ಯೋಗದಿಂದ ಸ್ವಾಸ್ತ್ಯ ಸಮಾಜವನ್ನು ನಿರ್ಮಾಣ ಸಾಧ್ಯ: ಡಾ|ವಿವೇಕ್‌

ಕೋಟ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅತಿಯಾದ ಮಾನಸಿಕ ಒತ್ತಡ ಮಕ್ಕಳಲ್ಲಿ ಹೆಚ್ಚುತ್ತಿದ್ದು ಪರಿಣಾಮವಾಗಿ ಮಾನಸಿಕ ಮತ್ತು ದೆ„ಹಿಕ ರೋಗಗಳಿಂದ ಕೂಡಿರುತ್ತಾರೆ. ಇದರಿಂದ ವಿದ್ಯಾರ್ಥಿಗಳ ಬೌದ್ಧಿಕ ಮಟ್ಟ ಕುಸಿಯುತ್ತದೆ . ವಿದ್ಯಾರ್ಥಿಗಳಲ್ಲಿ ಏಕಾಗ್ರತೆ, ಆತ್ಮವಿಶ್ವಾಸ ಮತ್ತು ನೆನಪಿನ ಶಕ್ತಿ ಹೆಚ್ಚಿಸಲು, ಒತ್ತಡವನ್ನು ಸಹಿಸಲು, ತಳಮಳವನ್ನು ನಿವಾರಿಸಲು ಯೋಗ ಶಿಕ್ಷಣ ಅತೀ ಅಗತ್ಯ ಪ್ರತಿನಿತ್ಯ ಯೋಗಾಭ್ಯಾಸ ಮಾಡಿದಲ್ಲಿ ನಮ್ಮ ವ್ಯಕ್ತಿತ್ವ ಬದಲಾವಣೆಯಾಗುತ್ತದೆ. ಯೋಗದಿಂದ ಉತ್ತಮ ಸ್ವಾಸ್ತ್ಯ ಸಮಾಜವನ್ನು ನಿರ್ಮಿಸಲು ಸಾಧ್ಯ ಎಂದು ಸ್ವಾಸ್ತ್ಯ ಹೆಲ್ತ್‌ ಕೇರ್‌ ಸೆಂಟರ್‌ನ ನಿರ್ದೇಶಕ ಡಾ|ವಿವೇಕ್‌ ಹೇಳಿದರು.

ಅವರು ವಿವೇಕ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿಜ್ಞಾನ ಸಂಘ ಮತ್ತು ಇಕೋ ಕ್ಲಬ್‌ಗಳ ಜಂಟಿ ಆಶ್ರಯದಲ್ಲಿ 10ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಜರುಗಿದ 5 ದಿನಗಳ ಯೋಗ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಯೋಗ ಗುರುಗಳಾದ ಗಣೇಶ್‌, ಷಣ್ಮುಗಂ ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದರು. ಉಪಪ್ರಾಂಶುಪಾಲೆ ಗೀತಾ ನಾಯಕ್‌ ಸ್ವಾಗತಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದರು ಎಮ್‌.ಎನ್‌. ಮಧ್ಯಸ್ಥರ ವಂದಿಸಿದರು. ಇಕೋ ಕ್ಲಬ್‌ ಮತ್ತು ವಿಜ್ಞಾನ ಸಂಘದ ಅಧ್ಯಕ್ಷರಾದ ಆದಿತ್ಯ ಹೊಳ್ಳ ಮತ್ತು ನಿತಿನ್‌ ಕುಮಾರ್‌ ಉಪಸ್ಥಿತರಿದ್ದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com