ಕಾಂಗ್ರೇಸ್‌ನಿಂದ ಜನಪರ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ

ಕುಂದಾಪುರ: ಈ ಹಿಂದೆ ಆಡಳಿತ ನಡೆಸಿದ್ದ ಬಿಜೆಪಿ ಜಾತಿ ಹಾಗೂ ಧರ್ಮದ ಹೆಸರಿನಲ್ಲಿ ಸಮಾಜವನ್ನು ವಿಭಜನೆ ಮಾಡುವ ಪ್ರಯತ್ನ ಮಾಡಿತ್ತು ಆದರೆ ಕಾಂಗ್ರೇಸ್‌ ಎಲ್ಲರ ಸಾಮೂಹಿಕ ಪ್ರಯತ್ನದ ಮೂಲಕ ರಾಜ್ಯವನ್ನು ಅಭಿವೃದ್ಧಿಯತ್ತಕೊಂಡೊಯ್ಯವಲ್ಲಿ ಸಂಘಟಿತ ಪ್ರಯತ್ನ ಮಾಡಲಿದೆ . ಮುಂದಿನ ದಿನಗಳಲ್ಲಿ ಆಡಳಿತಕ್ಕೆ ಚುರಕು ಮುಟ್ಟಿಸುವುದರ ಜೊತೆಗೆ ಜನಸಾಮಾನ್ಯರ, ರೈತರ, ಗ್ರಾಮೀಣ ಜನರ ಸಮಸ್ಯೆಗಳ ನಿವಾರಣೆಯ ಬಗ್ಗೆ ಹೆಚ್ಚಿನ ಆದ್ಯತೆ ನೀಡಲಿದೆ ಎಂದು ನಗರಾಭಿವೃದ್ಧಿ ಸಚಿವ ವಿನಯಕುಮಾರ್‌ ಸೊರಕೆ ಹೇಳಿದರು.
       ಅವರು ಕುಂದಾಪುರ ಆರ್‌.ಎನ್‌.ಶೆಟ್ಟಿ ಸಭಾಂಗಣದಲ್ಲಿ ಜರಗಿದ ಅಭಿನಂದನಾ ಸಭೆಯಲ್ಲಿ ಮಾತನಾಡಿದರು.
      ಅಧಿಕಾರ ವಹಿಸಿಕೊಂಡ ಪ್ರಥಮ ಹಂತದಲ್ಲಿಯೇ ಜನಪರ ಕಾಳಜಿಯ ಸರಕಾರ ಎನ್ನುವ ಮನೋಭನಾವನೆಯನ್ನು ಮೂಡಿಸಿದ ಸರಕಾರ ಮುಂದಿನ ದಿನಗಳಲ್ಲಿ ಜನರ ಪಡಿತರ ಚೀಡಿ, ಕುಡಿಯುವ ನೀರು, ಅಕ್ರಮ ಸಕ್ರಮ ಮೊದಲಾದ ಸಮಸ್ಯೆಗಳ ಬಗ್ಗೆ ಗಮನಾರ್ಹ ಚಿಂತನೆ ನಡೆಸಲಿದೆ ಎಂದರು.
