ಜನರ ನಿರೀಕ್ಷೆಗಳಿಗೆ ಬ್ಯಾಂಕ್ ಸ್ಪಂದಿಸಲಿ: ಎಸ್. ಜನಾರ್ದನ್

ಬೈಂದೂರು: ಈ ವರೆಗೆ ವಾಣಿಜ್ಯ ಬ್ಯಾಂಕ್ ಹೊಂದಿರದ ಮರವಂತೆಯಲ್ಲಿ ಇತ್ತೀಚೆಗಷ್ಟೆ ಸಿಂಡಿಕೇಟ್ ಬ್ಯಾಂಕ್ ತನ್ನ ಶಾಖೆಯನ್ನು ತೆರೆಯುವ ಮೂಲಕ ಆ ಕೊರತೆಯನ್ನು ನೀಗಿದೆ. ಗ್ರಾಮೀಣ ಜನರ, ಸಾಮಾನ್ಯ ಗ್ರಾಹಕರ ನಡುವೆ ಬೆಳೆದು ಬಂದಿರುವ ಸಿಂಡಿಕೇಟ್ ಬ್ಯಾಂಕ್ ಬಗೆಗೆ ಮರವಂತೆಯ ಜನರು ದೊಡ್ಡ ನಿರೀಕ್ಷೆಗಳನ್ನು ಇರಿಸಿಕೊಂಡಿದ್ದು, ಅವುಗಳಿಗೆ ತಕ್ಕಂತೆ ಬ್ಯಾಂಕ್ ಶಾಖೆ ಸ್ಪಂದಿಸಲಿ ಎಂದು ಮರವಂತೆ ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷ ಎಸ್. ಜನಾರ್ದನ ಆಶಿಸಿದರು.
       ಸಿಂಡಿಕೇಟ್ ಬ್ಯಾಂಕ್‌ನ ಮರವಂತೆ ಶಾಖೆಯಲ್ಲಿ ನಡೆದ ಗ್ರಾಹಕರ ಸಮಾವೇಶದಲ್ಲಿ ಅವರು ಮುಖ್ಯ ಅತಿಥಿಯಾಗಿದ್ದರು.   ಮರವಂತೆ ಪ್ರಧಾನವಾಗಿ ಕೃಷಿ, ಮೀನುಗಾರಿಕೆ, ಹೈನುಗಾರಿಕೆ ಮತ್ತು ಚಿಕ್ಕಪುಟ್ಟ ವೃತ್ತಿ ನಡೆಸುವವರಿಂದ ಕೂಡಿದೆ. ಬ್ಯಾಂಕ್ ಅವರೆಲ್ಲರ ಆರ್ಥಿಕ ಸಬಲೀಕರಣಕ್ಕೆ ಸೂಕ್ತವೆನಿಸುವ ಯೋಜನೆಗಳನ್ನು ಕಾರ್ಯಗತಗೊಳಿಸಿದರೆ ಜನರಿಗೂ, ಬ್ಯಾಂಕ್ ಶಾಖೆಗೂ ಹಿತವಾಗಲಿದೆ ಎಂದು ಅವರು ಹೇಳಿದರು.
   ಶಾಖಾ ಪ್ರಬಂಧಕ ಕೆ. ವೇಣುಗೋಪಾಲ ಕಿಣಿ ಸ್ವಾಗತಿಸಿ, ಬ್ಯಾಂಕ್‌ನಲ್ಲಿ ಲಭ್ಯವಿರುವ ಯೋಜನೆಗಳನ್ನು ವಿವರಿಸಿದರು. ನೂತನ ಶಾಖೆಯ ಮುನ್ನಡೆಗೆ ಎಲ್ಲ ವರ್ಗದ ಗ್ರಾಹಕರು ಸಹಕಾರ ನೀಡಬೇಕು ಎಂದು ವಿನಂತಿಸಿದರು. ಗ್ರಾಹಕ ಬಿ. ನಾಗೇಶ ಶೇಟ್ ಶಾಖೆಯಲ್ಲಿ ಎಟಿ‌ಎಂ ಆರಂಭಿಸಬೆಕೆಂದು ಸೂಚನೆ ನೀಡಿದರು. ಅತಿಥಿಗಳಾಗಿದ್ದ ಹಿರಿಯ ಗ್ರಾಹಕ ಎಂ. ವಿಶ್ವನಾಥ ಆರ್. ಶ್ಯಾನುಭಾಗ್ ಶುಭ ಕೋರಿದರು. ಸಿಬ್ಬಂದಿ ಎಚ್. ಶ್ರೀನಿವಾಸ ವಂದಿಸಿದರು. 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com