ಕೋಟೇಶ್ವರದಲ್ಲಿ ಉದ್ಯೋಗ ಮೇಳ ಅರ್ಹ ಅಭ್ಯರ್ಥಿಗಳ ಆಯ್ಕೆ

ಕುಂದಾಪುರ:  ಸಹಯೋಗ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಕೋಟೇಶ್ವರ ಕಾಳಾವರ ವರದರಾಜ.ಎಂ.ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ನಡೆದ ಉದ್ಯೋಗ ಮೇಳದಲ್ಲಿ ವಿವಿಧ ಕಂಪೆನಿಗಳಿಂದ ಸಂದರ್ಶನ ನಡೆಸಿ ಆಯ್ಕೆ ಪ್ರಕ್ರಿಯೆ ನಡೆಯಿತು.
       ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳನ್ನು ಸಾಂಸ್ಥಿಕ ವಲಯದತ್ತ ಕೊಂಡೊಯ್ಯುವ ಹೊಸ ಉದ್ದೇಶದಿಂದ ಸುಮಾರು ಮೂರು ವರ್ಷಗಳಿಂದ ಕರ್ನಾಟಕ ಸರ್ಕಾರವು ಉನ್ನತ ಶಿಕ್ಷಣದಲ್ಲಿ `ಹೊಸ ಹೆಜ್ಜೆ' ಎಂಬ ವಿಶೇಷ ಕಾರ್ಯಕ್ರಮದಡಿಯಲ್ಲಿ ಪದವಿ ವಿದ್ಯಾರ್ಥಿಗಳಿಗೆ ಆಂಗ್ಲ, ವಿಕಸನ, ಸಹಯೋಗ ಎಂಬ ತರಬೇತಿ ನೀಡಿ ಉದ್ಯೋಗ ಸಾಮಥ್ರ್ಯವನ್ನು ಹೆಚ್ಚಿಸಿದೆ.ಇದರ ಸದ್‍ವಿನಿಯೋಗ ಪಡೆಯಲು  ಈ ಕಾರ್ಯಕ್ರಮದ ಸಹಬಾಗಿ  ಲಾರಸ್ ಎಜ್ಯುಟೆಕ್ ಕಂಪೆನಿ ಪದವಿ ವಿದ್ಯಾರ್ಥಿಗಳಿಗೆ ತಾಲೂಕು ಮಟ್ಟದಲ್ಲಿ ಉದ್ಯೋಗ ಮೇಳವನ್ನು ಹಮ್ಮಿಕೊಂಡಿದ್ದು, ಸಹಯೋಗ ವೃತ್ತಿ ಶಿಕ್ಷಣ ತರಬೇತಿ ಪಡೆದ ಶಂಕರನಾರಾಯಣ, ಕೋಟ,ಕೋಟೇಶ್ವರ ಸರಕಾರಿ ಪದವಿ ಕಾಲೇಜಿನ ಪದವಿ ವಿದ್ಯಾರ್ಥಿಗಳನ್ನು ಆಹ್ವಾನಿಸಲಾಗಿತ್ತು. 12 ಕಂಪೆನಿಗಳಿಂದ 100ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸಂದರ್ಶನ ನಡೆಸಿ ಅರ್ಹ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಮುಂದುವರಿಯಿತು. 
ಲಾರಸ್ ಕಂಪೆನಿಯ ರಾಜ್ಯ ಸಂಚಾಲಕ ಗುರುರಾಜ, ಕೋಟೇಶ್ವರ ಕಾಲೇಜಿನ ಸಹಯೋಗ ಸಂಚಾಲಕ ಸುಬ್ರಹ್ಮಣ್ಯ, ಪ್ರಿನ್ಸಿಪಾಲ್  ಪ್ರೋ.ಎಂ.ಅಭಿಷೇಕಂ ಉಪಸ್ಥಿತರಿದ್ದರು.

ಆಯ್ಕೆ ನಡೆಸಿದ ಕಂಪೆನಿಗಳು: ಮ್ಯಾನ್ ಪವರ್, ಹಿಂದುಜಾ ಗ್ಲೋಬಲ್, ಯುರೇಕಾ ಪೊರಬ್ಸ್, ಆಸ್ತಾ ಆಕಾಡೆಮಿ, ಸುವೇಗಾ, ಟೀಮ್ ಲೀಸ್, ಎಚ್.ಜಿ.ಎಸ್, ಐಸಿ ಸ್ಕಾಪಿಂಗ್, ಎಪಲ್, ಐ-ಪೋನ್, ಎಚ್.ಪಿ, ಐಬಿಎಂ
ಪೊಟೋ ಇದೆ


ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com