        ಪಡಿತ ಚೀಟಿ ವಿತರಣೆಯಲ್ಲಿ ಕಂಡುಕೊಂಡ ಲೋಪದೋಷಗಳನ್ನು ಸರಿಪಡಿಸುವ ದೃಷ್ಟಿಯಲ್ಲಿ ವಿಮರ್ಶೆ ನಡೆಸಲಾಗಿದೆ. ಈಗಾಗಲೇ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದ್ದು ಈ ಜಿಲ್ಲೆಯಲ್ಲಿ ರದ್ದುಗೊಂಡ ಸುಮಾರು 26 ಸಾವಿರ ಪಡಿತರ ಚೀಟಿ ಪುನರಪಿ ನೀಡುವ ಬಗ್ಗೆ ಚರ್ಚೆ ನಡೆಸಲಾಗಿದೆ. ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಕಳೆದ 10ರಿಂದ 15 ವರ್ಷಗಳಿಂದ ಮನೆ ಕಟ್ಟಿಕೊಂಡು ನೆಲೆಸಿರುವವರಿಗೆ ಆದ್ಯತಾ ನೆಲೆಯಲ್ಲಿ ಪಡಿತರ ಚೀಟಿಯನ್ನು ನೀಡುವ ಬಗ್ಗೆ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗಿದೆ. ಅಕ್ರಮ ಸಕ್ರಮದ ಸಮಸ್ಯೆ -ಅರ್ಜಿ ಪರಿಹಾರದ ಬಗ್ಗೆ ಕ್ರಮತೆಗೆದುಕೊಳ್ಳಲಾಗಿದ್ದು, ಈಗಾಗಲೇ ಇರುವ ಸುಮಾರು 11 ಸಾವಿರ ಕಡತಗಳ ಶೀಘ್ರ ವಿಲೇವಾರಿಗೆ ಕ್ರಮ ತೆಗೆದುಕೊಂಡು ತಕ್ಷಣ ಹಕ್ಕುಪತ್ರ ನೀಡುವ ಬಗ್ಗೆ ಈಗಾಗಲೇ ನಿರ್ದೆಶನ ನೀಡಲಾಗಿದೆ. ಸರ್ವೆ ಕಾರ್ಯದ ತೊಂದರೆ ನಿವಾರಿಸುವಲ್ಲಿ ಈಗಾಗಲೇ ಜಿಲ್ಲಾಧಿಕಾರಿ ಅವರಲ್ಲಿ ಚರ್ಚೆ ನಡೆಸಲಾಗಿದ್ದು ಬಾಕಿ ಉಳಿದಿರುವ ಸುಮಾರು 10 ಸಾಚಿರ ಅರ್ಜಿಗಳ ವಿಲೇವಾರಿಗೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದರು
      ಬಹುಗ್ರಾಮ ಕುಡಿಯುವ ನೀರಿನ ಯೋಜನೆ: ಜಿಲ್ಲೆಯಲ್ಲಿ ಬೇಸಿಗೆಯ ಅಂತ್ಯದಲ್ಲಿ ತಲೆದೋರಬಹುದಾದ ಕುಡಿಯುವ ನೀರಿನ ಯೋಜನೆಯ ನಿವಾರಣೆ ಬಗ್ಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸೇರ್ಪಡೆಗೊಳಿಸುವ ಬಗ್ಗೆ ಈ ಗಾಗಲೇ ಪ್ರಾಸ್ತಾವನೆಯನ್ನು ಕಳುಹಿಸಕೊಡಲಾಗಿದ್ದು, ಮುಂದಿನ ವರ್ಷಗಳಲ್ಲಿ ತ್ವತರಿತ ಗತಿಯಲ್ಲಿ ಶಾಶ್ವತ ಕುಡಿಯುವ ನೀರಿನ ಯೋಜನೆಯನ್ನು ರೂಪಿಸುವಲ್ಲಿ ಸರಕಾರ ಬದ್ಧವಾಗಿದೆ ಎಂದರು.
