ಸ್ವಾಧೀನ ಕಳೆದುಕೊಂಡು ಹಾಸಿಗೆ ಹಿಡಿದ ನರಸಿಂಹ ಪೂಜಾರಿ ಕುಟುಂಬಕ್ಕೆ ಬೇಕಿದೆ ನೆರವು

ಕುಂದಾಪುರ: ದುಡಿಯುವ ವ್ಯಕ್ತಿ ಕೈಕಾಲುಗಳೇ ಸ್ವಾಧೀನ ಕಳದುಕೊಂಡರೆ? ಅದರಲ್ಲೂ ಬಡ ಕುಟುಂಬ ಹೇಗೆ ತಾನೆ ಜೀವನ ನಡೆಸಬೇಕು?
      ಬದುಕು ನಡೆಸುವುದೇ ಕಷ್ಟವಾಗುವ ಪರಿಸ್ಥಿತಿಯನ್ನು ಇಂದು ಕುಂದಾಪುರ ತಾಲೂಕಿನ ವಂಡ್ಸೆ ಪೇಟೆಯ ನರಸಿಂಹ ಪೂಜಾರಿ ಕುಟುಂಬ ಎದುರಿಸುತ್ತಿದೆ.
ಲಾರಿ ಚಾಲಕರಾಗಿ ಕೆಲಸ ನಿರ್ವಹಿಸಿ ತನ್ನ ಕುಟುಂಬವನ್ನು ಸಾಕುತ್ತಿದ್ದ ನರಸಿಂಹ ಪೂಜಾರಿ ಮೂರು ವರ್ಷಗಳಿಂದ ಕೈಕಾಲುಗಳ ಸ್ವಾಧೀನ ಕಳೆದುಕೊಂಡು ಹಾಸಿಗೆ ಹಿಡಿದಿದ್ದಾರೆ. ಮೊದಲೇ ಬಡತನದ ಬೇಗೆಯಲ್ಲಿ ಬೇಯುತ್ತಿರುವ ಈ ಕುಟುಂಬದ ಭಾರ ಈಗ ಶಾಲೆಗೆ ಹೋಗಬೇಕಾದ ಮಕ್ಕಳ ಮೇಲೂ ಬಿದ್ದಿದೆ.
ಹಿರಿಯ ಮಗ ಹರೀಶ್ ಸ್ಥಳೀಯ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪಾಸಾಗಿ ಮನೆ ಪಕ್ಕದ ಎಲೆಕ್ಟ್ರಿಕಲ್ ಅಂಗಡಿಯಲ್ಲಿ 1,000 ಸಂಬಳಕ್ಕೆ ಕೆಲಸಕ್ಕೆ ಸೇರಿದ್ದಾನೆ. ಮಗಳು ಶೈಲಜಾ ಸ್ಥಳೀಯ ಹೈಸ್ಕೂಲಿನಲ್ಲಿ 9ನೇ ತರಗತಿ ಪಾಸಾಗಿ ಮನೆ ಬಳಿಯ ಚಪ್ಪಲಿ ಅಂಗಡಿಯಲ್ಲಿ 1,000 ಸಂಬಳಕ್ಕೆ ಕೆಲಸಕ್ಕೆ ಸೇರಿದ್ದಾಳೆ. ಪಾಠ ಓದುವ, ಆಟ ಆಡುವ ವಯಸ್ಸಿನಲ್ಲಿ ಈ ಮಕ್ಕಳು ಕೆಲಸಕ್ಕೆ ಹೋಗಿ ಕುಟುಂಬ ಸಾಕಬೇಕಾಗಿದೆ.
  ಈಗ ಪರಾವಲಂಬಿ ಬದಕು: ಮೂರು ವರ್ಷಗಳ ಹಿಂದೆ ಪೂಜಾರಿ ಕಾಲಿನ ಸ್ವಾಧೀನ ತಪ್ಪಿದೆ. ಆರಂಭದಲ್ಲಿ ಕಾಲಿನಿಂದ ಚಪ್ಪಲಿ ಜಾರಲು ಆರಂಭಿಸಿ ಬಳಿಕ ಚಪ್ಪಲಿಗಳನ್ನು ಹಿಡಿದಿಟ್ಟುಕೊಳ್ಳುವ ಶಕ್ತಿಯನ್ನೇ ಕಾಲ ಬೆರಳುಗಳು ಕಳೆದುಕೊಂಡವು. ನಂತರ ಕೈ ಬೆರಳುಗಳು ಇದೇ ಸ್ಥಿತಿ ತಲುಪಿದವು.
ಚಿಕಿತ್ಸೆಗಾಗಿ ಕಳೆದ ಮೂರು ವರ್ಷಗಳಿಂದ ಮಣಿಪಾಲ್ ಮತ್ತು ಕುಂದಾಪುರದ ನಾಟಿ ವೈದ್ಯರಿಂದಲೂ ಚಿಕಿತ್ಸೆ ಮಾಡಿಸಿದರು. ಎಷ್ಟೇ ಚಿಕಿತ್ಸೆ ಮಾಡಿಸಿದರೂ ಹಣ ಖರ್ಚಾಯಿತೇ ವಿನಾ ನರ ದೌರ್ಬಲ್ಯಗಳಿಂದ ಉಂಟಾದ ಸಮಸ್ಯೆಗಳು ಸರಿಯಾಗಲೇ ಇಲ್ಲ.
ಸಂಘ-ಸಂಸ್ಥೆಗಳು, ದಾನಿಗಳು, ಹೃದಯವಂತರು ಮಾನವೀಯ ನೆಲೆಯಲ್ಲಿ ಈ ಕುಟುಂಬದ ಕಡೆಗೆ ಗಮನ ಹರಿಸಬೇಕು. ಸಹಾಯ ಮಾಡಬಯಸುವವರು, ಅವರ ಪತ್ನಿ ಬಾಬಿ ನರಸಿಂಹ ಪೂಜಾರಿ ಹೆಸರಿನಲ್ಲಿರುವ ಸಿಂಡಿಕೇಟ್ ಬ್ಯಾಂಕ್‌ನ ವಂಡ್ಸೆ ಶಾಖೆಯ ಉಳಿತಾಯ ಖಾತೆ ಸಂಖ್ಯೆ 01532210000358ಗೆ ಹಣ ಸಲ್ಲಿಸಬಹುದು. ಸಂಪರ್ಕ: 9741474109.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com