ಆದ್ಯತೆಯ ಮೇಲೆ ಮೀನುಗಾರರ ಸಮಸ್ಯೆ ಪರಿಹಾರ : ಶಾಸಕ ಕೆ. ಗೋಪಾಲ ಪೂಜಾರಿ

ಮರವಂತೆ: ಮೀನುಗಾರಿಕಾ ರಸ್ತೆಗಳನ್ನು ದೀರ್ಘಕಾಲದಿಂದ ನಿರ್ಲಕ್ಷಿಸಲಾಗಿದೆ. ಅವುಗಳಲ್ಲಿ ಹಲವು ನಶಿಸುವ ಸ್ಥಿತಿಯಲ್ಲಿವೆ. ಮೀನುಗಾರಿಕಾ ಬಂದರುಗಳಲ್ಲಿ ಹಲವು ಸಮಸ್ಯೆಗಳಿವೆ. ಅವುಗಳೊಂದಿಗೆ ಮತ್ಸ್ಯಾಶ್ರಯ ಮನೆ ನಿರ್ಮಾಣ, ಸೀಮೆ‌ಎಣ್ಣೆ ಲಭ್ಯತೆ ವಿಚಾರದಲ್ಲೂ ಆತಂಕಗಳಿವೆ. ಈ ಎಲ್ಲ ಸಮಸ್ಯೆಗಳನ್ನು ಆರರಿದ್ಯತೆಯ ಮೇಲೆ ಪರಿಹರಿಸಲು ಪ್ರಯತ್ನಿಸಲಾಗುವುದು ಎಂದು ಶಾಸಕ ಕೆ. ಗೋಪಾಲ ಪೂಜಾರಿ ಮೀನುಗಾಗೆ ಭರವಸೆ ನೀಡಿದರು. 
      ಅವರು ಮರವಂತೆ ಮೀನುಗಾರರ ಶ್ರೀರಾಮ ಮಂದಿರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಸಂದರ್ಭದಲ್ಲಿ ಮೀನುಗಾರ ಮುಖಂಡರು ಅವರ ಮುಂದೆ ತಮ್ಮ ಅಹವಾಲು ಮಂಡಿಸಿದರು. 
       ಕಾಂಗ್ರೆಸ್ ನಾಯಕ ಆಸ್ಕರ್ ಫೆರ್ನಾಂಡೀಸ್ ಅವರೊಂದಿಗೆ ಈಗಾಗಲೇ ಮೀನುಗಾರಿಕಾ ಸಚಿವರನ್ನು ಭೇಟಿಯಾಗಿ ಒಂದು ಸುತ್ತಿನ ಮಾತುಕತೆ ನಡೆಸಲಾಗಿದೆ. ವಿಧಾನ ಸಭೆಯ ಪ್ರಸಕ್ತ ಅಧಿವೇಶನ ಮುಕ್ತಾಯವಾದ ಬಳಿಕ ಮೀನುಗಾರಿಕಾ ಸಚಿವ, ಉಸ್ತುವಾರಿ ಸಚಿವ ಮತ್ತು ಆಸ್ಕರ್ ಫೆರ್ನಾಂಡೀಸ್ ಅವರನ್ನು ಈ ಭಾಗಕ್ಕೆ ಕರೆತಂದು ಅವರಿಗೆ ಇಲ್ಲಿನ ಸಮಸ್ಯೆ ಮತ್ತು ಅಗತ್ಯಗಳ ಕುರಿತು ಮನವರಿಕೆ ಮಾಡಿಕೊಡಲಾಗುವುದು. ನೂತನ ಸರಕಾರದ ಬಜೆಟ್‌ನಲ್ಲಿ ಕೆಲವು ಅಂಶಗಳನ್ನು ಸೇರ್ಪಡೆಗೊಳಿಸಲು ಯತ್ನಿಸಲಾಗುವುದು ಎಂದು ಅವರು ಹೇಳಿದರು. ಕೆಪಿಸಿಸಿ ಸದಸ್ಯ ಬಿ. ರಘುರಾಮ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಸ್. ರಾಜು ಪೂಜಾರಿ, ರಾಜು ದೇವಾಡಿಗ ಶಾಸಕರ ಜತೆಗಿದ್ದರು.  
       ಶಾಸಕರನ್ನು ಮಂದಿರದ ಆಡಳಿತ ಸಮಿತಿ ಅಧ್ಯಕ್ಷ ಸೋಮಯ್ಯ ಖಾರ್ವಿ ಸ್ವಾಗತಿಸಿದರು. ಮುಖಂಡರಾದ ಎಂ. ಎಸ್. ಶೇಷ, ರಾಮಕೃಷ್ಣ ಖಾರ್ವಿ, ಚಂದ್ರಗುಪ್ತ ಖಾರ್ವಿ, ಚಂದ್ರ ಖಾರ್ವಿ, ಮಂಜುನಾಥ ಖಾರ್ವಿ, ಟಿ. ಕೆ. ಖಾರ್ವಿ, ಸಂಜೀವ ಖಾರ್ವಿ, ಮಾಜಿ ಗ್ರಾ. ಪಂ. ಅಧ್ಯಕ್ಷ ಎಂ. ವಿನಾಯಕ ರಾವ್ ಮತ್ತಿತರರು ಇದ್ದರು. 

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com