ಬೈಂದೂರಿನಲ್ಲಿ ಅಗ್ನಿಶಾಮಕ ಘಟಕ ಆರಂಭಿಸಲು ಆಗ್ರಹ

ಬೈಂದೂರು: ಹಂತ ಹಂತವಾಗಿ ತಾಲೂಕು ಕೇಂದ್ರವಾಗಿ ಬೆಳೆಯುತ್ತಿರುವ ಬೈಂದೂರಿಗೆ ತುರ್ತಾಗಿ ಅಗ್ನಿಶಾಮಕ ಘಟಕವನ್ನು ಪ್ರಾರಂಭಿಸಬೇಕೆಂದು ಇಲ್ಲಿಯ ನಾಗರೀಕರು ಆಗ್ರಹಿಸಿದ್ದಾರೆ.
    ಈ ಪರಿಸರದಲ್ಲಿ ಬೆಂಕಿಯಿಂದ ಅಥವಾ ಇನ್ಯಾವುದಾದರೂ ಅವಗಡ ಸಂಭವಿಸಿದರೆ ಪಕ್ಕದ ಭಟ್ಕಳ ಇಲ್ಲವೇ ಕುಂದಾಪುರದಿಂದ ಅಗ್ನಿಶಾಮಕ ವಾಹನವನ್ನು ಅವಲಂಬಿಸಬೇಕು. 20-30ಕಿ.ಮೀ ದೂರದಿಂದ ಅದು ಬರುವ ತನಕ ಸಮಯ ಮೀರಿರುವುದರಿಂದ ನಷ್ಟ ಹೆಚ್ಚಾಗುತ್ತದೆ ಎಂದು ತಿಳಿಸಿದ್ದಾರೆ.
       ಅಲ್ಲದೇ ಮಹಿಳಾ ಪೋಲಿಸ್ ಠಾಣೆಯ ಅಗತ್ಯತೆ ಬಗ್ಗೆ ಕೂಡಾ ಸಮಯಕ್ಕೆ ಸರಿಯಾಗಿ ಕೆಲಸವಾಗುವುದಿಲ್ಲ.ದಕ್ಷ ಅಧಿಕಾರಿ ಹಾಗೂ ಸಿಬ್ಬಂದಿಗಳ ನೇಮಕ ಮಾಡಬೇಕು. ಸರ್ವೆ ವಿಭಾಗದಲ್ಲಿ ಹಲವು ವರ್ಷಗಳಿಂದ ಇತ್ಯರ್ಥವಾಗದ ಅರ್ಜಿಗಳಿವೆ. ಶಾಲಾ ಮಕ್ಕಳು ಆದಾಯ, ಜಾತಿ ಪ್ರಮಾಣ ಪತ್ರ ಪಡೆಯಲು ದಿನಗಟ್ಟಲೇ ಸರತಿ ಸಾಲಿನಲ್ಲಿ ನಿಂತು ಕಾಯಬೇಕಾದ ಪರಿಸ್ಥಿತಿ ಇದೆ. ಆದ್ದರಿಂದ ಶಾಸಕರು ಹಾಗೂ ಜಿಲ್ಲಾಡಳಿತ ಈ ಕೂಡಲೇ ಇಲ್ಲಿನ ಸಮಸ್ಯೆಗಳಿಗೆ ಸ್ಪಂದಿಸಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸಹಕರಿಸಬೇಕೆಂದು ನಾಗರಿಕ ವೇದಿಕೆ, ಮಾಜಿ ಅಧ್ಯಕ್ಷ ಹಾಗೂ ಸಾಮಾಜಿಕ ಕಾರ್ಯಕರ್ತ ರವೀಂದ್ರ ಶ್ಯಾನುಭಾಗ್ ತಿಳಿಸಿದ್ದಾರೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com