ಆಶ್ರೀತರೋಗಗಳ ನಿರ್ವಹಣೆ ಹಾಗೂ ನಿಯಂತ್ರಣ

ಕುಂದಾಪುರ: ಆಲೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರೋಗವಾಹಕ ಆಶ್ರೀತರೋಗಗಳ ನಿರ್ವಹಣೆ ಹಾಗೂ ನಿಯಂತ್ರಣ ಸಮನ್ವಯ ಸಮಿತಿಯ ಸಭೆ ಆಲೂರು ಪ್ರಾಥಮಿ ಆರೋಗ್ಯ ಕೇಮದ್ರದಲ್ಲಿ ಜರಗಿತು.
     ಗ್ರಾ.ಪಂ. ಅಧ್ಯಕ್ಷೆ ಸಿಂಗಾರಿ ಅಧ್ಯಕ್ಷತೆ ವಹಿಸಿದ್ದರು. ರೋಗವಾಹಕ ಆಶ್ರೀತರೋಗಗಳಾದ ಮಲೇರಿಯಾ, ಡೆಂಗ್ಯು, ಚಿಕನ್‌ಗುನ್ಯ,ಫೈಲೇರಿಯಾ ಬಗ್ಗೆ ಮಾಹಿತಿಯನ್ನು ವೈದ್ಯಾಧಿಕಾರಿ ಡಾ| ರೂಪಾ ಪೈ ಮಾಹಿತಿ ನೀಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.
      ಲಾರ್ವಾ ಸಮೀಕ್ಷೆ, ಜ್ವರ ಸಮೀಕ್ಷೆಗೆ ಈಗಾಗಲೇ ತಂಡಗಳು ರಚನೆ ಮಾಡಿರುವ ಬಗ್ಗೆ ಮತ್ತು ಲಾರ್ವ ಸಮೀಕ್ಷೆ ನಡೆಯಲಿರುವ ಕುರಿತು ಮಾಹಿತಿ ನೀಡಿದರು.
      ಜಿ.ಪಂ.ಸದಸ್ಯೆ ಇಂದಿರಾ ಶೆಟ್ಟಿ, ತಾ.ಪಂ.ಸದಸ್ಯ ಎಚ್‌.ಮಂಜಯ್ಯ ಶೆಟ್ಟಿ, ಚಿತ್ತೂರು ಗ್ರಾ.ಪಂ. ಅಧ್ಯಕ್ಷ ಸುರೇಂದ್ರ ಶೆಟ್ಟಿ, , ಹಕೂìರು ಗ್ರಾಮ ಆರೋಗ್ಯ ನೈರ್ಮಲ್ಯ ಸಮಿತಿ ಅಧ್ಯಕ್ಷರು, ಸದಸ್ಯರು, ಸಾಲಾ ಮುಖ್ಯೋಪಾಧ್ಯಾಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ರೋಗವಾಹಕ ಆಶ್ರೀತರೋಗಗಳ ನಿರ್ವಹಣೆ ಹಾಗೂ ನಿಯಂತ್ರಣ ಸಮನ್ವಯ ಸಮಿತಿಯನ್ನು ರಚಿಸಲಾಯಿತು. ಕಿರಿಯ ಆರೋಗ್ಯ ಸಹಾಯಕ ಮಹಮ್ಮದ್‌ ಜಾಫರ್‌ ಸ್ವಾಗತಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com