ಹೆಮ್ಮಾಡಿ ಪ.ಪೂ.ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆ

ಕುಂದಾಪುರ: ಪರಿಸರ ರಕ್ಷಿಸಿ ಎಂಬ ಬರೀ ಘೋಷಣೆ ಸಾಲದು. ಸ್ವಯಂ ಪ್ರೇರಿತರಾಗಿ ಪರಿಸರದ ಬಗ್ಗೆ ವಿಶೇಷ ಕಾಳಜಿ ವಹಿಸಿದರೆ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ದೊರೆಯಲು ಸಾದ್ಯ ಎಂದು ಕುಂದಾಪುರ ಸ.ಪೂ.ಕಾಲೇಜಿನ ಜೀವಶಾಸ್ತ್ರ ಉಪನ್ಯಾಸಕ ರವೀಂದ್ರ ಉಪಾಧ್ಯ ಹೇಳಿದರು.
         ಅವರು ಹೆಮ್ಮಾಡಿ ಜನತಾ ಸ್ವತಂತ್ರ ಪ.ಪೂ.ಕಾಲೇಜಿನ ಪಂಚಗಂಗಾ ಇಕೋ ಕ್ಲಬ್ ಆಶ್ರಯದಲ್ಲಿ ವಿಶ್ವಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಉಪನ್ಯಾಸ ನೀಡುತ್ತಾ ಮಾತನಾಡಿದರು.
        ಜೀವ ಇಲ್ಲದ ಬೆಳಕು ಜೀವಿಗಳಿಗೆ ಶಕ್ತಿ ನೀಡಿ ಸಂಪೂರ್ಣ ಹತೋಟಿಗೆ ತರುತ್ತದೆ. ಮಿತಿಮೀರಿದ ಪರಿಸರ ಮಾಲಿನ್ಯದಿಂದಾಗಿ  ಕಾರ್ಬನ್ ಡೈಆಕ್ಸೈಡ್ ಬೆಳಕನ್ನು ಹೀರಿ ವಾತಾವರಣ ಬಿಸಿ ಯಾಗುತ್ತದೆ. ಇದರಿಂದ ಭೂಮಿಯ ಮೇಲಿನ ಉಷ್ಣತೆಯ ಪ್ರಮಾಣ ದಿನದಿಂದ ದಿನಕ್ಕೆ  ಜಾಸ್ತಿಯಾಗಿ ಮಳೆಯ ಸಮಾನ ಪ್ರಮಾಣದಲ್ಲಿ ಏರು ಪೇರಾಗುತ್ತದೆ. ಬೆಳೆಗಳಿಗೆ ಸಿಂಪಡಿಸುವ  ಕೀಟನಾಶಕ ರಾಸಾಯನಿಕ ವಸ್ತುಗಳಿಂದಾಗಿ ಮನುಷ್ಯನು ಸೇವಿಸುವ ಆಹಾರದ ಮೂಲಕ ದೇಹಕ್ಕೆ ಸೇರಿದಾಗ ಗುಣಪಡಿಸಲಾಗದ ಹೊಸ ಹೊಸ ರೋಗವು ಕಾಣಿಸಿಕೊಂಡಿದೆ. ನಗರೀಕರಣದ ಭರಾಟೆ ಹಾಗೂ ನಾನಾ ಕಾರಣಗಳಿಂದ ಭೂಮಿಯ ಸಮತಟ್ಟುಮಾಡಲು ಹೋರಟಾಗ ಕೆಲವೊಂದು ಗಿಡಗಳು ಆಯಾ ಪರಿಸರಕ್ಕೆ ಹೊಂದಿಕೊಳ್ಳಲಾಗದೆ ವಿನಾಶದ ಅಂಚಿನಲ್ಲಿದೆ. ಪರಿಸರ ಸಂರಕ್ಷಣೆಯ ಬಗ್ಗೆ ಕಾಳಜಿ ಇಲ್ಲದಿದ್ದರೆ ಮಾನವಕುಲದ ವಿನಾಶಕ್ಕೂ ಭೀತಿ ತಂದೊಡ್ಡಿದೆ ಎಂದರು.
ಸಭೆಯ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಸೀತಾರಾಮ ಮಧ್ಯಸ್ಥ ವಹಿಸಿದ್ದರು. ಅವರು ಮಾತನಾಡಿ, ಹೆಚ್ಚುತ್ತಿರುವ ಜನಸಂಖ್ಯೆಯ ಪ್ರಮಾಣಕ್ಕೆ ಸೆಡ್ಡು ಹೊಡೆಯುವಂತೆ ವಾಯು, ಜಲ,ಶಬ್ದ ಮಾಲಿನ್ಯ ತಾರಕಕ್ಕೇರಿದೆ, ನಾವು ಪ್ರಕೃತಿಯಿಂದ ಪಡೆದ ಆಹಾರ ಪದಾರ್ಥವನ್ನು ಯೋಚಿಸಿ- ಸೇವಿಸಿ-ಉಳಿಸಿ ತತ್ವದಂತೆ ಅದು ಪೋಲಾಗುವುದನ್ನು ತಡೆದು ಮುಂದಿನ ಪೀಳಿಗೆಗೂ ಉತ್ತಮ ಆಹಾರ ಸಿಗುವಂತೆ ಪರಿಸರ ಸಂರಕ್ಷಣೆಯ ಕಾಳಜಿ ಪ್ರತಿಯೊಬ್ಬರಲ್ಲಿಯೂ ಇರಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.
       ಹಿರಿಯ ಉಪನ್ಯಾಸಕ ಬಿ.ಬೋಜರಾಜ ಶೆಟ್ಟಿ ಸಭೆಯಲ್ಲಿ ಉಪಸ್ಥಿತರಿದ್ದರು. ಅರುಣ ಕುಮಾರ ಸ್ವಾಗತಿಸಿದರು. ಇಂಚರ ಕಾರ್ಯಕ್ರಮ ನಿರೂಪಿಸಿ, ಕಸಿರಾ ವಂದಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com