ಉಪ್ಪುಂದ ರಕ್ತದಾನ ಶಿಬಿರ

ಉಪ್ಪುಂದ: ಜಿ.ಶಂಕರ ಪ್ಯಾಮಿಲಿ ಟ್ರಸ್ಟ್‌(ರಿ) ಅಂಬಲಪಾಡಿ ಉಡುಪಿ, ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲೆ , ಬೈಂದೂರು-ಶಿರೂರು ಘಟಕ ರಕ್ತನಿಧಿ, ಕೆ.ಎಂ.ಸಿ ಮಣಿಪಾಲ ಶ್ರೀ ಜಟ್ಟಿಗೇಶ್ವರ ಮಿತ್ರ ಮಂಡಳಿ(ರಿ) ಉಪ್ಪುಂದ ಇದರ ಜಂಟಿ ಆಶ್ರಯದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಶಂಕರ ಕಲಾ ಮಂದಿರದಲ್ಲಿ ನಡೆಯಿತು.
        ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಉಡುಪಿ ಜಿಲ್ಲಾ ಕ.ಸಾ.ಪ ಮಾಜಿ ಅಧ್ಯಕ್ಷ ಯು.ಚಂದ್ರಶೇಖರ ಹೊಳ್ಳ , ಡಾ.ಜಿ.ಶಂಕರರವರ ಸಮಾಜಮುಖೀ ಚಿಂತನೆಗಳಿಂದ ಜಿಲ್ಲೆಯಲ್ಲಿ ಮಹತ್ವಪೂರ್ಣ ಕ್ರಾಂತಿಯಾಗಿದೆ. ಸಂಪತ್ತಿನ ಸದ್ವಿನಿಯೋಗ ಸಮಾಜ ಸೇವೆಯು ತೃಪ್ತಿ ನೀಡುತ್ತದೆ. ರಕ್ತದಾನ ಶಿಬಿರಗಳಿಂದಾಗಿ ಅನೇಕ ವಿಧದಲ್ಲಿ ಸಮಾಜ ಉಪಯೋಗವನ್ನು ಪಡೆಯುತ್ತದೆ ಎಂದರು. ವೇದಿಕೆಯಲ್ಲಿ ಉಡುಪಿ ಜಿಲ್ಲಾ ಮೊಗವೀರ ಯುವ ಸಂಘಟನೆಯ ಅಧ್ಯಕ್ಷ ಜಯ.ಸಿ.ಕೋಟ್ಯಾನ್‌, ಮಾಜಿ ಜಿ.ಪಂ ಸದಸ್ಯ ಮದನ್‌ ಕುಮಾರ್‌, ಬಿ.ಅಣ್ಣಪ್ಪ ಖಾರ್ವಿ, ರಾಮ ಬೈಂದೂರು,ಜಟ್ಟಿಗೇಶ್ವರ ಮಿತ್ರ ಮಂಡಳಿ ಅಧ್ಯಕ್ಷ ಡಾ.ಮೋಹನ್‌ದಾಸ್‌ ಉಪಸ್ಥಿತರಿದ್ದರು. ಈ ಸಂಧರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ವಿಜೇತ ನಾಗರಾಜ್‌ ಖಾರ್ವಿ ಕುಂದಾಪುರರವರನ್ನು ಸಮ್ಮಾನಿಸಲಾಯಿತು.
    ಕೃಷ್ಣ ಮೊಗವೀರ ಸ್ವಾಗತಿಸಿದರು. ಪಾಂಡು ಮೊಗವೀರ ಕಾರ್ಯಕ್ರಮ ನಿರೂಪಿಸಿ, ಜನಾರ್ಧನ ಖಾರ್ವಿ ವಂದಿಸಿದರು
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com