ಕುಂದಾಪುರ: ಜಿ.ಪಂ.ಉಡುಪಿ, ಪ್ರಾಥಮಿಕ ಆರೋಗ್ಯ ಕೇಂದ್ರ ಕೋಡಿ ಹಾಗೂ ಆರೋಗ್ಯ ರಕ್ಷಾ ಸಮಿತಿ ಇವರ ಜಂಟಿ ಆಶ್ರಯದಲ್ಲಿ ಕೋಡಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಲೇರಿಯಾ ಮಾಸಾಚರಣೆಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಲೇರಿಯಾ ಮಾಸಾಚರಣೆಯ ಕರಪತ್ರವನ್ನು ಪುರಸಭೆಯ ಸದಸ್ಯ ಪ್ರಭಾಕರ ಶೇರೆಗಾರ್ ಬಿಡುಗಡೆಗೊಳಿಸಿದರು. ತಾಲೂಕು ಆರೋಗ್ಯಾಧಿಕಾರಿ ಡಾ|ರಾಮ್ರಾವ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಮಲೇರಿಯಾ ಮತ್ತು ಡೆಂಗ್ಯು ಹರಡುವ ವಿದಾನಗಳು, ಅದರ ಲಕ್ಷಣಗಳು, ಮುಂಜಾಗ್ರತಾ ಕ್ರಮಗಳು, ಸೊಳ್ಳೆ ಉತ್ಪತ್ತಿ ತಾಣಗಳು ಅದರ ನಿರ್ಮೂಲನದ ಬಗ್ಗೆ ಮಾಹಿತಿ ನೀಡಿದರು. ಜೂನ್, ಜುಲೈ,ಆಗಸ್ಟ್ ಮೂರು ತಿಂಗಳುಗಳ ಕಾಲ ನಡೆಯುವಂತಹ ಸಮೀಕ್ಷೆ ಬಗ್ಗೆ ಮಾಹಿತಿ ನೀಡಿದರು. ಗ್ರಾಮಸ್ಥರು ಅದಕ್ಕೆ ಸಹಕರಿಸಬೇಕು ಎಂದು ತಿಳಿಸಿದರು.
ತಾ.ಪಂ. ಸದಸ್ಯ ಮಂಜು ಬಿಲ್ಲವ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪುರಸಭಾ ಸದಸ್ಯ ಸಂದೀಪ್, ವೈದ್ಯಾಧಿಕಾರಿ ಡಾ|ಉಮೇಶ್ ನಾಯಕ್ ಅವರು ಮಲೇರಿಯಾ ಮಾಸಾಚರಣೆಯ ಬಗ್ಗೆ ಮಾಹಿತಿ ನೀಡಿದರು.
ತಂತ್ರಜ್ಞೆ ವಿನೋದಾ ಶೆಟ್ಟಿ ಸ್ವಾಗತಿಸಿದರು. ಆರೋಗ್ಯ ಸಹಾಯಕಿ ಜಯಾ ಜಿ.ವಿ. ಕಾರ್ಯಕ್ರಮ ನಿರ್ವಹಿಸಿದರು. ಆರೋಗ್ಯ ಸಹಾಯಕಿ ಶೀಲಾ ಫೆರ್ನಾಂಡೀಸ್ ವಂದಿಸಿದರು.
0 comments:
Post a Comment