ಅಕ್ರಮ ಗೋ ಸಾಗಾಟ ಖಂಡಿಸಿ ಪ್ರತಿಭಟನೆ

ಕುಂಭಾಶಿ: ಇತ್ತೀಚಿನ ದಿನಗಳಲ್ಲಿ ಗೋ ಹತ್ಯೆ ಹಾಗೂ ಗೋ ಅಕ್ರಮ ಸಾಗಾಟಗಳು ಹೆಚ್ಚಾಗಿ ಕಂಡು ಬರುತ್ತಿದ್ದು ಈ ಹಿಂದೆ ರಾಜ್ಯದಲ್ಲಿರುವ ಆಡಳಿತದಲ್ಲಿರುವ ಗೋಹತ್ಯೆ ನಿಷೆೇಧ ಮಾಡುವಂತೆ ಮನವಿ ಮುಂದಿಟ್ಟರು ಕೂಡ ರಾಜ್ಯಪಾಲರು ಕಾನೂನಿನ ಅಡಿಯಲ್ಲಿ ಕಾನೂನು ತಿದ್ದುಪಡಿ ತರಬಹುದಿತ್ತು ಆದರೆ ಯಾವುದೇ ಅಂಗೀಕಾರ ಮಾಡಲಿಲ್ಲ ಅದರಂತೆ ಇಂದಿನ ಮುಖ್ಯಮಂತ್ರಿಗಳು ನೇರವಾಗಿ ಗೋ ಹತ್ಯೆಗೆ ಅವಕಾಶ ಕಲ್ಪಿಸುವ ಮೂಲಕ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ದಕ್ಕೆಯಾಗುವಂತೆ ವರ್ತಿಸಿದ್ದಾರೆ ಇನ್ನೂ ಮುಂದೆ ಇದೇ ರೀತಿಯಲ್ಲಿ ಹಿಂದೂಗಳ ಶ್ರದ್ಧೆಗೆ ಭಂಗವಾದರೆ ಬಿಡುವುದಿಲ್ಲ ಎಂದು ರಾಷ್ಟ್ರಿಯ ಸ್ವಯಂ ಸೇವಕ ಸಂಘದ ಕರ್ನಾಟಕ ಪ್ರಾಂತ್ಯದ ಕಾರ್ಯಕಾರಿಣಿ ಸದಸ್ಯ ಸುಬ್ರಹ್ಮಣ್ಯ ಹೊಳ್ಳ ಹೇಳಿದರು.
      ತಾಲೂಕಿನ ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ನ ನಾಲ್ಕು ಹಸುಗಳನ್ನು ದುಷ್ಕರ್ಮಿಗಳು ಅಪಹರಿಸಿದ್ದರ ಬಗ್ಗೆ ಪತ್ರಿಕೆಯೊಂದು ವರದಿ ಪ್ರಕಟಿಸಿದ ಹಿನ್ನೆಲೆಯಲ್ಲಿ ವಿಶ್ವ ಹಿಂದೂ ಪರಿಷತ್‌ ಹಾಗೂ ಭಜರಂಗ ದಳ ಕೋಟೇಶ್ವರ ವಲಯ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ವಠಾರದಲ್ಲಿ ನಡೆಸಿದ ಅಕ್ರಮ ಗೋ ಸಾಗಾಟ ಖಂಡಿಸಿ ಪ್ರತಿಭಟನೆಯನ್ನು ಉದ್ಧೇಶಿಸಿ ಮಾತನಾಡಿದರು.
      ಕಾರ್ಯಕ್ರಮದಲ್ಲಿ ಜಿಲ್ಲಾ ವಿಶ್ವ ಹಿಂದೂ ಪರಿಷತ್‌ ಜಿಲ್ಲಾಧ್ಯಕ್ಷ ಬೈಕಾಡಿ ಸುಪ್ರಸಾದ ಶೆಟ್ಟಿ ಮಾತನಾಡಿ ಹಿಂದೂ ಧಾರ್ಮಿಕ ಶೃದ್ಧಾ ಕೇಂದ್ರಗಳಿಗೆ ಅಕ್ರಮವಾಗಿ ಪ್ರವೇಶಸುವ ಮೂಲಕ ಗೋವುಗಳನ್ನು ಅಕ್ರಮವಾಗಿ ಸಾಗಿಸಿದವರ ವಿರುದ್ಧ ಮುಂದಿನ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಹಾಗೂ ಉಪ ವಿಭಾಗಾಧಿಕಾರಿಗಳಿಗೆ ಮನವಿ ನೀಡುವುದ್ದರೊಂದಿಗೆ ಮುಂದಿನ ದಿನಗಳಲ್ಲಿ ಯಾವುದೇ ರೀತಿಯಲ್ಲಿಯೂ ಇಂತಹ ಅಕ್ರಮ ಗೋಸಾಗಾಟ ಕಂಡು ಬಂದರೆ ಪ್ರತಿ ಗ್ರಾಮ ಮಟ್ಟದಲ್ಲಿ ಉಗ್ರಹೋರಾಟ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.
      ಈ ಸಂದರ್ಭದಲ್ಲಿ , ದೇವಳದ ಉಡುಪಿ ಜಿಲ್ಲಾ ಭಜರಂಗದ ದಳದ ಸಂಚಾಲಕ ಸುನೀಲ್‌ ಕೆ.ಆರ್‌ , ಸಹ ಸಂಚಾಲಕ ಗಿರೀಶ ಕುಂದಾಪುರ, ಕುಂದಾಪುರ ತಾಲೂಕು ಭಜರಂಗ ದಳದ ಸಂಚಾಲಕ ವಿಜಯ ಕುಮಾರ್‌ಶೆಟ್ಟಿ ಗೋಳಿಅಂಗಡಿ , ರವೀಂದ್ರ , ರಾಜೇಂದ್ರ ಕೋಟೇಶ್ವರ , ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶಂಕರ ಅಂಕದಕಟ್ಟೆ, ರಾಜೇಶ್‌ ಕಾವೇರಿ, ಕಾಮಧೇನು ಗೋ ಸಂರಕ್ಷಣಾ ಕೇಂದ್ರ ಅಧ್ಯಕ್ಷ ಗಿರೀಶ್‌ ಉಪಾಧ್ಯಾಯ , ಸುಬ್ರಹ್ಮಣ್ಯ ಶೆಟ್ಟಿಗಾರ್‌, ಅಶೋಕ್‌ ಮಾರ್ಕೊಡು, ರಾಘವೇಂದ್ರ ಆಚಾರ್ಯ ಕೋಟೇಶ್ವರ ಮೊದಲಾದವರು ಹಾಜರಿದ್ದರು.
ಕೃಪೆ: ಉದಯವಾಣಿ
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com