       ಬಿಜೆಪಿ ಜಿಲ್ಲೆಯಲ್ಲಿ ಅಶಾಂತಿಯ ವಾತಾವರಣಾವನ್ನು ಸೃಷ್ಟಿಸಿ ಸಮಸ್ಯೆಯನ್ನು ಹುಟ್ಟುಹಾಕಿದೆ. ಸಮಸ್ಯೆ ಹುಟ್ಟು ಹಾಕಿದ ನಂತರ ಪರಿಹಾರ ಕಂಡುಕೊಳ್ಳುವುದಕ್ಕಿಂತ ಸಮಸ್ಯೆಯ ವಾತಾವರಣ ಸೃಷ್ಟಿಯಾಗದಂತೆ ಮೊದಲೇ ನೋಡಿಕೊಳ್ಳುವುದು ಸೂಕ್ತ .ಆದ್ದರಿಂದ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆತೆಯನ್ನು ಕಂಡುಕೊಳ್ಳುವಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
       ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಧಾನಪರಿಷತ್‌ ಸದಸ್ಯ ಕೆ.ಪ್ರತಾಪ್‌ಚಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಚಿವರಾಗಿ ಆಯ್ಕೆಯಾಗಿ ಕುಂದಾಪುರಕ್ಕೆ ಆಗಮಿಸಿತ್ತಿರುವ ವಿನಯ ಕುಮಾರ್‌ ಸೊರಕೆ ಅವರನ್ನು ಕುಂದಾಪುರ ಬ್ಲಾಕ್‌ ಕಾಂಗ್ರೇಸ್‌ ಪರವಾಗಿ ಸಮ್ಮಾನಿಸಲಾಯಿತು.
     ಕೋಟ ಬ್ಲಾಕ್‌ ಕಾಂಗ್ರೇಸ್‌ ಅಧ್ಯಕ್ಷ ಶಂಕರ್‌ ಕುಂದರ್‌, ಜಿಲ್ಲಾ ಕಾಂಗ್ರೇಸ್‌ ಉಪಾಧ್ಯಕ್ಷ ಬಿ.ಹಿರಿಯಣ್ಣ, ಕೆಪಿಸಿಸ ಸದಸ್ಯ ಉದಯಚಂದ್ರ ಶೆಟ್ಟಿ , ಮಹಿಳಾ ಕಾಂಗ್ರೇಸ್‌ ಅಧ್ಯಕ್ಷೆ ಜ್ಯೋತಿ ಎಸ್‌.ಪುತ್ರನ್‌, ಯುವ ಕಾಂಗ್ರೇಸ್‌ ಅಧ್ಯಕ್ಷ ವಿಕಾಸ್‌ ಹೆಗ್ಡೆ, ನಗರ ಕಾಂಗ್ರೇಸ್‌ ಅಧ್ಯಕ್ಷ ಗಣೇಶ್‌ ಶೇರುಗಾರ್‌, ತಾ.ಪಂ.ಸದಸ್ಯ ರಾಜು ಪೂಜಾರಿ, ಕಾಂಗ್ರೇಸ್‌ ಮುಖಂಡರುಗಳಾದ ಮಾಣಿಗೋಪಾಲ, ದಿನಕರ ಶೆಟ್ಟಿ, ಪ್ರಕಾಶ್ಚಂದ್ರ ಶೆಟ್ಟಿ, ವಾಸುದೇವ ಯಡಿಯಾಳ್‌, ಜಾಕೋಬ್‌ ಡಿಸೋಜಾ,ದೇವಕಿ ಸಣ್ಣಯ್ಯ, ಪುರಸಭಾ ಸದಸ್ಯರು, ತಾ.ಪಂ.ಸದಸ್ಯರು ಉಪಸ್ಥಿತರಿದ್ದರು.
    ಈ ಸಂದರ್ಭದಲ್ಲಿ ಕಳೆದ ವಿದಾನಸಭಾ ಚುನಾವಣೆಯಲ್ಲಿ ದುಡಿದ ಪಕ್ಷದ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಲಾಯಿತು.
     ಕುಂದಾಪುರ ಬ್ಲಾಕ್‌ ಕಾಂಗ್ರೇಸ್‌ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು, ಬ್ಲಾಕ್‌ ಕಾರ್ಯದರ್ಶಿ ನಾರಾಯಣ ಆಚಾರ್‌ ಕೋಣಿ ಕಾರ್ಯಕ್ರಮ ನಿರೂಪಿಸಿದರು, ಹರಿಪ್ರಸಾದ್‌ ಶೆಟ್ಟಿ ವಂದಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com