ಜೂ. 16ರಂದು ಕೊಲ್ಲೂರಿನಲ್ಲಿ ಶತಚಂಡಿಯಾಗ

ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾದೇವಿಯ ಜನ್ಮಾಷ್ಟಮಿ ಅಂಗವಾಗಿ ಜೂ. 16ರಂದು ಶ್ರೀ ದೇವಳದಲ್ಲಿ ಅರ್ಚಕ ವೃಂದದಿಂದ ಶತಚಂಡಿಯಾಗ ನಡೆಯಲಿದ್ದು, ಹೊಸನಗರದ ಜಗದ್ಗುರು ಶ್ರೀ ಶಂಕರಾಚಾರ್ಯ ರಾಘವೇಶ್ವರ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
       ಜೂ. 14ರಂದು ಶತಚಂಡಿಯಾಗದ ಅನುಷ್ಠಾನ ಪ್ರಾರಂಭಗೊಳ್ಳಲಿದ್ದು, ಅರ್ಚಕರಿಂದ ಜಪ, ಪಾರಾಯಣ ನಡೆಯಲಿದೆ. ಗಣಪತಿ ಹೋಮ, ಗಾಯತ್ರಿ ಹೋಮ, ಶ್ರೀ ಸೂಕ್ತ, ಪುರುಷ ಸೂಕ್ತ ಹೋಮ ಹಾಗೂ ರುದ್ರ ಹೋಮಗಳು ನಡೆಯಲಿದ್ದು, ಶನಿವಾರ ನವಗ್ರಹ ಹೋಮ, ಸುವಾಸಿನಿ ಪೂಜೆ, ದೇವತಾ ಪೂಜೆ ಜರಗಲಿದೆ. ಜೂ. 16ರಂದು ಬೆಳಗ್ಗೆ ಜಪಾಂಗ, ನವಾಕ್ಷರಿ ಹೋಮ ಚಂಡಿಕಾ ಹೋಮದ ಪೂರ್ಣಾಹುತಿ ರಾಘವೇಶ್ವರ ಸ್ವಾಮೀಜಿ ಅವರ ದಿವ್ಯ ಸಾನ್ನಿಧ್ಯದಲ್ಲಿ ನಡೆಯಲಿದೆ ಎಂದು ಶತಚಂಡೀ ಯಾಗದ ಸಂಪೂರ್ಣ ಉಸ್ತುವಾರಿ ವಹಿಸಿರುವ ಅರ್ಚಕ ವೃಂದ ತಿಳಿಸಿದೆ. ಶ್ರೀ ದೇವಿಯ ಜನ್ಮಾಷ್ಟಮಿಯ ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತರು ಪಾಲ್ಗೊಳ್ಳಬೇಕೆಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣಪ್ರಸಾದ್‌ ಅಡ್ಯಂತಾಯ ತಿಳಿಸಿದ್ದಾರೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com