ಗ್ರೀನ್ ಇಂಡಿಯಾ ಮೂವ್‍ಮೆಂಟ್‍ನಿಂದ ಬಿಲ್ವ ಆಂದೋಲನ

ಕುಂದಾಪುರ: ಹಸಿರು ಸಮೃದ್ಧಿ ಮತ್ತು ಪರಿಸರ ಸಂರಕ್ಷಣೆಯ ಉದ್ದೇಶದಿಂದ ಕಾರ್ಯಾರಂಭವಾಗಿರುವ ಗ್ರೀನ್ ಇಂಡಿಯಾ ಮೂವ್‍ಮೆಂಟ್  ಸಾಮೂಹಿಕ ಬಿಲ್ವ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈಶ್ವರನಿಗೆ ಪ್ರಿಯವೆಂದು ಭಾವಿಸಲಾಗಿರುವ ಬಿಲ್ವ ಪತ್ರೆಗೆ ಅಪಾರ ಬೇಡಿಕೆ ಇದ್ದರೂ ಬಿಲ್ವ ವೃಕ್ಷಗಳ ಸಂಖ್ಯೆ ಕ್ಷೀಣವಾಗಿದೆ. ಮಧುಮೇಹಕ್ಕೆ ಬಿಲ್ವ ಪತ್ರೆ ಒಳ್ಳೆಯ ಮದ್ದು. ಪಾರಂಪರಿಕ ವೈದ್ಯ ಪದ್ಧತಿ ಮತ್ತು ಆಯುರ್ವೇದ ಔಷಧಗಳ ತಯಾರಿಕೆಯಲ್ಲಿ ಬಿಲ್ವ ಅತ್ಯಗತ್ಯ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಿಲ್ವದ ಗಿಡಗಳನ್ನು ಸಾರ್ವಜನಿಕರಿಗೆ, ದೇವಸ್ಥಾನಗಳಿಗೆ, ಶಾಲಾ ಕಾಲೇಜುಗಳಿಗೆ ಹಂಚಲು ಗ್ರೀನ್ ಇಂಡಿಯಾ ಮೂವ್‍ಮೆಂಟ್ ಕಾರ್ಯಕ್ರಮವನ್ನು ರೂಪಿಸಿದೆ. ಗಿಡಗಳನ್ನು ಬೆಳೆಸಲು ಆಸಕ್ತರಿರುವವರು, ಗಿಡಗಳ ಪ್ರಾಯೋಜಕರಾಗಬಯಸುವವರು ಸಂತೋಷ್ ಕೋಣಿ - 9341839965 ಅಥವಾ ಮುನಿಯಾಲ್ ಗಣೇಶ್ ಶೆಣೈ – 9448869963, ಮೋಹನ್ ಆಚಾರ್ಯ ಕೋಟೇಶ್ವರ - 9448027028 ಇವರನ್ನು ಸಂಪರ್ಕಿಸಲು ಕೋರಲಾಗಿದೆ. 

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com