ಜೂ.10 ರಂದು ಗ್ರೀನ್‌ ಇಂಡಿಯಾ ಮೂವ್‌ಮೆಂಟ್‌ ಉದ್ಘಾಟನೆ

ಕುಂದಾಪುರ: ಅವನತಿಯ ಅಂಚಿನಲ್ಲಿರುವ ಸಸ್ಯಸಂಕುಲದ ಉಳಿವು, ಗಿಡಮರಗಳ ಬಗೆಗೆ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಲ್ಲಿ ಅರಿವನ್ನು ಉಂಟುಮಾಡುವ ಮೂಲಕ ಪರಿಸರ ಸಂರಕ್ಷಣೆಯನ್ನು ಕೈಗೊಳ್ಳುವ ಉದ್ದೇಶದಿಂದ ಆರಂಭವಾಗಿರುವ ಗ್ರೀನ್‌ ಇಂಡಿಯಾ  ಮೂವ್‌ಮೆಂಟ್‌ನ ಉದ್ಘಾಟನಾ ಸಮಾರಂಭ ಹಟ್ಟಿಯಂಗಡಿಯ ಶ್ರೀ ಸಿದ್ಧವಿನಾಯಕ ವಸತಿ ಶಾಲೆಯ ಆವರಣದಲ್ಲಿ ಬೆಳಗ್ಗೆ 10.30ಕ್ಕೆ ನಡೆಯಲಿದೆ.
      ಹಿರಿಯ ಸಾಹಿತಿ ಉಪ್ಪುಂದ ಚಂದ್ರಶೇಖರ ಹೊಳ್ಳ ಅವರು ಗ್ರೀನ್‌ ಇಂಡಿಯಾ ಮೂವ್‌ಮೆಂಟನ್ನು ಉದ್ಘಾಟಿಸಲಿದ್ದಾರೆ. ವೇದಮೂರ್ತಿ ಶ್ರೀ ರಾಮಚಂದ್ರ ಭಟ್ಟ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಹೊನ್ನಾವರದ ಶಾಂತಿ ನಾಯಕ ರಚಿಸಿದ ತಂಬುಳಿ ಪುಸ್ತಕದ ಬಿಡುಗಡೆಯೂ ಆಗಲಿದೆ.
          ಕಾರ್ಯಕ್ರಮಕ್ಕೆ ನಾಡಿನ ಪ್ರಸಿದ್ಧ ಜಾನಪದ ತಜ್ಞ ಡಾ|ಎನ್‌.ಆರ್‌. ನಾಯಕ್‌, ಬೆಂಗಳೂರು ವಿಶ್ವವಿದ್ಯಾನಿಲಯದ ನಿವೃತ್ತ ಗ್ರಂಥಾಲಯಾಧಿ ರಾಮಸ್ವಾಮಿ ಗೌಡ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಗ್ರೀನ್‌ ಇಂಡಿಯಾ ಮೂವ್‌ಮೆಂಟ್‌ನ ಅಧ್ಯಕ್ಷ ಮುನಿಯಾಲ್‌ ಗಣೇಶ್‌ ಶೆಣೈ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com