ಉಪನ್ಯಾಸಕ ಲೂವಿಸ್‌ಗೆ ವಿದಾಯ

ಗಂಗೊಳ್ಳಿ: ಸುಮಾರು 3 ದಶಕಗಳ ಕಾಲ ಗಂಗೊಳ್ಳಿಯ ಎಸ್. ವಿ. ವಿದ್ಯಾ ಸಂಸ್ಥೆಯಲ್ಲಿ ಹೈಸ್ಕೂಲ್ ವಿಭಾಗದ ಶಿಕ್ಷಕರಾಗಿ, ಕಾಲೇಜು ವಿಭಾಗದಲ್ಲಿ ಹಿಂದಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಆರ್.ಎಫ್. ಲೂವಿಸ್ ಅವರು ಸೇವಾ ನಿವೃತ್ತಿ ಹೊಂದಿದ ಸಂದರ್ಭ ಆಡಳಿತ ಮಂಡಳಿ ಹಾಗೂ ಸಿಬ್ಬಂದಿವರ್ಗದ ವತಿಯಿಂದ ವಿದಾಯ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಸಮಾರಂಭದ ಅಧ್ಯಕ್ಷತೆ ವಹಿಸಿದ  ಜಿ.ಎಸ್.ವಿ.ಎಸ್. ಅಸೋಸಿಯೇಶನ್ ಅಧ್ಯಕ್ಷ ಬಿ. ಮಂಜುನಾಥ ಶೆಣೈ ಲೂವಿಸ್ ಅವರನ್ನು ಸಂಮಾನಿಸಿ ಗೌರವಿಸಿದರು. ಆಡಳಿತ ಮಂಡಳಿಯ ಎನ್. ಸದಾಶಿವ ನಾಯಕ್ ಶುಭ ಹಾರೈಸಿದರು. ಕಾಲೇಜಿನ ಪ್ರಾಂಶುಪಾಲೆ ಸರಸ್ವತಿ ರಾವ್ ಕೆ. ನಲ್ನುಡಿಗಳನ್ನಾಡಿದರು. ಉಪನ್ಯಾಸಕರಾದ ಕವಿತ ಎಂ.ಸಿ, ವೆಂಕಟೇಶ್ ಮೂರ್ತಿ ಎನ್.ಸಿ, ಶಿಕ್ಷಕರಾದ ಸದಾನಂದ ವೈದ್ಯ ಲೂವಿಸ್ ಅವರ ಸೇವಾವಧಿಯ ಅನುಪಮ ಕ್ಷಣಗಳನ್ನು ನೆನಪಿಸಿ, ವಿದಾಯದ ಮಾತುಗಳನ್ನಾಡಿದರು. ಪ್ರೌಢಶಾಲಾ ವಿಭಾಗದ ಉಪಪ್ರಾಂಶುಪಾಲ ವಾಮನದಾಸ ಭಟ್ಟರು ಸ್ವಾಗತಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ನಾಗರಾಜ ಶೆಟ್ಟಿ ವಂದಿಸಿದರು. ಕನ್ನಡ ಉಪನ್ಯಾಸಕ ಸುಜಯೀಂದ್ರ ಹಂದೆ ಎಚ್. ನಿರ್ವಹಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com