರುತ್ತಾರೆ ಎಂದು ಅವರು ಹೇಳಿದರು.
      ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ರಾಧಾಕೃಷ್ಣ ಶೆಣೈ ಸ್ವಾಗತಿಸಿ, ದೇವಸ್ಥಾನದಲ್ಲಿ ಸ್ವಾಮೀಜಿಯವರ ನಾಲ್ಕು ದಿನಗಳ ಮೊಕ್ಕಾಂ ಸಂದರ್ಭದಲ್ಲಿ ನಡೆಯಲಿರುವ ಕಾರ್ಯಕ್ರಗಳ ವಿವರ ನೀಡಿ ಸಮಾಜಬಾಂಧವರು ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕೆಂದು ಹೇಳಿದರು.
     ಕೇರಳದಿಂದ ಆಗಮಿಸಿದ ರಾಮಚಂದ್ರ ಪೈ, ಪ್ರಭಾಕರ ಪ್ರಭು, ವಿನೋದ ಶೆಣೈ ಹಾಗೂ ಬಸ್ರೂರಿನ ದಾಮೋದರ ಆಚಾರ್ಯ, ಮಂಗಳೂರಿನ ಸುಧಾಕರ ಭಟ್‌ ಶುಭಾಶಂಸನೆ ಮಾಡಿದರು.
       ಕೆ.ಮಾಳಪ್ಪ ಪೈ, ಕೆ. ಶ್ರೀನಿವಾಸ ಶೆಣೈ ಕುಂದಾಪುರ, ಡಿ.ಗೋಪಾಲಕೃಷ್ಣ ಕಾಮತ್‌ ಸಿದ್ಧಾಪುರ ಉಪಸ್ಥಿತರಿದ್ದರು. ವಿವಿಧ ಗ್ರಾಮಗಳ ಗ್ರಾಮಸಬಾ ವ್ಯವಸ್ಥೆಯ ಮುಖ್ಯಸ್ಥರನ್ನು , ಸ್ವಯಂ ಸೇವಕರನ್ನು ಈ ಸಂದರ್ಭದಲ್ಲಿ ಗುರುತಿಸಲಾಯಿತು. ಕೆ. ದಿನೇಶ ಕಾಮತ್‌ ಕಾರ್ಯಕ್ರಮ ನಿರೂಪಿಸಿದರು. ಕೆ. ಶ್ರೀಧರ ಕಾಮತ್‌ ವಂದಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com