ದೇವಾಲಯಗಳು ಸಂಸ್ಕಾರ ನೀಡುವ ಶೃದ್ಧಾಕೇಂದ್ರಗಳಾಗಬೇಕು: ಶ್ರೀ ಗುರುದೇವಾನಂದ ಸ್ವಾಮೀಜಿ

ಬೈಂದೂರು: ಇಂದಿನ ಸಮಾಜ ಸಂಸ್ಕೃತಿ ಸಂಸ್ಕಾರದ ಕೊರತೆಯಿಂದ ಬಳಲುತ್ತಿದೆ, ಆಧುನಿಕತೆಯ ಭರಾಟೆಯಲ್ಲಿ ನಮ್ಮ ಸನಾತನ ಸಂಸ್ಕೃತಿ ಸೊರಗುತ್ತಿದ್ದು,  ಯುವ ಪೀಳಿಗೆಗೆ ಇದರ ಬಗ್ಗೆ ಅರಿವು ಮೂಡಿಸಬೇಕಾಗಿದೆ. ಇದು ದೇವಾಲಯಗಳಿಂದ ಮಾತ್ರ ಸಾಧ್ಯವಾಗುವುದರಿಂದ ದೇವಾಲಯಗಳು ಸಂಸ್ಕಾರ ನೀಡುವ ಶೃದ್ಧಾ ಕೇಂದ್ರಗಳಾಗಬೇಕು, ಆಗ ಮಾತ್ರ ಸುಂದರ ಸಮಾಜ ನಿರ್ಮಾಣ ಸಾಧ್ಯ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿದರು.
      ಕೊಡೇರಿ ಹಕ್ರೆಮಠ ಸಪರಿವಾರ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ಭಾನುವಾರ ಸಂಜೆ ಜರುಗಿದ ನೂತನ ಶಿಲಾ ದೇಗುದಲ್ಲಿ ಸಪರಿವಾರ ಶ್ರೀ ಲಕ್ಷ್ಮೀವೆಂಕಟರಮಣ ದೇವರ ಪ್ರತಿಪ್ಠಾಪನೆ, ಬ್ರಹ್ಮಕಲಶೋತ್ಸವ ಮತ್ತು 29ನೇ ವಾರ್ಷಿಕ ಗೆಂಡಸೇವೆ ಹಾಗೂ ಢಕ್ಕೆ ಮಂಡಲೋತ್ಸವದ ಧಾರ್ಮಿಕ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
    ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ದೇವಾಲಯಗಳು ಒಡೆದ ಮನಸ್ಸುಗಳನ್ನು ಒಂದು ಮಾಡುವ ಕೇಂದ್ರವಾಗಿದೆ, ಸಮಾಜ ಮುಂದುವರಿದಂತೆ ಜನ ಆಧ್ಯಾತ್ಮದತ್ತ ವಾಲುತ್ತಿದ್ದಾರೆ ಇದು ಒಳ್ಳೆಯ ಬೆಳವಣಿಗೆಯಾಗಿದೆ.  ಇಂದಿನ ಮಕ್ಕಳ ಮಾನಸಿಕತೆಯನ್ನು ಹೆಚ್ಚಿಸಲು ಧಾರ್ಮಿಕ ಕೇಂದ್ರಗಳಿಂದ ಮಾತ್ರ ಸಾಧ್ಯವಾಗಿದ್ದು ಅವರಿಗೆ ಸಂಸ್ಕೃತಿ ಸಂಸ್ಕಾರ ನೀಡುವ ಕೆಲಸ ದೇವಾಲಯಗಳಿಂದ ಆಗಬೇಕಾಗಿದೆ ಎಂದರು. ಕಿರಿಮಂಜೇಶ್ವರದ ಅಗಸ್ತ್ಯೇಶ್ವರ ದೇವಾಲಯದ ಆಡಳಿತ ಧರ್ಮದರ್ಶಿ ಕೆ. ಉಮೇಶ್ ಶ್ಯಾನುಭೋಗ್ ಅಧ್ಯಕ್ಷತೆ ವಹಿಸಿದ್ದರು.
