ಯೋಗದಿಂದ ಆಂತರಿಕ ಆರೋಗ್ಯ:ಸುರೇಶ್‌ ಭಕ್ತ

ಕೋಟೇಶ್ವರ: ದೆ„ಹಿಕ ವ್ಯಾಯಾಮ ಆಸನಗಳಿಂದ ಮುಂದುವರಿದು ಮನಸ್ಸು ಬುದ್ದಿಯನ್ನು ನಿಯಂತ್ರಿಸಿ ಕ್ರಿಯೆ ಮತ್ತು ಪ್ರಜ್ಞೆಯನ್ನು ಒಂದೇ ಕಡೆ ಕೇಂದ್ರಿಕರಿಸಿದಾಗ ಹಿಡಿದ ಕೆಲಸವನ್ನು ತಮ್ಮ ಇಚ್ಚೆಯಂತೆ ಸಾಧಿಸಬಹುದು. ಯೋಗದ ಮೂಲಕ ವಿಕೇಂದ್ರಿತ ವಿಕಾಸವಾದ ಮತ್ತು ಅಧ್ಯಾತ್ಮಿಕ ಸಮಾಜವಾದಗಳಿಂದ ವ್ಯಕಿತ್ವ ವಿಕಾಸಗೊಂಡು,ಸಮಾಜ, ರಾಷ್ಟ್ರ ಹಾಗೂ ಜಗತ್ತಿನ ಏಳಿಗೆಯಲ್ಲಿ ಮುನ್ನೆಡೆಯಿರಿ ಎಂದು ಉಡುಪಿ ಪತಂಜಲಿ ಯೋಗ ಶಿಕ್ಷಕ ಸುರೇಶ್‌ ಭಕ್ತ ಹೇಳಿದರು.
      ಅವರು ಪತಂಜಲಿ ಯೋಗ ಸಮಿತಿ, ಭಾರತ್‌ ಸ್ವಾಭಿಮಾನ್‌ ಟ್ರಸ್ಟ್‌ ಉಡುಪಿ-ಕುಂದಾಪುರ. ಹಾಗೂ ಚೇತನಾ ಕಲಾರಂಗ, ರೋಟರಿ ಕ್ಲಬ್‌ ಕೋಟೇಶ್ವರ ಇವರ ಜಂಟಿ ಆಶ್ರಯದಲ್ಲಿ ಕೋಟೇಶ್ವರ ಸರಕಾರಿ ಮಾದರಿ ಹಿ.ಪ್ರಾ.ಶಾಲೆಯ ಮಹಾಲಕ್ಷ್ಮೀ ಮದ್ವರಾಯ ಸಭಾಭವನದಲ್ಲಿ ನಡೆದ ಉಚಿತ ಪ್ರಾಣಾಯೋಗ ತರಬೇತಿ ಶಿಬಿರದಲ್ಲಿ ಮಾತನಾಡಿದರು.
     ಬೆಂಗಳೂರು ಪತಂಜಲಿ ಯೋಗ ಶಿಕ್ಷಕ ಶುಗುರೇಶ್‌ ಅವರು ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಪ್ರಾಣಾಯಾಮದಿಂದ ಮನಸ್ಸು ಬುದ್ದಿಯನ್ನು ನಿಯಂತ್ರಿಸಿ ಏಕಾಗ್ರತೆ ಮೂಡಿಸುವ ಜ್ಞಾನ ಸಂಪಾದಿಸುವುದಲ್ಲದೆ ಯೋಗವು ಒಂದು ಜೀವನ ಪದ್ದತಿಯಾಗಿದ್ದು ರೋಗಗಳ ಮೂಲ ಕಾರಣವನ್ನು ನಿರ್ಮೂಲನೆ ಮಾಡಿ ನಮಗೆ ಒಳಗಿನಿಂದ ಆರೋಗ್ಯ ಪ್ರಧಾನ ಮಾಡುತ್ತದೆ ಎಂದರು.ಇದೇ ಸಂದರ್ಭದಲ್ಲಿ ವಿವಿಧ ಕಾಯಿಲೆಗಳಿಗೆ ಆಯುರ್ವೇದಿಕ್‌, ಗಿಡಮೂಲಿಕೆಗಳಿಂದ ಪರಿಹಾರ ನೀಡಿದರು.
      ಕೋಟೇಶ್ವರ ಕೋಟಿಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಪ್ರಭಾಕರ್‌ ಶೆಟ್ಟಿ ಯೋಗ ಶಿಬಿರ ಉದ್ಘಾಟಿಸಿದರು. ಜಿಲ್ಲಾ ಭಾರತ್‌ ಸ್ವಾಭಿಮಾನ್‌ ಟ್ರಸ್ಟ್‌ ಅಧ್ಯಕ್ಷ ಶಿವರಾಮ್‌ ಶೆಟ್ಟಿ, ಅಜಿತ್‌ ಕುಮಾರ್‌, ಉದಯ ಕುಮಾರ್‌, ಕೃಷಿ ಭಾರತ್‌ ಅಧ್ಯಕ್ಷ ಪ್ರಕಾಶ್‌ ಉಪಾಧ್ಯಾಯ, ಜಯಶೀಲ, ಉದ್ಯಮಿ ಸುರೇಶ್‌ ಬೆಟ್ಟಿನ್‌ ಇದ್ದರು.
     ಕುಂದಾಪುರ ಭಾರತ್‌ ಸ್ವಾಭಿಮಾನ್‌ ಟ್ರಸ್ಟ್‌ ಅಧ್ಯಕ್ಷ ಸುಧಾಕರ್‌ ವಕ್ವಾಡಿ ಸ್ವಾಗತಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com