ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿ: ಡಾ. ವಿಶ್ವೇಶ್ವರಯ್ಯ

ಕುಂದಾಪುರ: ಸ್ವಯಂ ಪ್ರೇರಿತರಾಗಿ ರಕ್ತದಾನದ ಮೂಲಕ ಮಾನವನ ಜೀವ ಉಳಿಸುವುದಲ್ಲದೆ ಉತ್ತಮ ಆರೋಗ್ಯ ಗಳಿಸಿಕೊಳ್ಳಿ ಎಂದು ಅಂಕದ ಕಟ್ಟೆ ಸರ್ಜನ್ ಆಸ್ವತ್ರೆಯ ವೈದ್ಯ ಡಾ. ವಿಶ್ವೇಶ್ವರಯ್ಯ ಹೇಳಿದರು.
ಅವರು ರವಿವಾರ ಚಂದನ ಯುವಕ ಮಂಡಲ ಬೀಜಾಡಿ-ಗೋಪಾಡಿ, ಕುಂದಾಪುರ ತಾಲೂಕು ಮಡಿವಾಳರ ಸಂಘ ಹಾಗೂ ರಕ್ತ ನಿಧಿ ಜಿಲ್ಲಾ ಆಸ್ವತ್ರೆ ಉಡುಪಿ ಇವರ ಸಹಯೋಗದೊಂದಿಗೆ ನಡೆದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ತಾಲೂಕು ಮಡಿವಾಳರ ಸಂಘದ ಅಧ್ಯಕ್ಷ ಹೆಚ್. ಶಂಕರ ಅಧ್ಯಕ್ಷತೆ ವಹಿಸಿದ್ದರು.
  ಜಿಲ್ಲಾ ಆಸ್ಪತ್ರೆಯ ವೈದ್ಯರಾದ ಶರತ್ ಕುಮಾರ್ ಮಾತನಾಡಿ,ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದಲ್ಲಿ  ಹಲವಾರು ಮಾರಕ ರೋಗಗಳನ್ನು ತಡೆಗಟ್ಟಲು ಸಾದ್ಯವಾಯಿತು. ಗಂಡಸರು ಮೂರು ತಿಂಗಳಿಗೆ ಹೆಂಗಸರು ನಾಲ್ಕು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ಮತ್ತೆ ಪುನಃ ಮನುಷ್ಯನ ದೇಹದಲ್ಲಿ ರಕ್ತ ಉತ್ಪತ್ತಿಯಾಗಿ ಲವಲವಿಕೆಯಿಂದ ಇರಬಹುದು. ಹೀಗೆ ಮಾನವನ ಸೇವೆಯಿಂದ ಹಲ್ತ್ ಕೇರ್ ಕಾರ್ಖಾನೆಯಾಗದೆ ಹೆಲ್ತ್ ಕೇರ್ ಸವೀಸ್ ಆಗಬೇಕು ಎಂದರು. 
ಕುಂದಾಪುರ ಆಳ್ವಾಸ್ ನುಡಿಸಿರಿ ಘಟಕದ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಮಾತನಾಡಿ, ನಿಸ್ವಾರ್ಥ ಸೇವಾ ಮನೋಭಾವನೆಯಿಂದ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದಲ್ಲಿ ಮಾನವ ಕಲ್ಯಾಣ ಸಾದ್ಯ ಎಂದರು.
ಕೋಟೇಶ್ವರ ಕೋಟಿಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿ ಪ್ರಭಾಕರ್ ಶೆಟ್ಟಿ ಉಪಸ್ಥಿತರಿದ್ದರು. ಚಂದನ ಯುವಕ ಮಂಡಲದ ಅಧ್ಯಕ್ಷ ಗಿರೀಶ್ ಉಪಾಧ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು.  ಸುಮ ಪ್ರಾರ್ಥಿಸಿ, ಗೋಪಿನಾಥ ಸ್ವಾಗತಿಸಿದರು. ಶಿಕ್ಷಕ ರವಿ ಕಟ್ಕೆರೆ ಕಾರ್ಯಕ್ರಮ ನಿರೂಪಿಸಿದರು. ಜಿ.ಆರ್. ಗೋಪಾಲ ವಂದಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com