ಸರಕಾರದ ನೀತಿ ಬದಲಾಯಿಸಲು ಸಿಐಟಿಯುನಿಂದ ಹೋರಾಟ

ಕುಂದಾಪುರ: ಕಾರ್ಮಿಕ ವರ್ಗದ ರಾಷ್ಟ್ರವ್ಯಾಪಿ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸಿಐಟಿಯುವಿಗೆ 43ನೇ ವರ್ಷದ ಆಚರಣೆ ಅಂಗವಾಗಿ ರಾಷ್ಟ್ರವ್ಯಾಪಿ ಮೇ.30ರಿಂದ ಜೂನ್‌ ರ ತನಕ ಹೋರಾಟಗಳನ್ನು ಬಲಗೊಳಿಸಲು ಎಪ್ರಿಲ್‌ ನಡೆದ ಸಿಐಟಿಯು ರಾಷ್ಟ್ರಸಮ್ಮೇಳನದಲ್ಲಿ ನಿರ್ಣಯಿಸಿಕೊಳ್ಳಲಾಗಿದೆ ಎಂದು ಸಿಐಟಿಯು ಜಿಲ್ಲಾಧ್ಯಕ್ಷ ಕೆ.ಶಂಕರ್‌ ಹೇಳಿದರು.
       ಅವರು ಕುಂದಾಪುರ ತಹಶೀಲ್ದಾರರ ಕಚೇರಿಯ ಎದುರು ನಡೆದ ಸಿಐಟಿಯು ರಾಷ್ಟ್ರವ್ಯಾಪಿ ಪ್ರಚಾರ ಆಂದೋಲನ ಮತ್ತು ಧರಣಿ ಸತ್ಯಾಗ್ರಹವನ್ನು ಉದ್ಧೇಶಿಸಿ ಮಾತನಾಡಿದರು.
        ರಾಜ್ಯದಲ್ಲಿ ನೂತನವಾಗಿ ರಚನೆಯಾಗಿರುವ ರಾಜ್ಯ ಸರಕಾರ ಕೈಗೊಂಡಿರುವ ಹಲವಾರು ಕಾರ್ಮಿಕ ವಿರೋಧಿ ಕ್ರಮ ಹಿಂಪಡೆದು ಕಾರ್ಮಿಕರ ಪರವಾಗಿ ಕ್ರಮಗಳನ್ನು ಕೈಗೊಳ್ಳಬೇಕು. ಹಲವಾರು ಚಳುವಳಿಗಳಲ್ಲಿ ಕಾರ್ಮಿಕರ ಮೇಲೆ ಸುಳ್ಳು ಮೊಕದ್ದಮೆಯನ್ನು ಹೂಡಿರುವುದನ್ನು ಹಿಂಪಡೆಯಬೇಕು ಎಂದು ಹೇಳಿದರು. ಅಲ್ಲದೇ ಕಾರ್ಮಿಕರ ಹಲವಾರು ಬೇಡಿಕೆಗಳನ್ನು ತಕ್ಷಣವೇ ಈಡೇರಿಸಬೇಕು ಎಂದರು.
      ಸುಮಾರು ಮುನ್ನೂರಕ್ಕೂ ಅಧಿಕ ಕಾರ್ಮಿಕರು ಭಾಗವಹಿಸಿ ಬೇಡಿಕೆಗಳ ಘೋಷಣೆ ಕೋಗಿದರು. ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲಾಯಿತು.
        ಪ್ರತಿಭಟನೆಯಲ್ಲಿ ತಾಲೂಕು ಅಧ್ಯಕ್ಷ ಎಚ್‌.ನರಸಿಂಹ, ಪ್ರಧಾಕ ಕಾರ್ಯದರ್ಶಿ ಸುರೇಶ್‌ ಕಲ್ಲಾಗರ, ದಾಸ ಭಂಡಾರಿ, ವೆಂಕಟೇಶ ಕೋಣಿ, ಮಹಾಬಲ ವಿ. ಬಲ್ಕಿಸ್‌, ಸಂಗೀತಾ ಶೆಟ್ಟಿ, ರಾಜು ದೇವಾಡಿಗ, ಉಮೇಶ, ರತಿ ಶೆಟ್ಟಿ, ಸುಶೀಲ ನಾಡ,ಗಣೇಶ ತೊಂಡೆಮಕ್ಕಿ ಉಪಸ್ಥಿತರಿದ್ದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com