ಸಾಮಾಜಿಕ ಚಿಂತನೆಯಿಂದ ಸಮುದಾಯದ ಅಭಿವೃದ್ದಿ ಅಮರನಾಥ ಶೆಟ್ಟಿ

ನಾವುಂದ: ತಲೆ ತಲಾಂತರಗಳಿಂದ ಬಂಟ ಸಮುದಾಯ ಸಮಾಜಕ್ಕೆ ಮಹತ್ತರವಾದ ಕೊಡುಗೆ ನೀಡಿದೆ. ಸಾಮಾಜಿಕ ಮುಂದಾಳತ್ವದ ಜೊತೆಗೆ ಎಲ್ಲರನ್ನು ಒಗ್ಗೂಡಿಸಿ ಬದುಕುವ ಹೆಗ್ಗಳಿಕೆ ಹೊಂದಿದೆ. ಸಾಮಾಜಿಕ ಚಿಂತನೆಯಿಂದ ಸಮಾಜದ ಅಭಿವೃದ್ದಿ ಸಾದ್ಯ ಎಂದು ಮಂಗಳೂರು ಬಂಟರಯಾನೆ ನಾಡವರ ಮಾತ್ರ ಸಂಘದ ಅಧ್ಯಕ್ಷ ಕೆ.ಅಮರನಾಥ ಶೆಟ್ಟಿ ನುಡಿದರು. ಅವರು ನಾಗೂರು ಮಹಾಲಸಾ ಕಲ್ಚರಲ್‌ ಹಾಲ್‌ನಲ್ಲಿ ಜರುಗಿದ ಬಂಟರಯಾನೆ ನಾಡವರ ಉಪಸಂಘ ನಾವುಂದ ವಲಯದ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಹಾಗೂ ವಿದ್ಯಾರ್ಥಿ ವೇತನ ವಿತರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
     ನಾವುಂದ ಬಂಟ ಸಂಘದ ಕಾರ್ಯವೈಖರಿಯನ್ನು ಪ್ರಶಂಸಿದ ಅವರು ಸಮಾಜದ ಕಟ್ಟಕಡೆಯ ವ್ಯಕ್ತಿ ಅಭಿವೃದ್ಧಿಗೊಂಡಾಗ ಮಾತ್ರ ಸಮುದಾಯದ ಅಭಿವೃದ್ಧಿ ಸಾಧ್ಯ .ಸಂಘಟನೆಗಳು ಸಮಾಜಮುಖೀ ದ್ಯೆàಯಗಳನ್ನು ಹೊಂದಿರಬೇಕು ಎಂದರು. ಬೈಂದೂರು ಬಂಟರಯಾನೆ ನಾಡವರ ಸಂಘದ ಅಧ್ಯಕ್ಷ ಬಿ.ಜಗನ್ನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
      ಕುಂದಾಪುರ ಜನಜಾಗƒತಿ ವೇದಿಕೆಯ ಅಧ್ಯಕ್ಷ ಬಿ. ಅಪ್ಪಣ್ಣ ಹೆಗ್ಡೆ ಶುಭಾಶಂಸನೆ ಗೆ„ದರು, ಬೆಂಗಳೂರು ಬಂಟರ ಸಂಘ ಸಮಾಜ ಸೇವಾ ಸಮಿತಿಯ ಅಧ್ಯಕ್ಷ ಎ.ಬಿ. ಶೆಟ್ಟಿ, ಬೆ„ಂದೂರು ಬಂಟರಯಾನೆ ನಾಡವರ ಸಂಘದ ಗೌರವಾಧ್ಯಕ್ಷ ಡಾ. ಎಂ. ಸುಧಾಕರ ಹೆಗ್ಡೆ, ಕುಂದಾಪುರ ಬಂಟರಯಾನೆ ನಾಡವರ ಸಂಘದ ಅಧ್ಯಕ್ಷ ಸುಧಾಕರ ಶೆಟ್ಟಿ ಬಾಂಡ್ಯ, ಗ್ರಾ.ಪಂ. ಅಧ್ಯಕ್ಷ ಸುಬ್ಬಣ್ಣ ಶೆಟ್ಟಿ, ಉದ್ಯಮಿ ವೀರೇಂದ್ರ ಶೆಟ್ಟಿ , ಮುಂಬೆ„ ಬಂಟರ ಸಂಘದ ಜಂಟಿ ಕಾರ್ಯದರ್ಶಿ ಮೋಹನದಾಸ್‌ ಶೆಟ್ಟಿ ಉಳೂ¤ರು, ಸಂಘದ ಅಧ್ಯಕ್ಷ ಜಗದೀಶ ಶೆಟ್ಟಿ, ಗೌರವಾಧ್ಯಕ್ಷ ರಘುರಾಮ ಶೆಟ್ಟಿ ಉಪಸ್ಥಿತರಿದ್ದರು, ಬೆಂಗಳೂರು ವಿಶ್ವವಿದ್ಯಾನಿಲಯದ ಅಸಿಸ್ಟೆಂಟ್‌ ಪೊÅàಫೆಸರ್‌ ಶ್ರೀಮತಿ ವಾಹಿನಿ, ಎ. ಶೆಟ್ಟಿ ನಾವುಂದ ಉಪನ್ಯಾಸ ನೀಡಿದರು.
      ಈ ಸಂದರ್ಭದಲ್ಲಿ ನಾವುಂದ ಬಂಟರ ಸಂಘ ಪಾರ್ವತಿ ಶೆಡ್ತಿ ಉಳ್ಳೂರು ಅವರಿಗೆ ನಿರ್ಮಿಸಿಕೊಟ್ಟ ಮನೆಯ ಕೀಲಿ ಕೈ ಯನ್ನು ಸಂಘದ ಅಧ್ಯಕ್ಷ ಜಗದೀಶ ಶೆಟ್ಟಿ ಅವರು ಹಸ್ತಾಂತರಿಸಿದರು. ಕಾರವಾರ ಜಿಲ್ಲಾ ಸರ್ಜನ್‌ ಡಾ. ಮಂಜುನಾಥ ಶೆಟ್ಟಿ ಹಳಗೇರಿ, ತರೀಕೆರೆ ಪೊಲೀಸ್‌ ಇನ್ಸ್‌ಪೆಕ್ಟರ್‌ ಸಂತೋಷ ಶೆಟ್ಟಿ ಕುದ್ರುಕೋಡು, ಯಕ್ಷಗಾನ ಕಲಾವಿದರಾದ ನರಸಿಂಹ ಶೆಟ್ಟಿ, , ಸಂಜೀವ ಶೆಟ್ಟಿ ಯವರನ್ನು ಸಮ್ಮಾನಿಸಲಾಯಿತು. ಎಸ್‌.ಎಸ್‌.ಎಲ್‌ಸಿ .ಮತ್ತು ಪಿಯುಸಿ ಪರೀಕ್ಷೆಯಲ್ಲಿ ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣರಾದವರಿಗೆ ಹಾಗೂ ಎಸ್‌.ಎಸ್‌.ಎಲ್‌.ಸಿ ಮೇಲ್ಪಟ್ಟು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.
  ಸಂಘದ ಕಾರ್ಯದರ್ಶಿ ಭಾಸ್ಕರ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಬೈಂದೂರು ಬಂಟರ ಸಂಘದ ಕಾರ್ಯದರ್ಶಿ ಕರುಣಾಕರ ಶೆಟ್ಟಿ ಸ್ವಾಗತಿಸಿದರು, ಶಶಿಧರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ಅಶೋಕ ಶೆಟ್ಟಿ ಅರೆಹೊಳೆ ವಂದಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com