ಕೇಂದ್ರ ರೈಲ್ವೇ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಕುಂದಾಪುರ ಮೂಲದ ಬಿ.ಎನ್‌. ಶೆಟ್ಟಿ

ಕುಂದಾಪುರ: ನೂತನವಾಗಿ ಅಧಿಕಾರ ಸ್ವೀಕರಿಸಿರುವ ಕೇಂದ್ರ ಸರಕಾರದ ರೈಲ್ವೇ ಸಚಿವರ ವಿಶೇಷ ಕರ್ತವ್ಯಾಧಿಕಾರಿಯಾಗಿ ಕುಂದಾಪುರ ಮೂಲದ ಬಿ.ಎನ್‌. ಶೆಟ್ಟಿ ಬುಧವಾರ ದಿಲ್ಲಿಯ ರೈಲ್ವೇ ಭವನದಲ್ಲಿ ಅಧಿಕಾರ ಸ್ವೀಕರಿಸಿದ್ದಾರೆ.
 ಕರ್ನಾಟಕ ಆಡಳಿತ ಶ್ರೇಣಿಯ ಹಿರಿಯ ಅಧಿಕಾರಿಯಾಗಿರುವ ಬಿ.ಎನ್‌. ಶೆಟ್ಟಿ (ಬಗ್ವಾಡಿ ನಂದ್ಯಪ್ಪ ಶೆಟ್ಟಿ) ಅವರು ಕಳೆದ 37 ವರ್ಷಗಳಿಂದ ಕರ್ನಾಟಕ ಸರಕಾರದ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಕೇಂದ್ರ ಸರಕಾರದ ನಿಯೋಜನೆಯ ಸೇವೆಯಲ್ಲಿ ಇರುವ ಅವರು, ಈ ಹಿಂದೆ ಆಹಾರ ಹಾಗೂ ನಾಗರಿಕ ಪೂರೈಕೆ, ಅಂಕೆ-ಸಂಖ್ಯೆ, ಕಾರ್ಮಿಕ ಮತ್ತು ಉದ್ಯೋಗ ತರಬೇತಿ ಸಚಿವಾಲಯ ಸೇರಿದಂತೆ ಕೇಂದ್ರ ಹಾಗೂ ರಾಜ್ಯ ಸರಕಾರದ ವಿವಿಧ ಸಚಿವಾಲಯಗಳಲ್ಲಿ ಸಚಿವರ ವಿಶೇಷ ಕರ್ತವ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com