ಖಾರ್ವಿಯಾನೆ ಹರಿಕಾಂತ ಮಹಾಜನ ಸಂಘದ ಮಹಾಸಭೆ

ಬೈಂದೂರು: ಖಾರ್ವಿ ಯಾನೆ ಹರಿಕಾಂತ ಮಹಾಜನ ಸಂಘ ಸಮಾಜಮುಖಿ ಚಿಂತನೆಗಳನ್ನು ಹೊಂದಿದ ಸಂಘವಾಗಿದ್ದು ಸಂಘದ ದ್ಯೇಯೋದ್ಧೇಶಗಳು  ಸಮಾಜದವರ ಅಭಿವೃದ್ಧಿಗೆ ಪೂರಕವಾಗಿದೆ. ಸಂಘಟಿತ ಸಮಾಜದಿಂದ ಮಾತ್ರ ಸಮುದಾಯದ ಅಭಿವೃದ್ಧಿ ಸಾಧ್ಯ ಎಂದು ಉಪ್ಪುಂದ ಕರ್ನಾಟಕ ಖಾರ್ವಿ ಯಾನೆ ಹರಿಕಾಂತ ಮಹಾಜನ ಸಂಘದ ಅಧ್ಯಕ್ಷ ಎಂ. ಎಸ್. ಶೇಷ ಖಾರ್ವಿ ಹೇಳಿದರು.
    ನಾಗೂರು ಶ್ರೀ ಗೋಪಾಲ ಕೃಷ್ಣ ಕಲಾಮಂದಿರದಲ್ಲಿ  ಜರುಗಿದ ಕರ್ನಾಟಕ ಖಾರ್ವಿ ಯಾನೆ ಹರಿಕಾಂತ ಮಹಾಜನ ಸಂಘ ಉಪ್ಪುಂದ ಇದರ ಮಹಾಸಭೆ ಹಾಗೂ ವಿದ್ಯಾರ್ಥಿ ವೇತನ ಕಾರ್‍ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
    ನಿವೃತ್ತ ಉಪನ್ಯಾಸಕ ಟಿ.ಕೆ. ಖಾರ್ವಿ ಮರವಂತೆ, ಕರಾವಳಿ ಸಂಪ್ರದಾಯಿಕ ಮೀನುಗಾರಿಕಾ ಸಹಕಾರಿ ಸಂಘದ ಅಧ್ಯಕ್ಷ ಎಂ. ಶಂಕರ ಖಾರ್ವಿ ಮರವಂತೆ, ಸಂಘದ ಉಪಾಧ್ಯಕ್ಷ ಹಾಗೂ ಉಡುಪಿ ಬಂದರು ಹಾಗೂ ಮೀನುಗಾರಿಕಾ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಎನ್. ಎಂ. ಖಾರ್ವಿ, ಸಂಘದ ಗೌರವಾಧ್ಯಕ್ಷ ಬಿ. ಅಣ್ಣಪ್ಪ ಖಾರ್ವಿ, ಮೀನುಗಾರಿಕಾ ಇಲಾಖೆಯ ನಿವೃತ ಸಹಾಯಕ ನಿರ್ದೇಶಕ ಸಿ.ಎಸ್. ಖಾರ್ವಿ, ಕ್ಯಾಪ್ಟನ್ ಎನ್.ಎಸ್. ಖಾರ್ವಿ, ಬೈಂದೂರಿನ ಪಶು ವೈದ್ಯಾಧಿಕಾರಿ ಡಾ. ನಾಗರಾಜ, ಸಂಘದ ಕಾರ್ಯದರ್ಶಿ ಕೆ. ಮುತ್ತಯ್ಯ ಖಾರ್ವಿ, ಕೋಶಾಧಿಕಾರಿ ಸುರೇಶ ಖಾರ್ವಿ ಮರವಂತೆ ಉಪಸ್ಥಿತರಿದ್ದರು.
    ಈ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 80% ಅಂಕ ಪಡೆದ ಹಾಗೂ ಪಿಯುಸಿಯ ಕಲಾ ಮತ್ತು ವಾಣಿಜ್ಯ ವಿಭಾಗದ ಪರೀಕ್ಷೆಯಲ್ಲಿ 70% ಅಂಕ ಪಡೆದ ಹಾಗೂ ವಿಜ್ಞಾನ ವಿಭಾಗದಲ್ಲಿ 65% ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.
    ಸಂಘದ ವಾರ್ಷಿಕ ಆಯವ್ಯಯವನ್ನು ಗೋಪಾಲ ಖಾರ್ವಿ ಮಂಡಿಸಿದರು. ಜಯರಾಮ ಮಂಕಿಕರ್ ಕಾರ್ಯಕ್ರಮ ನಿರೂಪಿಸಿ, ಪ್ರವೀಣ್ ಮರವಂತೆ ವಂದಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com