ರಾ.ಹೆ. ವಿಸ್ತರಣೆ ತಲ್ಲೂರು - ಉಪ್ಪಿನಕುದ್ರು ಜಂಕ್ಷನ್‌ ಉಳಿಸಲು ನಾಗರಿಕರ ಆಗ್ರಹ

ತಲ್ಲೂರು: ಕುಂದಾಪುರ - ಕಾರವಾರ ರಸ್ತೆ ವಿಸ್ತರಣೆ ಪ್ರಕ್ರಿಯೆ ಚುರುಕುಗೊಂಡಿದ್ದು, ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಮಾಯವಾಗಲಿರುವ ತಲ್ಲೂರು - ಉಪ್ಪಿನಕುದ್ರು ಜಂಕ್ಷನ್‌ ಅನ್ನು ಉಳಿಸಿಕೊಡುವಂತೆ ಸ್ಥಳೀಯ ನಾಗರಿಕರು ಜನಪ್ರತಿನಿಧಿಗಳನ್ನು ಆಗ್ರಹಿಸಿದ್ದಾರೆ.
        ಈ ಜಂಕ್ಷನ್‌ ಸರ್ಕಲ್‌ ಆಗಿ ರೂಪುಗೊಳ್ಳುವ ಸಾಧ್ಯತೆ ಬಲವಾಗಿದೆ. ರಸ್ತೆ ನೇರಗೊಳಿಸುತ್ತೇವೆ ಎಂದು ಹೇಳುತ್ತಿರುವ ಅಧಿಕಾರಿಗಳು ಅಧಿಕ ಖಾಸಗಿ ಜಾಗವಿರುವ ಪಶ್ಚಿಮ ಪ್ರದೇಶದಲ್ಲಿ 60 ಮೀಟರ್‌ ಭೂಸ್ವಾಧೀನ ಮಾಡಿ ಅಧಿಕ ಸರಕಾರಿ ಜಾಗವಿರುವ ಪೂರ್ವದಿಕ್ಕಿನಲ್ಲಿ 22.5 ಮೀಟರ್‌ ಮಾತ್ರ ಭೂಸ್ವಾಧೀನ ಮಾಡಲು ಪ್ರಕ್ರಿಯೆ ಆರಂಭಿಸಿದ್ದಾರೆ. ಇದರಿಂದ ಪಶ್ಚಿಮ ಭಾಗದ ಅಂಗಡಿ ಮುಂಗಟ್ಟುಗಳು ನಿರ್ನಾಮವಾಗಲಿದ್ದು, ಈ ಕ್ರಮವನ್ನು ಅಂಗಡಿ ಮಾಲಕರು ರಿಕ್ಷಾ ಚಾಲಕ-ಮಾಲಕರು ಹಾಗೂ ನಾಗರಿಕರು ಖಂಡಿದ್ದಾರೆ.
      ಇಂತಹ ಸಮಸ್ಯೆ ಇರುವ ಎಲ್ಲ ಕಡೆ ರಸ್ತೆ ಸಂಪೂರ್ಣ ನೇರವಾಗಿಲ್ಲ. ಈ ಬಗ್ಗೆ ಕೇಂದ್ರ ಸಾರಿಗೆ ಸಚಿವ ಆಸ್ಕರ್‌ ಫೆರ್ನಾಂಡಿಸ್‌, ಶಾಸಕರು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com