ಬೈಕ್‌-ಬಸ್ಸು ಢಿಕ್ಕಿ: ಯುವ ಶಿಕ್ಷಕ ಸಾವು

ಕುಂದಾಪುರ: ಇಲ್ಲಿಗೆ ಸಮೀಪದ ನಂದಿಬೆಟ್ಟು ಎಂಬಲ್ಲಿ ಸಂಜೆ 5.15ರ ಸುಮಾರಿಗೆ ಬೈಕ್‌ ಒಂದಕ್ಕೆ ಬಸ್ಸು ಢಿಕ್ಕಿಯಾಗಿ  ತರುಣನೋರ್ವ ಸ್ಥಳದಲ್ಲೇ ಸಾವಪ್ಪಿದ ದುರ್ಘ‌ಟನೆ ನಡೆದಿದೆ.
     ಮೃತ ವ್ಯಕ್ತಿ 31 ವರ್ಷ ಪ್ರಾಯದ ವಿವಾಹಿತ ಪ್ರಕಾಶ್‌ ನಾಯ್ಕ ಎಂದು ತಿಳಿದುಬಂದಿದೆ. ಇವರು ಮೂಲತಃ ಕುಮಟಾದ ಹೊಳನಗದ್ದೆ ಎಂಬಲ್ಲಿಯವರಾಗಿದ್ದು ಪ್ರಕೃತ ತ್ರಾಸಿ ಸಮೀಪದ ಮುಲ್ಲಿಕಟ್ಟೆ ಎಂಬಲ್ಲಿನ ನಿವಾಸಿಯಾಗಿದ್ದಾರೆ. ಇವರು ಅರಾಟೆ ಸರಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಇವರ ಪತ್ನಿ ಪ್ರೇಮಾ ಎಂಬವರು ಕೂಡ ಶಿಕ್ಷಕಿಯಾಗಿದ್ದು ನೂಜಾಡಿ ಸರಕಾರಿ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈ ದಂಪತಿಗೆ ಆರು ತಿಂಗಳ ಮಗು ಇದೆ.
      ಪ್ರಕಾಶ್‌ ನಾಯ್ಕ ಅವರ ಬೈಕ್‌ ನಜ್ಜುಗುಜ್ಜಾಗಿದ್ದು ಅಪಘಾತದ ಭೀಕರತೆಯಲ್ಲಿ ಅವರು ಸ್ಥಳದಲ್ಲೇ ಸಾವಪ್ಪಿದರು ಎಂದು ತಿಳಿದು ಬಂದಿದೆ. 
      ಕುಂದಾಪುರ ಟ್ರಾಫಿಕ್‌ ಪೊಲೀಸ್‌ ಠಾಣೆಯಲ್ಲಿ ಕೇಸು ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com