ಬ್ರಹ್ಮಾವರ ತಾಲೂಕು ರಚನೆ ಪ್ರಸ್ತಾಪ ಬಿಡಕೂಡದು: ಆಗ್ರಹ

ಬ್ರಹ್ಮಾವರ: ಬ್ರಹ್ಮಾವರ ತಾಲೂಕು ರಚನೆ ಪ್ರಸ್ತಾಪವನ್ನು ಕೈ ಬಿಡಕೂಡದು ಎಂದು ಬ್ರಹ್ಮಾವರ ತಾಲೂಕು ಹೋರಾಟ ಸಮಿತಿ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರನ್ನು ಆಗ್ರಹಿಸಿದೆ.
ಸಮಿತಿಯ ನಿಯೋಗವೊಂದು ಅಧ್ಯಕ್ಷ ಬಾರಕೂರು ಸತೀಶ್ ಪೂಜಾರಿ ಅವರ ನೇತೃತ್ವದಲ್ಲಿ ಭಾನುವಾರ ಶಾಸಕರ ನಿವಾಸಕ್ಕೆ ತೆರಳಿ ಮನವಿ ನೀಡಿ ಒತ್ತಾಯಿಸಿದೆ.
ಕುಂದಾಪುರ ವಿಧಾನ ಸಭಾ ಕ್ಷೇತ್ರಕ್ಕೆ ಸೇರಿದ 14 ಗ್ರಾಮ ಪಂಚಾಯಿತಿಗಳಲ್ಲಿ 27 ಗ್ರಾಮಗಳು ಬ್ರಹ್ಮಾವರ ತಾಲೂಕಿಗೆ ಸೇರುವುದಕ್ಕೆ ಹಿಂದಿನ ಬಿಜೆಪಿ ಸರ್ಕಾರ ಘೋಷಣೆ ಮಾಡಿದ್ದು, ಈಗೀನ ಕಾಂಗ್ರೆಸ್ ಸರ್ಕಾರ ಅದನ್ನು ಪರಿಶೀಲಿಸುವ ನೆಪದಲ್ಲಿ ತಡೆ ಹಿಡಿಯುವುದಾಗಿ ಹೇಳಿ ಬ್ರಹ್ಮಾವರವನ್ನು ಅತಂತ್ರ ಮಾಡುವ ಸಿದ್ಧತೆಯಲ್ಲಿದೆ ಎಂದು ಸತೀಶ್ ಪೂಜಾರಿ ಈ ಸಂದರ್ಭದಲ್ಲಿ ಆರೋಪಿಸಿದರು.
ಶಾಸಕರು ಈ ಬಗ್ಗೆ ತಾನು ಸದನದಲ್ಲಿ ಚರ್ಚಿಸುವುದಾಗಿ ಭರವಸೆ ನೀಡಿದರು.
ಸಮಿತಿಯ ರಾಮಕೃಷ್ಣ ಗಾಣಿಗ, ಗಣೇಶ ಪೂಜಾರಿ ಬಾರಕೂರು, ಸುರೇಶ್ ಪೂಜಾರಿ ಹನೆಹಳ್ಳಿ, ರಾಜೇಶ್  ಅಡಿಗ ಬಂಡೀಮಠ ಜೊತೆಯಲ್ಲಿದ್ದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com