ಗುಜರಾತ್ ಜೇಸಿ 9 ಜನರ ತಂಡ ಆನೆಗುಡ್ಡೆ ದೇವಳಕ್ಕೆ ಭೇಟಿ

ಕುಂದಾಪುರ: ಕರಾವಳಿ ಭಾಗದ ಸಾಂಸ್ಕ್ರತಿಕ ನೆಲಗಟ್ಟು, ದಾರ್ಮಿಕ ಆಚರಣೆಗಳ ಬಗ್ಗೆ ವಿಚಾರ ವಿನಿಮಯ ಮಾಡಿಕೊಳ್ಳಲು ಈ ತಂಡ ಒಂದು ವಾರಗಳ ಕಾಲ ಕರಾವಳಿ ಭಾಗದಲ್ಲೇ ಬಿಡು ಬಿಟ್ಟಿದೆ.
    ಗುಜರಾತ್ ಜೇಸಿ ತಂಡದ ಮುಖ್ಯಸ್ಥೆ ಪ್ರೀತಿ ಜಾದವ್, ಶಿಲ್ಪಾ, ತೃಪ್ತಿ ಇವರನ್ನೊಳಗೊಂಡ ತಂಡವನ್ನು ಕುಂದಾಪುರ ಜೇಸಿ ಮತ್ತು ಕಲ್ಯಾಣಪುರ ಜೇಸಿ ವತಿಯಿಂದ ವಲಯಾಧ್ಯಕ್ಷ ಜೇಸಿ ಶ್ರೀಧರ ಪಿ.ಎಸ್. ಸ್ವಾಗತಿಸಿ ಬರಮಾಡಿಕೊಂಡರು.
    ವಲಯ ಉಪಾಧ್ಯಕ್ಷ ಜೇಸಿ ರತ್ನಾಕರ್ ಇಂದ್ರಾಳಿ, ನಿಕಟಪೂರ್ವ ವಲಯಾಧ್ಯಕ್ಷ ಜೇಸಿ ಅಲನ್ ರೋಹನ್ ವಾಜ್, ವಲಯ ನಿರ್ದೇಶಕಿ ಪೂರ್ಣೀಮ ಸುರೇಶ್, ಕುಂದಾಪುರ ಜೇಸಿ ಅಧ್ಯಕ್ಷ ಎನ್.ಪ್ರಕಾಶ್, ಕಲ್ಯಾಣಪುರ ಜೇಸಿ ಅಧ್ಯಕ್ಷ ಮಿತ್ರ ಕುಮಾರ್, ಪೂರ್ವ ವಲಯಾಧಿಕಾರಿ ರಾಜೇಶ್ ಆಚಾರ್ಯ, ಚಿತ್ರಾ ಕುಮಾರ್, ತುಳಸಿ ದಾಸ್, ಜಗದೀಶ್ ಕೆಮ್ಮಣ್ಣು, ದಿನೇಶ್ ಗೋಡೆ, ಅಕ್ಷತಾ ಗಿರೀಶ್ ಮೊದಲಾದವರು ಉಪಸ್ಥಿತರಿದ್ದರು.
ಆನೆಗುಡ್ಡೆಗೆ ಬೇಟಿ ನೀಡಿದ ಗುಜರಾತ್ ಜೇಸಿ ತಂಡ
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com