ಅತಿಥಿ ಉಪನ್ಯಾಸಕರ ಆನ್‍ಲೈನ್ ನೇಮಕಾತಿಯ ಗೊಂದಲ ನಿವಾರಿಸಿ: ಸರಕಾರಕ್ಕೆ ಮನವಿ

ಕುಂದಾಪುರ: ರಾಜ್ಯಾದ್ಯಂತ ಸರಕಾರಿ ಪದವಿ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರ ಆನ್‍ಲೈನ್ ನೇಮಕಾತಿಯಲ್ಲಿನ ಗೊಂದಲವನ್ನು ನಿವಾರಿಸಿ ಸರ್ಕಾರಕ್ಕೆ ಮನವಿ ಸಲ್ಲಿಸುವ ಸಭೆ ಕೋಟೇಶ್ವರದಲ್ಲಿ ನಡೆಯಿತು.
ಇಲ್ಲಿನ ರೋಟರಿ ಸಭಾ ಭವನದಲ್ಲಿ ಬುಧವಾರ ನಡೆದ ಜಿಲ್ಲಾ ಅತಿಥಿ ಉಪನ್ಯಾಸಕರ ಸಭೆಯಲ್ಲಿ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಉಪನ್ಯಾಸಕ ನೇಮಕಾತಿಯ ಬಗ್ಗೆ ಹೊರಡಿಸಿದ ಸುತ್ತೋಲೆ ಗೊಂದಲದಿಂದ ಕೂಡಿದ್ದು, ಉಪನ್ಯಾಸಕರ ಜೀವನ ಭದ್ರತೆಯ ಬಗ್ಗೆ ಎಲ್ಲಿಯೂ ಪ್ರಸ್ತಾವವಿಲ್ಲದೆ ಹಿರಿಯ ಉಪನ್ಯಾಸಕರು  ಕೆಲಸ ಕಳೆದುಕೊಳ್ಳುವ ಭೀತಿ ಉಂಟಾಗಿದೆ.  ಇತ್ತೀಚಿನ ಸೆಮಿಸ್ಟರ್ ಪದ್ಧತಿಯಲ್ಲಿ ಜಾಸ್ತಿ ಅಂಕ ಪಡೆದವರು ಮಾತ್ರ ಆಯ್ಕೆಗೊಳ್ಳುತ್ತಾರೆ.   ವಾರ್ಷಿಕ ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿದ ಉಪನ್ಯಾಸಕರು ಸ್ಪರ್ಧಿಸಲಾಗದೇ ಬೀದಿಪಾಲಾಗುವ ಎಲ್ಲಾ ಲಕ್ಷಣಗಳೇ ಜಾಸ್ತಿ.
ಹಿಂದೆ ಎರಡು ಕಾಲೇಜಿನಲ್ಲಿ ಒಟ್ಟು 16 ಗಂಟೆ ಉಪನ್ಯಾಸ ನೀಡಬಹುದಾಗಿತ್ತು. ಆದರೆ ಈಗ ಒಂದೇ ಕಡೆಯಲ್ಲಿ 8 ಗಂಟೆ ಉಪನ್ಯಾಸ ನೀಡುವ ಸುತ್ತೋಲೆ ಉಪನ್ಯಾಸಕರ ಕೆಲಸದ ಹಕ್ಕನ್ನು ಕಸಿದು ಕೊಳ್ಳುವ ಹುನ್ನಾರ ನಡೆದಿದೆ. 
ಯಥಾಸ್ಥಿತಿಯಂತೆ ಎರಡು ಕಡೆ ಸೇವೆ ನೀಡಲು ಅವಕಾಶ ನೀಡಿ, ಇಲ್ಲವೆ ಒಂದೇ ಕಡೆಯಾದರೆ 16 ರಿಂದ 20 ಸಾವಿರ ಸಂಬಳ ನೀಡಿ ನೇಮಕಾತಿಯ ಗೊಂದಲ ನಿವಾರಿಸಿ ಹಿಂದೆ ಸೇವೆ ಸಲ್ಲಿಸಿದವರನ್ನು ಉಳಿಸಿಕೊಳ್ಳಬೇಕು ಎಂಬ ನಿರ್ಣಯವನ್ನು ಕೈಗೊಳ್ಳಲಾಯಿತು.

ಜಿಲ್ಲಾ ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಸಭೆಯ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಂಚಾಲಕ ಆನಂದ ಪೂಜಾರಿ, ಕಾರ್ಯದರ್ಶಿ ಸುಬ್ರಹ್ಮಣ್ಯ, ತಾಲೂಕು ಅಧ್ಯಕ್ಷ ಪಾಂಡುರಂಗ, ಕಾರ್ಯದರ್ಶಿ ಗುಲಾಬಿ, ಪಂಜು ಬಿಲ್ಲವ ಉಪಸ್ಥಿತರಿದ್ದರು. 
ಪೋಟೋ:  ಜಿಲ್ಲಾ ಗೆಸ್ಟ್ ಲೆಕ್ಚರ್‍ರ್ ಯೂನಿಯನ್1-2

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com