ಕುಂದಾಪುರ: ದ್ರಾವಿಡ ಬ್ರಾಹ್ಮಣ ಪರಿಷತ್ ಕುಂಭಾಶಿ ವಲಯದ ವತಿಯಿಂದ ಕುಂಭಾಶಿಯ ಸಿದ್ಧಿವಿನಾಯಕ ಸಭಾಂಗಣದಲ್ಲಿ ವಲಯದ ವ್ಯಾಪ್ತಿಯಲ್ಲಿ ಬರುವ ಎಸ್ಎಸ್ಎಲ್ಸಿ ಮತ್ತು ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಭುವನಾ ಅವಭೃತ ಮತ್ತು ವಿಭಾ ಟಿ.ವಿ. ಅವರಿಗೆ ಪ್ರತಿಭಾ ಪುರಸ್ಕಾರ ಹಾಗೂ ವಲಯದ ಪ್ರಾಥಮಿಕ ಶಾಲಾ ವಿಪ್ರ ವಿದ್ಯಾರ್ಥಿಗಳಿಗೆ ಪುಸ್ತಕ ಮತ್ತು ಲೇಖನಿ ಸಾಮಾಗ್ರಿಗಳನ್ನು ವಿತರಿಸಲಾಯಿತು.
ಮುಖ್ಯ ಅತಿಥಿಗಳಾದ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ ಅಧ್ಯಕ್ಷ ಶ್ರೀನಿವಾಸ ಹೆಬ್ಟಾರ ಮಾತನಾಡಿ ಕುಂಭಾಶಿ ವಲಯವು ಉತ್ತಮ ಕೆಲಸಗಳನ್ನು ಮಾಡುತ್ತಾ ಮುನ್ನೆಡೆಯುತ್ತಿದೆ. ಇನ್ನು ಹೆಚ್ಚಿನ ಸಾಧನೆ ಮಾಡಲಿ ಎಂದು ಹಾರೈಸಿದರು. ಶ್ರೀಧರ ಉಪಧ್ಯಾಯ ಕುಂಭಾಶಿ ಮಾತನಾಡಿ ವಲಯವು ಪ್ರತಿ ಎರಡು, ಮೂರು ತಿಂಗಳಿಗೊಮ್ಮೆ ಸಭೆ ಸಂಘಟಿಸಿ ವಿಪ್ರ ವರ್ಗದ ಶ್ರೇಯಸ್ಸಿಗೆ ಕೊಡುಗೆ ನೀಡಲಿ ಎಂದು ಹಾರೈಸಿದರು.
ವಲಯಾಧ್ಯಕ್ಷ ಸದಾಶಿವ ಚಾತ್ರ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ತಾಲೂಕು ಪರಿಷತ್ ಗೌರವಾಧ್ಯಕ್ಷ ಯು. ಲಕ್ಷ್ಮೀನಾರಾಯಣ ವೈದ್ಯ, ತಾಲೂಕು ವಿಪ್ರ ಮಹಿಳಾ ಘಟಕದ ಅಧ್ಯಕ್ಷೆ ಶಾಂತ ಗಣೇಶ ಶುಭ ಹಾರೈಸಿದರು. ವಲಯದ ಗೌರವಾಧ್ಯಕ್ಷ ರಾಮಚಂದ್ರ ಉಪಧ್ಯಾಯ ಸ್ವಾಗತಿಸಿದರು. ಕೋಶಾಧಿಕಾರಿ ಶ್ರೀರಾಮ ಹತ್ವಾರ ವಿದ್ಯಾರ್ಥಿಗಳ ಪಟ್ಟಿಯನ್ನು ವಾಚಿಸಿದರು. ಕಾರ್ಯದರ್ಶಿ ಗಣಪತಿ ಅವಭೃತ ವಂದಿಸಿದರು. ವಲಯದ ಉಪಾಧ್ಯಕ್ಷ ಜಗದೀಶ ರಾವ್ ಕುಂಭಾಶಿ ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment