ಅಂಗನವಾಡಿ ಕಟ್ಟಡ ಉದ್ಘಾಟನೆ ಮತ್ತು ನೋಟ್‌ ಪುಸ್ತಕ ವಿತರಣೆ

ಕುಂದಾಪುರ: ಶಾನ್ಕಟ್ಟು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಅಂಗನವಾಡಿ ಕಟ್ಟಡ ಮತ್ತು ಆವರಣ ಗೋಡೆ ಉದ್ಘಾಟನೆ ಮತ್ತು ನೋಟ್‌ ಪುಸ್ತಕ ವಿತರಣಾ ಸಮಾರಂಭವು ಜರಗಿತು.
      ಬೈಂದೂರು ಶಾಸಕ ಗೋಪಾಲ ಪೂಜಾರಿ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಜಿ.ಪಂ.ಉಪಾಧ್ಯಕ್ಷೆ ಮಮತಾ ಆರ್‌. ಶೆಟ್ಟಿ ಅವರು ಅಂಗನವಾಡಿ ಕಟ್ಟಡ ಉದ್ಘಾಟಿಸಿದರು, ಜಿ.ಪಂ. ಸದಸ್ಯ ಪ್ರಕಾಶ್‌ ಮೆಂಡನ್‌ ಆವರಣ ಗೋಡೆ ಉದ್ಘಾಟಿಸಿದರು ,
       ಮುಖ್ಯ ಅತಿಥಿಗಳಾಗಿ ತಾ.ಪಂ. ಸದಸ್ಯ ಪ್ರದೀಪ ಕುಮಾರ ಶೆಟ್ಟಿ ಕಾವ್ರಾಡಿ , ಅಂಪಾರು ಗ್ರಾ.ಪಂ.ಅಧ್ಯಕ್ಷೆ ಕೃಷ್ಣಾವತಿ ಶೆಟ್ಟಿ , ಗ್ರಾ.ಪಂ ಸದಸ್ಯರಾದ ಉಮೇಶ್‌ ಶೆಟ್ಟಿ , ಗುಲಾಬಿ ಬೋವಿ , ಕುಂದಾಪುರ ವಲಯ ಕ್ಷೇತ್ರ ಶಿಕ್ಷನಾಧಿಕಾರಿ ಗೋಪಾಲ್‌ ಶೆಟ್ಟಿ , ಮಹಿಳಾ ಮತ್ತು ಶಿಶು ಅಭಿವೃದ್ಧಿ ಅಧಿಕಾರಿ ಎಂ.ಬಿ. ಗೌಡ, ಮಾನಂಜೆ ಸಿ.ಎ.ಬ್ಯಾಂಕ್‌ ಮ್ಯಾನೇಜರ್‌ ಜಗನ್ನಾಥ ಶೆಟ್ಟಿ, ಅಂಪಾರು ರೋಟರಿ ಅಧ್ಯಕ್ಷ ಸುಕುಮಾರ ವೈದ್ಯ,ಶಾಲಾ ಎಸ್‌.ಡಿ.ಎಂ.ಸಿ ಅಧ್ಯಕ್ಷ ಭಾಸ್ಕರ್‌ ಪೂಜಾರಿ, ಹಕೂìರು ಮಂಜಯ್ಯಶೆಟ್ಟಿ , ಕಿರಣಕುಮಾರ್‌ ಹೆಗ್ಡೆ , ಅಶೋಕ ನಾಯ್ಕ ಸಂತೋಷ ಕುಮಾರ ಶೆಟ್ಟಿ ಬಲಾಡಿ ಮೊದಲಾದವರು ಉಪಸ್ಥಿತರಿದ್ದರು .
      ಉಮೇಶ್‌ ಶೆಟ್ಟಿ ಸ್ವಾಗತಿಸಿದರು. ಪದ್ಮನಾಭ ಶೆಟ್‌ ಕಾರ್ಯಕ್ರಮ ನಿರೂಪಿಸಿದರು. ಮುಖ್ಯೋಪಧ್ಯಾಯ ಅನಂದಕುಲಾಲ್‌ ಪ್ರಾಸ್ತಾವಿಕವಾಗಿ ಮಾತನಾಡಿದರು.ಶ್ರೀಧರ ಜೋಗಿ ವಂದಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com