ಜ್ಞಾನಗಂಗಾ ವಿದ್ಯಾರ್ಥಿಗಳಿಂದ ಶ್ರೀ ಕಾಶೀ ಶ್ರೀಗಳ ಭೇಟಿ

ಗಂಗೊಳ್ಳಿ: ಇಲ್ಲಿನ  ನಿನಾದ ಸಂಸ್ಥೆಯ ವತಿಯಿಂದ ನಡೆಯುತ್ತಿರುವ ಜ್ಞಾನಗಂಗಾ ಕಾರ್ಯಕ್ರಮದ ವಿದ್ಯಾರ್ಥಿಗಳು ಶ್ರೀ ಕಾಶೀ ಮಠದ ಶ್ರೀಮದ್‌ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರನ್ನು ಭೇಟಿ ಮಾಡಿದರು.
      ಜ್ಞಾನಗಂಗಾ ಕಾರ್ಯಕ್ರಮದ ಸಂಕ್ಷಿಪ್ತ ವರದಿಯನ್ನು ಶ್ರೀಗಳಿಗೆ ಸಲ್ಲಿಸಿದ ನಿನಾದ ಸಂಸ್ಥೆಯ ಸದಸ್ಯರು ಹಾಗೂ ವಿದ್ಯಾರ್ಥಿಗಳು ಶ್ರೀಗಳ ಆಶೀರ್ವಾದ ಬೇಡಿದರು. ಕಾರ್ಯಕ್ರಮವು ಉತ್ತಮ ರೀತಿಯಲ್ಲಿ ನಡೆಯುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ ಶ್ರೀಗಳು ವಿದ್ಯಾರ್ಥಿಗಳೊಂದಿಗೆ ಮುಕ್ತ ಸಂವಾದ ನಡೆಸಿದರು. ಕಾರ್ಯಕ್ರಮದ ಅಧ್ಯಕ್ಷ ಕೆ.ಕೃಷ್ಣ ಭಟ್‌, ಕಾರ್ಯದರ್ಶಿ ಜಿ.ಗಣೇಶ ನಾಯಕ್‌, ನಿನಾದ ಸಂಸ್ಥೆಯ ಅಧ್ಯಕ್ಷ ಎಂ.ಮುಕುಂದ ಪೈ, ಸದಸ್ಯರಾದ ಸುದರ್ಶನ ಆಚಾರ್ಯ, ಕೆ.ಅಕ್ಷಯ್‌ ಶೆಣೆ„ ಮೊದಲಾದವರು ಉಪಸ್ಥಿತರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com