ಕೊಂಕಣಿ ಆರೋಗ್ಯ ಕಾರ್ಡ್: ಅರ್ಜಿ ಆಹ್ವಾನ

ಗಂಗೊಳ್ಳಿ: ಕಳೆದ ವರ್ಷ ಗಂಗೊಳ್ಳಿ ಜಿಎಸ್‌ಬಿ ಸಮಾಜ ವತಿಯಿಂದ ಸಮಾಜ ಬಾಂಧವರಿಗೆ ನೀಡಲಾಗಿರುವ ಕೊಂಕಣಿ ಆರೋಗ್ಯ ಕಾರ್ಡ್ ನವೀಕರಿಸಲು ಹಾಗೂ ಹೊಸ ಕಾರ್ಡ್ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಜೊತೆ ತಮ್ಮ ಕುಟುಂಬದ ಸದಸ್ಯರ ಸಂಖ್ಯೆ ನಮೂದಿಸಿ ರಿಯಾಯಿತಿ ದರದ ಶುಲ್ಕ ಪಾವತಿಸಬೇಕು. ಹಿಂದಿನ ವರ್ಷದ ಕಾರ್ಡ್ ಇರುವವರು ಅರ್ಜಿ ಜೊತೆ ಹಿಂದಿನ ಕಾರ್ಡ್‌ನ ಜೆರಾಕ್ಸ್ ಪ್ರತಿ, ಹೊಸ ಕಾರ್ಡ್ ಮಾಡುವವರು ಕುಟುಂಬದ ಮುಖ್ಯಸ್ಥರ ಪಡಿತರ ಚೀಟಿ ಅಥವಾ ಮತದಾರರ ಗುರುತು ಚೀಟಿಯ ಪ್ರತಿಯನ್ನು ಅರ್ಜಿಯೊಂದಿಗೆ ನೀಡಬೇಕು. ಗಂಗೊಳ್ಳಿ ಜಿಎಸ್‌ಬಿ ಸಮಾಜ ವ್ಯಾಪ್ತಿಯ ಗಂಗೊಳ್ಳಿ, ಗುಜ್ಜಾಡಿ, ತ್ರಾಸಿ, ಮರವಂತೆ ಮೊದಲಾದ ಕಡೆಗಳ ಜಿಎಸ್‌ಬಿ  ಸಮಾಜ ಬಾಂಧವರು ಅರ್ಜಿಗಳನ್ನು ಬಿ.ರಾಘವೇಂದ್ರ ಪೈ (ಸಾನಿಧ್ಯ ಬುಕ್ ಹೌಸ್, ಕೆನರಾ ಬ್ಯಾಂಕ್ ಎದುರು) ಅವರಿಂದ ಪಡೆದು ಅಗತ್ಯ ದಾಖಲೆ ಹಾಗೂ ಶುಲ್ಕದೊಂದಿಗೆ ಜೂ.30ರೊಳಗೆ ಹಿಂತಿರುಗಿಸಬೇಕು. ಹೆಚ್ಚಿನ ಮಾಹಿತಿಗಾಗಿ ಬಿ.ರಾಘವೇಂದ್ರ ಪೈ (9886880474) ಅಥವಾ ಬಿ.ಗಣೇಶ ಶೆಣೈ (9008979520) ಅವರನ್ನು ಸಂಪರ್ಕಿಸಬಹುದು ಎಂದು ಗಂಗೊಳ್ಳಿ ಜಿಎಸ್‌ಬಿ ಸಮಾಜದ ಪ್ರಕಟಣೆ ತಿಳಿಸಿದೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com