     ಮುಂಬೈ ಉದ್ಯಮಿ ಸುರೇಶ್ ಎಸ್. ಪೂಜಾರಿ, ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಎನ್.ಟಿ. ಪೂಜಾರಿ, ಕೆ. ಎಸ್. ಪ್ರಕಾಶ ರಾವ್ ಖಂಬದಕೋಣಿ, ಮರವಂತೆ ವರಹಾ ದೇವಸ್ಥಾನದ ಜೀಣೋದ್ಧಾರ ಸಮಿತಿಯ ಅಧ್ಯಕ್ಷ ನರಸಿಂಹ ಪೂಜಾರಿ ಪಡುಕೋಣೆ, ಬಂದರು ಮತ್ತು ಮೀನುಗಾರಿಕೆ ಉಡುಪಿ ಉಪವಿಭಾಗದ ಸಹಾಯಕ ಕಾರ್ಯನಿರ್ವಹಕ ಇಚಿಜಿನಿಯರ್ ಎನ್.ಎಂ. ಖಾರ್ವಿ, ಡಿ.ಬಿ.ಎ. ರಕ್ಷಣಾ ಇಲಾಖೆಯ ಪೋರ್ಟ್‌ಬ್ಲೇರ್ ರಾಮ್ ಎಂ. ಕೊಡೇರಿ, ಉದ್ಯಮಿಗಳಾದ ಗೋವಿಂದ ಎನ್. ಗಂಗೆಬೈಲು, ಗಣೇಶ್ ಪೂಜಾರಿ ಆಳೊಳ್ಳಿ, ನಾರಾಯಣ ಖಾರ್ವಿ, ಸಾಮಾಜಿಕ ಕಾರ್ಯಕರ್ತ ನವೀನಚಂದ್ರ ಉಪ್ಪುಂದ, ಜೀಣೋದ್ಧಾರ ಸಮಿತಿಯ ಅಧ್ಯಕ್ಷ ಟಿ. ನಾರಾಯಣ ಖಾರ್ವಿ, ಕೊಡೇರಿ ಬಿಲ್ಲವ ಸಂಘದ ಅಧ್ಯಕ್ಷ ಮಾಧವ ಎನ್. ಪೂಜಾರಿ, ತಾ.ಪಂ. ಸದಸ್ಯ ಮಹೇಂದ್ರ ಪೂಜಾರಿ ಉಪಸ್ಥಿತರಿದ್ದರು.
     ಈ ಸಂದರ್ಭದಲ್ಲಿ ದೇವಾಲಯದ ನಿರ್ಮಾಣಕ್ಕೆ ಮುಜಾರಾಯಿ ಇಲಾಖೆಯಿಂದ 25 ಲಕ್ಷ ಅನುದಾನ ಒದಗಿಸಿ ಕೊಟ್ಟ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಅನುದಾನ ದೊರಕುವಂತೆ ಮಾಡಲು ಸಹಕರಿಸಿದ ತಾ.ಪಂ. ಸದಸ್ಯ ಮಹೇಂದ್ರ ಪೂಜಾರಿ ಅವರನ್ನು ದೇವಾಲಯದ ವತಿಯಿಂದ ಸನ್ಮಾನಿಸಲಾಯಿತು.
     ಜೀರ್ಣೋದ್ಧಾರ ಸಮಿತಿಯ  ಗೌರವಾಧ್ಯಕ್ಷ ಸಿ.ಎಸ್. ಖಾರ್ವಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು, ಸತ್ಯನಾ ಕೊಡೇರಿ ನಿರೂಪಿಸಿ, ಆನಂದ ಪೂಜಾರಿ ಕೊಡೇರಿ ವಂದಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com