ಸೋಮಕ್ಷತ್ರಿಯ ಗಾಣಿಗ ಸಂಘ: ವಿಧ್ಯಾರ್ಥಿಗಳಿಗೆ ಪುಸ್ತಕ ಹಾಗೂ ಬ್ಯಾಗ್ ವಿತರಣೆ

ಬೈಂದೂರು: ಸಂಘಗಳು ಸಮಾಜದ ವಿಧ್ಯಾರ್ಥಿಗಳಿಗೆ ಉಚಿತ ಪುಸ್ತಕ ಮತ್ತು ಬ್ಯಾಗ್ ನೀಡಿದಾಕ್ಷಣ ಪೋಷಕರ ಜವಬ್ದಾರಿ ಮುಗಿಯುದಿಲ್ಲ. ಮಕ್ಕಳ ಬೆನ್ನಲುಬಾಗಿ ಅವರ ವಿದ್ಯಾರ್ಥಿ ಜೀವನದ ಬಗ್ಗೆ ಗಮನಹರಿಸಿ ಉತ್ತಮ ನಾಗರೀಕರನ್ನಾಗಿ ರೂಪಿಸುವಲ್ಲಿ ಪೋಷಕರು ಹೆಚ್ಚಿನ ಕಾಳಜಿ ವಹಿಸಬೇಕಿದೆ ಎಂದು ನಿವ್ರತ್ತ ಉಪಾನ್ಯಾಸಕರಾದ ಅನಂತ ಗಾಣಿಗ ಹೇಳಿದರು.
     ರೋಟರಿ ಭವನದಲ್ಲಿ ಸೋಮಕ್ಷತ್ರಿಯ ಗಾಣಿಗ ಸಂಘದ ಶಿರೂರು. ಬೈಂದೂರು ಮತ್ತು ತಗ್ಗರ್ಸೆ ವ್ಯಾಪ್ತಿಯ ಸಮಾಜದ ಒಂದರಿಂದ ಹತ್ತನೆ ತರಗತಿಯ ವಿಧ್ಯಾರ್ಥಿಗಳಿಗೆ ಪುಸ್ತಕ ಹಾಗೂ ಬ್ಯಾಗ್ ವಿತರಿಸಿ ಮಾತನಾಡಿದರು. ಬೈಂದೂರು ಗಾಣಿಗ ಸಂಘ ಅಧ್ಯಕ್ಷರಾದ ನಾಗರಾಜ ಗಾಣಿಗ ಅಧ್ಯಕ್ಷತೆಯನ್ನು ವಹಿಸಿದ್ದರು. ಈ ಸಂಧರ್ಭದಲ್ಲಿ ಹಿರಿಯ ಸಮಾಜ ಸೇವಕ ಹೆರಿಯ ಗಾಣಿಗರಿಗೆ ಸನ್ಮಾನಿಸಲಾಯಿತು. 
      ಕಾರ್‍ಯಕ್ರಮದ ಮುಖ್ಯ‌ಅತಿಥಿಗಳಾಗಿ ಕೊಲ್ಲೂರು ರಮೇಶ್ ಗಾಣಿಗ, ಶ್ರೀಕಾಂತ ಶೆಟ್ಟಿ ಶಿರೂರು ಉಪಸ್ಥಿತರಿದ್ದರು. ಗಣೇಶ್ ಗಾಣಿಗ ಸ್ವಾಗತಿಸಿ, ಸುಬ್ರಹ್ಮಣ್ಯ ಗಾಣಿಗ ಕಾರ್‍ಯಕ್ರಮ ನಿರೂಪಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com